Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಹೇಗಿದೆ ಆರ್‌ಸಿಬಿ ತಂಡ? ಯಾರೆಲ್ಲಾ ಆಟಗಾರರನ್ನು ಕೊಂಡಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಗೆ ಹರಾಜು ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ಆರ್‌ಸಿಬಿ ತಂಡ ಮತ್ತೊಮ್ಮೆ ಚಾಂಪಿಯನ್‌ ಪಟ್ಟಕ್ಕೇರಿಸಲು ಬೇಕಿದ್ದ ಆಟಗಾರರನ್ನು ಬೆಂಗಳೂರು ತಂಡ ಸೇರಿಸಿಕೊಂಡಿದೆ. ಸ್ಟಾರ್‌ ಅನ್‌ ಕ್ಯಾಪ್ಡ್‌ ಆಟಗಾರ್ತಿಯರಿಗೆ ಆರ್‌ಸಿಬಿ ಹಣದ ಹೊಳೆಯನ್ನು ಹರಿಸಿದೆ. ಈ ಮೂಲಕ ಆರ್‌ಸಿಬಿ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ನಿರತವಾಗಿದೆ. ಖಾಲಿ ಇರುವ ನಾಲ್ಕು ಸ್ಲಾಟ್‌ ಫಿಲ್ ಮಾಡಿಕೊಳ್ಳಲು ಆರ್‌ಸಿಬಿ 1.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿರುವ ಪ್ರೇಮಾ ರಾವತ್ ಅವರನ್ನು ಕೊಳ್ಳಲು ಹಣದ ಹೊಳೆಯನ್ನು ಹರಿಸಿತು. ಇವರ ಮೂಲ ಬೆಲೆ 10 ಲಕ್ಷ ರೂಪಾಯಿ ಇದ್ದು, ಇವರ ಬೆಲೆ ನೋಡು ನೋಡುತ್ತಲೆ ಇವರ ಬೆಲೆ ಆಗಸದೆತ್ತರಕ್ಕೆ ಹೋಗುತ್ತಲೆ ಸಾಗಿತು. ಇವರನ್ನು ಕೊಳ್ಳಲು ಡೆಲ್ಲಿ ಹಾಗೂ ಆರ್‌ಸಿಬಿ ತಂಡಗಳ ನಡುವೆ ಜಿದ್ದಾಜಿದ್ದು ಕಂಡು ಬಂದಿತು. ಇವರ ಮೇಲೆ ಭರವಸೆ ಇಟ್ಟು ಆರ್‌ಸಿಬಿ ಹಣವನ್ನು ಹೂಡಿತು. ಪರಿಣಾಮ ಪ್ರೇಮಾ ರಾವತ್‌ಗೆ ಆರ್‌ಸಿಬಿ 1.20 ಕೋಟಿ ನೀಡಿ ಬಾಜಿ ಗೆದ್ದಿತು.

RCB Squad for WPL 2025 Full List of Players Bought and Retained

ನಾಲ್ಕು ಆಟಗಾರರ ಖರೀದಿ

ಬೆಂಗಳೂರು ತಂಡ ಡಬ್ಲ್ಯುಪಿಎಲ್‌ ಮಿನಿ ಹರಾಜಿನಲ್ಲಿ ಜೋಶಿತಾ, ರಾಘ್ವಿ ಬಿಸ್ಟ್, ಜಾಗರವಿ ಪವಾರ್ ಅವರನ್ನು ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡ ಆಟಗಾರರು: ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನಿಕ್ಸ್, ಏಕ್ತಾ ಬಿಶ್ತ್, ಡಿಹಿಕಾನಿ ವ್ಯತ್ಜ್, ಡಿಹಿಕಾನಿ ಕ್ರಾಸ್, (ಯುಪಿ ವಾರಿಯರ್ಸ್‌ರಿಂದ ಟ್ರೇಡ್ ಮಾಡಲಾಗಿದೆ)

ಆರ್‌ಸಿಬಿ ಕಳೆದ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈಗ ಮತ್ತೊಮ್ಮೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ದೃಷ್ಟಿಯಿಂದ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟಿದೆ. ಎರಡನೇ ಆವೃತ್ತಿಯ ಮಹಿಳಾ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಫುಲ್‌ ಖುಷ್ ಆಗುವಂತೆ ಮಾಡಿದೆ. ಇನ್ನು ಸ್ಮೃತಿ ಮಂಧನಾ ಅವರ ಮುಂದಾಳತ್ವದಲ್ಲಿ ಆರ್‌ಸಿಬಿ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇ ಏರುವ ಕನಸು ಕಾಣುತ್ತಿದೆ.

Story first published: Sunday, December 15, 2024, 18:14 [IST]
Other articles published on Dec 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+