For Quick Alerts
ALLOW NOTIFICATIONS  
For Daily Alerts
 

RCB: ಆರ್‌ಸಿಬಿಯಲ್ಲಿನ ಬ್ಯಾಟರ್ಸ್‌, ಬೌಲರ್ಸ್‌, ಆಲ್‌-ರೌಂಡರ್ಸ್‌, ವಿಕೆಟ್‌ ಕೀಪರ್‌ಗಳ ಪಟ್ಟಿ

IPL 2026 RCB: ಐಪಿಎಲ್‌ 19ನೇ ಆವೃತ್ತಿ ಮಾರ್ಚ್‌ 28ರಿಂದ ಆರಂಭ ಆಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಎಷ್ಟು ಜನ ಬ್ಯಾಟರ್ಸ್, ಬೌಲರ್ಸ್‌, ಆಲ್‌ ರೌಂಡರ್ಸ್‌, ವಿಕೆಟ್‌ ಕೀಪರ್‌ಗಳಿದ್ದಾರೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅನುಭವ ಮತ್ತು ಯುವ ಶಕ್ತಿಯ ಸಮತೋಲಿತ ಆಟಗಾರರ ಮಿಶ್ರಣದಿಂದ ಕೂಡಿದೆ. ಬಲಿಷ್ಠ ಪಡೆಯೊಂದಿಗೆ ಮಾರ್ಚ್ 28ರಂದು ಚಿನ್ನಸ್ವಾಮಿಯಲ್ಲಿ ಎಸ್‌ಆರ್‌ಎಚ್‌ ತಂಡವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

RCB Squad Breakdown IPL 2026 Full List of Batters Bowlers All-Rounders and Wicket keepers

ಆರ್‌ಸಿಬಿ ಬ್ಯಾಟಿಂಗ್ ವಿಭಾಗ

ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗವು ಅನುಭವ ಮತ್ತು ಯುವ ಪ್ರತಿಭೆಗಳ ಸಮ್ಮಿಶ್ರಣವಾಗಿದೆ. ಆರಂಭಿಕರಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ಫಿಲ್ ಸಾಲ್ಟ್ ಕಣಕ್ಕಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದಾರ್, 3ನೇ ಕ್ರಮಾಂಕಕ್ಕಾಗಿ ವೆಂಕಟೇಶ್ ಅಯ್ಯರ್ ಮತ್ತು ದೇವದತ್ ಪಡಿಕ್ಕಲ್ ನಡುವೆ ಪೈಪೋಟಿ ಇದೆ. ಇನ್ನು ವಿಕೆಟ್ ಕೀಪರ್ ಜವಾಬ್ದಾರಿಯನ್ನು ಜಿತೇಶ್ ಶರ್ಮಾ ಅವರು ನಿರ್ವಹಿಸಲಿದ್ದು, ತಂಡದ ಮುಖ್ಯ ಫಿನಿಶರ್ ಪಾತ್ರವನ್ನೂ ಇವರೇ ನಿಭಾಯಿಸಲಿದ್ದಾರೆ. ಯುವ ಆಟಗಾರ ಜೇಕಬ್ ಬೆಥೆಲ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

ಆಲ್-ರೌಂಡರ್ ಮತ್ತು ಬೌಲಿಂಗ್ ವಿಭಾಗ

ಕೃನಾಲ್ ಪಾಂಡ್ಯ ಮತ್ತು ರೊಮಾರಿಯೋ ಶೆಫರ್ಡ್ ತಂಡದ ಪ್ರಮುಖ ಆಲ್‌ರೌಂಡರ್‌ಗಳಾಗಿದ್ದಾರೆ. ಇವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗವನ್ನು ಅನುಭವಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ಎಡಗೈ ವೇಗಿ ಯಶ್ ದಯಾಳ್ ಮತ್ತು ವಿದೇಶಿ ವೇಗಿ ಜೇಕಬ್ ಡಫಿ (ಜೋಶ್ ಹ್ಯಾಜಲ್‌ವುಡ್ ಬದಲಿಗೆ) ಸಿದ್ಧರಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ಸುಯೇಶ್ ಶರ್ಮಾ ಗೂಗ್ಲಿಗಳ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.

ಬ್ಯಾಟರ್‌ಗಳ ಪಟ್ಟಿ

* ರಜತ್ ಪಾಟಿದಾರ್
* ವಿರಾಟ್ ಕೊಹ್ಲಿ
* ದೇವದತ್ ಪಡಿಕ್ಕಲ್

ಆಲ್‌-ರೌಂಡರ್ಸ್‌

* ಟಿಮ್ ಡೇವಿಡ್
* ಜೇಕಬ್ ಬೆಥೆಲ್
* ರೊಮಾರಿಯೊ ಶೆಫರ್ಡ್
* ಕೃನಾಲ್ ಪಾಂಡ್ಯ
* ವೆಂಕಟೇಶ್ ಅಯ್ಯರ್
* ಕನಿಷ್ಕ್ ಚೌಹಾಣ್
* ಮಂಗೇಶ್ ಯಾದವ್
* ಸಾತ್ವಿಕ್ ದೇಸ್ವಾಲ್
* ವಿಕಿ ಓಸ್ಟ್ವಾಲ್
* ವಿಹಾನ್ ಮಲ್ಹೋತ್ರಾ

ಬೌಲರ್‌ಗಳ ಪಟ್ಟಿ

* ಭುವನೇಶ್ವರ್ ಕುಮಾರ್
* ಯಶ್ ದಯಾಳ್
* ಜೋಶ್ ಹ್ಯಾಜಲ್‌ವುಡ್‌
* ನುವಾನ್ ತುಷಾರ
* ರಾಸಿಖ್ ಸಲಾಮ್ ದಾರ್
* ಸುಯೇಶ್ ಶರ್ಮಾ
* ಸ್ವಪ್ಲಿನ್ ಸಿಂಗ್
* ಜಾಕೋಬ್ ಡಫಿ
* ಅಭಿನಂದನ್ ಸಿಂಗ್

ವಿಕೆಟ್‌ ಕೀಪರ್ಸ್‌

* ಜಿತೇಶ್ ಶರ್ಮಾ
* ಜೋರ್ಡಾನ್ ಕಾಕ್ಸ್
* ಫಿಲ್ ಸಾಲ್ಟ್‌

ಒಟ್ಟಿನಲ್ಲಿ ಹೇಳುವುದಾದರೆ, ಕಳೆದ ಬಾರಿಯಂತೆ ಈ ಬಾರಿ ಕೂಡ ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಟ್ರೋಫಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದೆ. ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜರು ಸಹ ಆರ್‌ಸಿಬಿ ಈ ಬಾರಿಯೂ ಟ್ರೋಫಿ ಎತ್ತುವ ತಂಡಗಳ ಸಾಲಿನಲ್ಲಿ ಇದೆ ಅಂತಲೂ ಭವಿಷ್ಯ ನುಡಿದಿದ್ದಾರೆ. ರಜತ್ ಪಡೆ ಇದನ್ನು ನಿಜ ಮಾಡಲಿದೆಯಾ ಎಂದು ಕಾದುನೋಡಬೇಕಿದೆ.

Story first published: Monday, March 23, 2026, 12:43 [IST]
Other articles published on Mar 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+