ತಮಿಳುನಾಡು ಸಿಎಂಗೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿಶೇಷ ಉಡುಗೊರೆ
ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಜೋಸೆಫ್ ವಿಜಯ್ ಅವರು ಶುಕ್ರವಾರ ವಿಶೇಷ ಉಡುಗೊರೆಯನ್ನು ಪಡೆದಿದ್ದಾರೆ. ಈ ಉಡುಗೊರೆಯನ್ನು ನೋಡಿದ ಬಳಿಕ ನಿಜಕ್ಕೂ ಅವರ ಮುಖದಲ್ಲಿ ಸಂತಸ ಮನೆ ಮಾಡಿದೆ. ಹಾಗಿದ್ದರೆ ಅವರಿಗೆ ಉಡುಗೊರೆ ನೀಡಿದ್ದು ಯಾರು? ಉಡುಗೊರೆಯಲ್ಲಿ ಏನಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಎಂಆರ್‌ಎಫ್ ಕಂಪನಿಯ ತಂಡವು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ ಸಹಿ ಇರುವ ಕ್ರಿಕೆಟ್ ಬ್ಯಾಟ್ ಅನ್ನು ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಅವರಿಗೆ ನೀಡಿದ್ದಾರೆ. ಈ ಬ್ಯಾಟ್ ಹಿಡಿದು ಸಿಎಂ ಫೋಟೋಗೆ ಪೋಸ್ ನೀಡಿದ್ದಾರೆ. ಭೇಟಿಯ ವೇಳೆ ಎಂಆರ್‌ಎಫ್ ಕಂಪನಿ ಉನ್ನತ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಎಂಆರ್‌ಎಫ್ ಕಂಪನಿ ವಿಶೇಷ ಉಡುಗೊರೆ ನೀಡಿದೆ. ಈ ಫೋಟೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ಚರ್ಚೆಗೆ ಕಾರಾಣವಾಗಿದೆ.

ವಿಶೇಷ ಉಡುಗೊರೆ
ವೈರಲ್ ಆಗುತ್ತಿರುವ ಫೋಟೋದಲ್ಲಿ ವಿಜಯ್ ಬಿಳಿ ಶರ್ಟ್ ಹಾಗೂ ಸೂಟ್ ಧರಿಸಿರುವುದು ಕಂಡು ಬಂದಿದೆ. ಇವರ ಹೆಗಲ ಮೇಲೆ ಶಾಲನ್ನು ಸಹ ಕಾಣಬಹುದಾಗಿದೆ. ಫೋಟೋದಲ್ಲಿ ಅವರು ಕೈಯಲ್ಲಿ ಬ್ಯಾಟ್ ಹಿಡಿದು ಮುಗುಳ್ನಗುತ್ತಿರುವುದು ಕಂಡುಬಂದಿದೆ. ವಿಜಯ್ ಅವರಿಗೆ ಇತ್ತೀಚೆಗೆ ಹಲವು ವಿಶೇಷ ಉಡುಗೊರೆಗಳು ಸಿಕ್ಕಿವೆ. ಅದರಲ್ಲಿ ಇದು ಸಹ ಒಂದಾಗಿದೆ. ವಿಜಯ್ ಕ್ರಿಕೆಟ್‌ನ ದೊಡ್ಡ ಪ್ರೇಮಿಯೂ ಹೌದು. ಈ ಉಡುಗೊರೆ ಅವರಿಗೆ ಸ್ಮರಣೀಯವಾಗಿದ್ದು, ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನೂ ತೋರಿಸುತ್ತದೆ.
ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು ಅವರು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದ ನಂಬರ್ ಪ್ಲೇಟ್‌ನ ಫ್ರೇಮ್ ಮಾಡಿದ ಫೋಟೋ ನೀಡಿದ್ದರು. ಈ ಕಾರಿನ ನಂಬರ್ ಪ್ಲೇಟ್‌ನಲ್ಲಿ TN 07 CM 2026 ಎಂದು ಬರೆಯಲಾಗಿತ್ತು.
ವಿಜಯ್ ಸಾಧನೆ
ಚಲನಚಿತ್ರ ನಿರ್ಮಾಣ ಹಿನ್ನೆಲೆಯ ಕುಟುಂಬದಿಂದಲೇ ಬಂದ ವಿಜಯ್ ತಮಿಳುನಾಡಿನ ಖ್ಯಾತ ನಟ. ಇವರ ತಂದೆ ಎಸ್.ಎ. ಚಂದ್ರಶೇಖರ್ ಕೂಡ ನಿರ್ದೇಶಕ. ವಿಜಯ್ ಅವರು 1984ರಲ್ಲಿ ಬಾಲ್ಯ ನಟನಾಗಿ ವೆಟ್ರಿ' ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದರು. 1992 ರಲ್ಲಿ ನಾಳೈಯ ತೀರ್ಪು ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. ಇವರಿಗೆ ಕೊಯಮತ್ತೂರು ಮಾಪಿಳ್ಳೈ, ಪೂವೇ ಉನಕ್ಕಾಗಿ ಚಿತ್ರಗಳಿಂದ ದೊಡ್ಡ ಯಶಸ್ಸು ಸಿಕ್ಕಿತು.
ದೀರ್ಘಕಾಲ ಬಣ್ಣದ ಲೋಕದ ರಾಜನಂತೆ ಮೆರೆದ ವಿಜಯ್ ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು 2024ಲ್ಲಿ ಸ್ಥಾಪಿಸಿದರು. 2026 ರ ಚುನಾವಣೆಯಲ್ಲಿ ವಿಜಯ್ ಭರ್ಜರಿ ಜಯ ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿಯಾದರು
ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇವರು ಆಡಿದ 14 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 557 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 1 ಶತಕ ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications