ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಅಂಗಳದಲ್ಲಿ ಚಿನ್ನದಂತಹ ಇನ್ನಿಂಗ್ಸ್ ಕಟ್ಟಿದರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನೈಜ ಆಟವನ್ನು ಆಡಿದರು. ಈ ಮೂಲಕ ಎದುರಾಳಿಗಳ ಮೇಲೆ ಒತ್ತಡವನ್ನು ಹೇರುವಲ್ಲಿ ಸಫಲರಾದರು.
ವಿರಾಟ್ ಕೊಹ್ಲಿ ಸೋಮವಾರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಪ್ರವೇಶಿಸಿದಾಗಲೇ ಅಭಿಮಾನಿಗಳಲ್ಲಿ ಜೋಶ್ ತುಂಬಿತ್ತು. ನೆಚ್ಚಿನ ಪ್ಲೇಯರ್ ಆಟ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಮೊದಲ ಓವರ್‌ನಿಂದಲೇ ತಮ್ಮ ಕಲಾತ್ಮಕ ಆಟವನ್ನು ಪ್ರದರ್ಶಿಸಿದರು. ಐಪಿಎಲ್‌ನಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರು ಬರೆದಿರುವ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಗೆ ತಮ್ಮ ಹೆಸರು ನಮೂದಿಸಿದರು.

ಚಿನ್ನಸ್ವಾಮಿ ಅಂಗಳದಲ್ಲಿ ವಿರಾಟ್ ಬ್ಯಾಟಿಂಗ್ ಮೋಡಿಗೆ ಎದುರಾಳಿಗಳು ಸಹ ಸ್ಟನ್ ಆದರು. ಮೊದಲ ಓವರ್‌ನ್ನು ಆಲ್‌ರೌಂಡರ್ ಸ್ಯಾಮ್ ಕರನ್ ಮಾಡಿದರು. ಈ ಓವರ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದ ವಿರಾಟ್ ತಾವು ಫಾರ್ಮ್‌ನಲ್ಲಿರುವುದಾಗಿ ಸಾರಿ ಹೇಳಿದರು. ಥರ್ಡ್ ಮ್ಯಾನ್ ಹಾಗೂ ಆಫ್ ಸೈಡ್‌ನಲ್ಲಿ ಬೌಂಡರಿ ಬಾರಿಸಿದ ವಿರಾಟ್ ಅಬ್ಬರಿಸಿದರು.
ವಿರಾಟ್ ಮಾಡಿದ ಸಾಧನೆ ಏನು?
ವಿರಾಟ್ ಕೊಹ್ಲಿ ತಮ್ಮ ಟಿ20 ವೃತ್ತಿಜೀವನದಲ್ಲಿ 100ನೇ ಅರ್ಧಶತಕ ದಾಖಲಿಸಿದ್ದಾರೆ. ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ಮಾಡಿದರು. ಟಿ20ಯಲ್ಲಿ 100 ಅರ್ಧ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಟಿ20ಯಲ್ಲಿ 100ನೇ ಬಾರಿ 50 ರನ್‌ಗಳ ಗಡಿ ದಾಟಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಚೆನ್ನೈ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೊಹ್ಲಿ ಟಿ20ಯಲ್ಲಿ 12,000 ರನ್‌ಗಳ ಗಡಿ ದಾಟಿದ್ದರು.
ವಿರಾಟ್ ಕೊಹ್ಲಿ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರ ಈ ಮನಮೋಹಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದೆ.

ಮೊದಲ ಸ್ಥಾನದಲ್ಲಿರುವುದು ಯಾರು?
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಇದ್ದಾರೆ. ಇವರು 455 ಪಂದ್ಯಗಳಲ್ಲಿ 110 ಬಾರಿ 50ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು ಇವರು 369 ಪಂದ್ಯಗಳಲ್ಲಿ 109 ಬಾರಿ 50ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ.
ಉಳಿದಂತೆ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ 98 ಅರ್ಧಶತಕ ಸಿಡಿಸಿದ್ದಾರೆ. ಜೋಸ್ ಬಟ್ಲರ್ 380 ಪಂದ್ಯಗಳಲ್ಲಿ 86 ಅರ್ಧಶತಕ ಬಾರಿಸಿದ್ದಾರೆ. ಏರಾನ್ ಫಿಂಚ್ 85, ಅಲೆಕ್ಸ್ ಹೇಲ್ಸ್ 84, ಶೋಯಿಬ್ ಮಲಿಕ್ 83, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 81, ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ 73 ಅರ್ಧಶತಕ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications