Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

The Hundred Men's Competition: RCB ಸ್ಟಾರ್ ಆಟಗಾರ ಅರ್ಧಶತಕ

ದಿ ಹಂಡ್ರೆಡ್‌ ಮೆನ್ಸ್‌ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವನ್ನು 1 ವಿಕೆಟ್‌ಗಳಿಂದ ಮಣಿಸಿದ ಸದರ್ನ್ ಬ್ರೇವ್ ಜಯ ಸಾಧಿಸಿದೆ. ಈ ಮೂಲಕ ಸದರ್ನ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ಪರ ಮ್ಯಾಟಿ ಹರ್ಸ್ಟ್ (2) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡುವ ಜವಾಬ್ದಾರಿ ಫಿಲ್‌ ಸಾಲ್ಟ್‌ ಹಾಗೂ ಜೋಸ್‌ ಬಟ್ಲರ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಜೋಸ್ ಬಟ್ಲರ್‌ 18 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 22 ರನ್‌ ಬಾರಿಸಿದರು. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಹೆನ್ರಿಕ್ ಕ್ಲಾಸೆನ್‌ 15 ಹಾಗೂ ಮಾರ್ಕ್‌ ಚಾಂಪಮೆನ್‌ 22 ರನ್ ಬಾರಿಸಿ ಮಿಂಚಿದರು.

RCB Star Phil Salt Shines But Southern Brave Defeat Manchester Originals

ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿ ಅಬ್ಬರಿಸಿರುವ ಫಿಲ್‌ ಸಾಲ್ಟ್‌, ಈ ಟೂರ್ನಿಯಲ್ಲಿ ಅಬ್ಬರಿಸಿದರು. ಇವರು 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್‌ ಬಾರಿಸಿದರು. ಪರಿಣಾಮ ಮ್ಯಾಂಚೆಸ್ಟರ್ ಒರಿಜಿನಲ್ಸ್ 100 ಎಸೆತಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 131 ರನ್‌ ಕಲೆ ಹಾಕಿತು. ಸದರ್ನ್ ಬ್ರೇವ್ ಪರ ಟೈಲ್ಸ್ ಮಿಲ್ಸ್‌ 22 ರನ್‌ ನೀಡಿ 3 ವಿಕೆಟ್‌ ಪಡೆದು ಮಿಂಚಿದರು.

ಸದರ್ನ್ ಬ್ರೇವ್ ಜಯ

ಲ್ಯೂಸ್ ಡು ಪ್ಲೂಯ್ 20, ಜೇಸನ್ ರಾಯ್ 30, ಲಾರಿ ಇವಾನ್ಸ್ 13, ಕ್ರೇಗ್ ಓವರ್ಟನ್ 18 ರನ್‌ ಬಾರಿಸಿದರು. ಆದರೆ ಈ ಇನಿಂಗ್ಸ್‌ನ್ನು ದೊಡ್ಡ ಮೊತ್ತಕ್ಕೆ ಕನ್ವರ್ಟ್ ಮಾಡುವಲ್ಲಿ ವಿಫಲರಾದರು. ಉಳಿದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಸದರ್ನ್ ಬ್ರೇವ್ ಪರ ಯಾವೊಬ್ಬ ಬ್ಯಾಟರ್‌ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಅಂತಿಮವಾಗಿ ಸದರ್ನ್ ಬ್ರೇವ್ 99 ಎಸೆತಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 133 ರನ್‌ ಸಿಡಿಸಿ ಜಯ ಸಾಧಿಸಿತು.

ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಸ್ಕಾಟ್ ಕರಿ 4, ಸೋನಿ ಬೇಕರ್, ನೂರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದು ಅಬ್ಬರಿಸಿದರು. ಮ್ಯಾಂಚೆಸ್ಟರ್ ಒರಿಜಿನಲ್ಸ್ ಆಡಿದ ಮೊದಲ ಪಂದ್ಯದಲ್ಲಿ ಜಯ ಸಧಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸದರ್ನ್ ಬ್ರೇವ್ ತಂಡದ ಟೈಲ್ಸ್ ಮಿಲ್ಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

Story first published: Thursday, August 7, 2025, 10:31 [IST]
Other articles published on Aug 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+