Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB Squad: ಹೇಗಿದೆ ಆರ್‌ಸಿಬಿ ಟೀಮ್? ಯಾವ ವಿಭಾಗ ಬಲಾಢ್ಯ? ಈ ಬಾರಿ ಕಪ್‌ ಗೆಲ್ಲತ್ತುದಾ?

ಬಹುನಿರೀಕ್ಷಿತ ಐಪಿಎಲ್‌ ಮೆಗಾ ಹರಾಜು ಮುಗಿದಿದೆ. ಈ ಹರಾಜಿನಲ್ಲಿ ಭಾಗವಾಹಿಸಿರುವ ಐಪಿಎಲ್‌ 10 ತಂಡಗಳು ಆಟಗಾರರನ್ನು ಖರೀದಿಸಿವೆ. ಈ ವೇಳೆ ಆರ್‌ಸಿಬಿ ಸಹ ಹಲವು ಸ್ಟಾರ್ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ವೇಳೆ ಹಲವು ಅಚ್ಚರಿಯ ಮುಖಗಳಿಗೆ ಆರ್‌ಸಿಬಿ ಮಣೆ ಹಾಕಿದೆ. ಹಾಗಿದ್ದರೆ ಈ ಬಾರಿ ಆರ್‌ಸಿಬಿ ಯಾವ ಸಂಯೋಜನೆಯಿಂದ ಕಣಕ್ಕೆ ಇಳಿಯಲಿದೆ? ತಂಡ ಹೇಗೆ ಕಾಣುತ್ತಿದೆ ಎಂಬ ಬಗ್ಗೆ ವಿವರ ಇಲ್ಲಿದೆ.

83 ಕೋಟಿ ರೂಪಾಯಿಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಿದ್ದ ಆರ್‌ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಬೌಲಿಂಗ್‌ ವಿಭಾಗದ ಸಮಸ್ಯೆಯನ್ನು ಆರ್‌ಸಿಬಿ ಬಹುದಿನಗಳ ಕಾಲ ಅನುಭವಿಸಿತ್ತು. ಈಗ ಕೊಂಚ ಬೌಲಿಂಗ್‌ನಲ್ಲಿ ವಿವಿಧತೆ ಕಾಣುತ್ತದೆ. ಆದರೆ ವಿಶ್ವ ದರ್ಜೆಯ ಸ್ಪಿನ್ ಬೌಲರ್‌ಗಳು ಇಲ್ಲದೇ ಇರುವುದು ನಿಜಕ್ಕೂ ಮತ್ತೊಮ್ಮೆ ಆರ್‌ಸಿಬಿ ಪೆಟ್ಟು ನೀಡಿದೆ. ಅಲ್ಲದೆ ಎಡಗೈ ಬ್ಯಾಟರ್‌ಗಳು ಟಾಪ್‌ ಅರ್ಡರ್‌ನಲ್ಲಿ ಮಿಸ್ ಹೊಡೆದಂತೆ ಕಾಣುತ್ತಿದೆ. ದೇವದತ್ ಪಡಿಕ್ಕಲ್‌ಗೆ ಅವಕಾಶ ನೀಡಿದರೆ ಕೊಂಚ ಬ್ಯಾಲೆನ್ಸ್ ಆಗಬಹುದು.

RCB Squad 2024 Strengths Weaknesses and IPL Cup Dreams

ಆರ್‌ಸಿಬಿ ಬ್ಯಾಟಿಂಗ್ ಹೇಗಿದೆ?

ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರನ್ನು ಖರೀದಿಸುವ ಅವಕಾಶ ಇತ್ತು. ನಿಶ್ಚಿತವಾಗಿ ಕೆಎಲ್ ರಾಹುಲ್, ರಿಷಭ್ ಪಂತ್, ಇಶಾನ್‌ ಕಿಶನ್‌, ಶ್ರೇಯಸ್ ಅಯ್ಯರ್‌ ಸೇರಿದಂತೆ ಹಲವು ಸ್ಟಾರ್ ಮುಖಗಳಿಗೆ ಆರ್‌ಸಿಬಿ ಬಿಡ್ ಮಾಡಲಿಲ್ಲ. ಇದರಿಂದ ಆರ್‌ಸಿಬಿ ಲೆಕ್ಕಾಚಾರ ಏನು ಎಂಬುದು ಅಭಿಮಾನಿಗಳಿಗೆ ಅರ್ಥ ಆಗಿರಲಿಲ್ಲ. ಆರ್‌ಸಿಬಿ ಫುಲ್ ಆಂಡ್ ಫುಲ್ ಹೊಸ ಮುಖಗಳೊಂದಿಗೆ ಈ ಬಾರಿ ಕಣಕ್ಕೆ ಇಳಿಯುವ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆ ಬ್ಯಾಟಿಂಗ್‌ನಲ್ಲಿ ಮಿಡ್ಲ್ ಆರ್ಡರ್‌ ಬಲಾಡ್ಯ ಪಡಿಸುವಲ್ಲಿ ಹಣವನ್ನು ಹೂಡಿದೆ. ಈ ಆಟಗಾರರ ಪ್ರದರ್ಶನದ ಮೇಲೆ ಆರ್‌ಸಿಬಿ ಕಪ್‌ ಗೆಲುವಿನ ಆಸೆ ನಿರ್ಧರಿಸಲಾಗುತ್ತದೆ.

ಬ್ಯಾಟ್ಸ್‌ಮನ್ಸ್‌: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.

ದಿನೇಶ್‌ ಕಾರ್ತಿಕ್ ಬದಲಿಗೆ ಯಾರು?

ದಿನೇಶ್‌ ಕಾರ್ತಿಕ್‌ ಆರ್‌ಸಿಬಿಯಲ್ಲಿ ವಿಕೆಟ್‌ ಕೀಪರ್‌, ಫಿನಿಷರ್ ರೂಪದಲ್ಲಿ ಕಾಣಿಸಿಕೊಂಡಿದ್ದರು. ಈಗ ಆರ್‌ಸಿಬಿ ವಿಕೆಟ್‌ ಕೀಪರ್ ಹುಡುಕಿಕೊಳ್ಳುವಲ್ಲಿ ಸಫಲವಾಗಿದೆ. ಆರ್‌ಸಿಬಿ ಎಂದಿನಂತೆ ಒಬ್ಬ ದೇಶಿಯ ವಿಕೆಟ್ ಕೀಪರ್‌ ಹಾಗೂ ಒಬ್ಬ ವಿದೇಶಿ ವಿಕೆಟ್‌ ಕೀಪರ್‌ಗೆ ಮಣೆ ಹಾಕಿದೆ. ಆದರೆ ಇವರಿಬ್ಬರೂ ವಿಕೆಟ್‌ ಕೀಪರ್‌ ಬ್ಯಾಟರ್‌ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಫಿನಿಷರ್‌ ರೋಲ್‌ಗೆ ಇವರು ಸೂಟ್ ಆಗುವುದಿಲ್ಲ.

RCB Squad 2024 Strengths Weaknesses and IPL Cup Dreams

ವಿಕೆಟ್ ಕೀಪರ್ಸ್‌: ಫಿಲ್ ಸಾಲ್ಟ್, ಜಿತೇಶ್ ಶರ್ಮಾ.

ಟಿ20 ಸ್ಟಾರ್ಸ್‌ಗೆ ಮಣೆ

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ತನ್ನ ಆಲ್‌ರೌಂಡರ್‌ ಕೋಟಾವನ್ನು ಬಲಾಢ್ಯಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬೆವರು ಹರಿಸಿದೆ. ಆದರೆ, ಆರ್‌ಸಿಬಿ ಪಡೆದ
ಆಲ್‌ರೌಂಡರ್‌ಗಳು, ನಾಲ್ಕು ಓವರ್‌ ಕೋಟ್‌ ಕಂಪ್ಲೀಟ್ ಮಾಡುವ ಕ್ಷಮತೆ ಇದೆಯಾ ಎಂಬುದೇ ಪ್ರಶ್ನೆ ಮೂಡುವಂತೆ ಮಾಡಿದೆ. ಆದರೆ ಬೌಲಿಂಗ್‌ನಲ್ಲಿ ವಿವಧತೆಯನ್ನು ತರಲು ಇವರಿಗೆ ಮಣೆ ಹಾಕಲಾಗಿದೆ.

ಆಲ್‌ರೌಂಡರ್ಸ್‌: ಲಿಯಾಮ್ ಲಿವಿಂಗ್‌ಸ್ಟೋನ್ (ಸ್ಪಿನ್), ಕೃನಾಲ್ ಪಾಂಡ್ಯ (ಸ್ಪಿನ್), ಸ್ವಪ್ನಿಲ್ ಸಿಂಗ್ (ಸ್ಪಿನ್), ರೊಮಾರಿಯೊ ಶೆಫರ್ಡ್ (ಪೇಸ್), ಜೇಕಬ್ ಬೆಥೆಲ್ (ಸ್ಪಿನ್), ಮೋಹಿತ್ ರಥಿ (ಸ್ಪಿನ್).

ಆರ್‌ಸಿಬಿ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸ್ಪಿನ್ ಬೌಲಿಂಗ್‌ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿತ್ತು. ಈ ಬಾರಿಯೂ ಈ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಆರ್‌ಸಿಬಿ ಇಬ್ಬರು ಯುವ ಸ್ಪಿನ್ ಬೌಲರ್‌ಗಳಿಗೆ ಮಣೆ ಹಾಕಿದೆ. ಆದರೆ ಒಬ್ಬ ಎದುರಾಳಿ ಪಡೆಯಲ್ಲಿ ನಡುಕ ಹುಟ್ಟಿಸಬಲ್ಲ ಪ್ಲೇಯರ್ ಇಲ್ಲದೇ ಇರುವು ನೋವು ಅಭಿಮಾನಿಗಳಲ್ಲಿ ಇದೆ.

ಸ್ಪಿನ್ನರ್ಸ್‌: ಸುಯಶ್ ಶರ್ಮಾ, ಅಭಿನಂದನ್ ಸಿಂಗ್

ಹೇಗಿದೇ ಬೌಲಿಂಗ್‌ ವಿಭಾಗ?

ಕಳೆದ ಕೆಲವು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ತಲೆ ನೋವು ಹೆಚ್ಚಿಸಿದ್ದ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಸಿಬಿ ಹಣವನ್ನು ಹೂಡಿದೆ. ಈ ಬಾರಿ ಆರ್‌ಸಿಬಿ ಬೌಲಿಂಗ್ ವಿಭಾಗ ಕೊಂಚ ಎದುರಾಳಿಗಳಿಗೆ ನಡುಕ ಹುಟ್ಟಿಸಬಹುದು. ಬೌಲಿಂಗ್‌ನಲ್ಲಿ ವೇರಿಯೇಷನ್‌ ಹಾಗೂ ಬಿಗುವಿನ ದಾಳಿ, ವೇಗದ ದಾಳಿ ನಡೆಸಬಲ್ಲ ನಡೆಸುವ ಬೌಲರ್‌ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗ: ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ಸಲಾಂ, ನುವಾನ್ ತುಷಾರ, ಲುಂಗಿ ಎನ್‌ಗಿಡಿ.

Story first published: Tuesday, November 26, 2024, 14:13 [IST]
Other articles published on Nov 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+