Viral look: IPL 2024 ಆರಂಭಕ್ಕೂ ಮುನ್ನ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿರುವ ವಿರಾಟ್ ಕೊಹ್ಲಿ Trendy look
ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಕೌಟುಂಬಿಕ ಕಾರಣದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮತ್ತೆ ಅಂಗಳಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಎರಡನೇ ಮಗುವಿನ ತಂದೆಯಾದ ಬಳಿಕ ಲಂಡನ್‌ನಿಂದ ಭಾರತಕ್ಕೆ ಬಂದಿರುವ ವಿರಾಟ್ ಕೊಹ್ಲಿ ಸಖತ್ ಜೋಶ್‌ನಲ್ಲಿದ್ದಾರೆ. ಅವರ ಜೋಶ್ ಸದ್ಯ ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗುತ್ತಿದೆ.
ಆರ್‌ಸಿಬಿ ತಂಡದ ರಾಯಭಾರಿ ಎಂದೇ ಖ್ಯಾತಿ ಪಡೆದಿರುವ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ತನ್ನ ಹೊಸ ಲುಕ್ ಅನಾವರಣ ಮಾಡಿದ್ದಾರೆ. ವಿರಾಟ್ ಅವರ ನ್ಯೂ ಲುಕ್ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಮೇಕ್ ಓವರ್ ಅನ್ನು ಖ್ಯಾತ ಸ್ಟೈಲಿಸ್ಟ್ ಅಲೀಮ್ ಖಾನ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಹೊಸ ಹೇರ್ ಸ್ಟೈಲ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. ಮುಂಬರುವ ಐಪಿಎಲ್ ಮೂಲಕ ಕೊಹ್ಲಿ ಕ್ರಿಕೆಟ್ ಆಕ್ಷನ್‌ಗೆ ಮರಳಲಿದ್ದಾರೆ. ಆರ್‌ಸಿಬಿ ಹಾಲಿ ಚಾಂಪಿಯನ್ ಸಿಎಸ್‌ಕೆ ವಿರುದ್ಧ ಅಭಿಯಾನ ಆರಂಭಿಸಲಿದೆ.
ವಿರಾಟ್ ಕೊಹ್ಲಿ ತಾನು ಈ ವರ್ಷ ತನ್ನ ಹೊಸ ಅವತಾರದಲ್ಲಿ ಅಂಗಳಕ್ಕೆ ಎಂಟ್ರಿ ನೀಡಲಿರುವುದಾಗಿ ತಿಳಿಸಿದಂತೆ ಇದೆ. ಸೈಡ್‌ನಲ್ಲಿ ಟ್ರಿಮ್ ಮಾಡಲಾಗಿದ್ದು, ಇದಕ್ಕೆ ಹೊಂದುವಂತೆ ದಾಡಿಯನ್ನು ಸಹ ಮ್ಯಾಚ್ ಮಾಡಲಾಗಿದೆ. ಅಲ್ಲದೆ ಈ ಲುಕ್ ನೋಡಿದರೆ, ಸುನಿಲ್ ನಾರಾಯಣ ನೆನಪು ಆಗದೆ ಇರದು. ಆದರೆ ಇವರು ಈ ಹೆರ್ ಸ್ಟೈಲ್ ಸಖತ್ ಟ್ರೆಂಡ್ ಆಗುತ್ತಿದೆ. ಕೂದುಲಿಗೆ ಲೈಟ್ ರೆಡ್ ಶೇಡ್ ನೀಡಲಾಗಿದೆ.
ಲಯಕ್ಕೆ ಮರಳುವುದು ಅನಿವಾರ್ಯ
ಮುಂಬರುವ ಐಪಿಎಲ್ ವಿರಾಟ್ ಕೊಹ್ಲಿಗೆ ಮಹತ್ವದ್ದಾಗಿದೆ. ಈ ಶ್ರೀಮಂತ ಲೀಗ್‌ನಲ್ಲಿ ಐಪಿಎಲ್‌ನಲ್ಲಿ ವಿರಾಟ್ ಅಬ್ಬರಿಸುವ ಅವಶ್ಯಕತೆ ಇದೆ. ಮುಂಬರುವ ಟಿ20 ವಿಶ್ವಕಪ್‌ಗೆ ಕೊಹ್ಲಿ ಅವರ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವುದರಿಂದ ಫಾರ್ಮ್‌ನಲ್ಲಿ ಉಳಿಯುವುದು ಸಹ ಮುಖ್ಯವಾಗಿದೆ. 2024 ರ ಟಿ 20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿಯನ್ನು ಕೈ ಬಿಡಬೇಕು ಎಂಬ ಚರ್ಚೆಗಳು ಆರಂಭವಾದ ಹಿನ್ನೆಲೆ, ವಿರಾಟ್ ಲಯಕ್ಕೆ ಮರಳುವುದು ಅನಿವಾರ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications