For Quick Alerts
ALLOW NOTIFICATIONS  
For Daily Alerts
 

WPL 2025 RCB: ಪ್ರಶಸ್ತಿ ಉಳಿಸಿಕೊಳ್ಳುವ ಆರ್‌ಸಿಬಿ ಕನಸಿಗೆ ಪೆಟ್ಟು: ಚಾಂಪಿಯನ್‌ ಬೌಲರ್‌ ಟೂರ್ನಿಯಿಂದ ಔಟ್

ಗುಜರಾತ್ ಟೈಟಾನ್ಸ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಶುಭಾರಂಭ ಮಾಡಿತ್ತು. ಈ ವೇಳೆ ತಂಡದ ಸಂಘಟಿತ ಆಟಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್‌ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್‌ ಬೌಲರ್‌ ಏಕೆ ತಂಡದಿಂದ ಹೊರಗುಳಿದಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಈಗ ಈ ಸುದ್ದಿಗೆ ಸಂಬಂಧಿಸಿದಂತೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಕಳೆದ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈ ಬಾರಿಯೂ ಈ ಸಾಧನೆಯನ್ನು ಮಾಡುವ ಭರವಸೆಯನ್ನು ಮೂಡಿಸಿತ್ತು. ಆದರೆ ಆರ್‌ಸಿಬಿ ಕನಸಿಗೆ ಪೆಟ್ಟು ಬಿದ್ದಿದೆ. ಆರ್‌ಸಿಬಿ ತಂಡದ ಸ್ಟಾರ್ ಸ್ಪಿನ್ ಬೌಲರ್‌ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಮೈದಾನದಲ್ಲಿ ಇಳಿಯದೇ ಇದ್ದಾಗಲೇ ಪ್ರಶ್ನೆಗಳು ಎದ್ದಿದ್ದವು. ಆದರೆ ಈಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಗಾಯದಿಂದ ಬಳಲುತ್ತಿರುವ ಶ್ರೇಯಾಂಕಾ ಟೂರ್ನಿಯಲ್ಲಿ ಆರ್‌ಸಿಬಿ ಪರ ಕಾಣಿಸಿಕೊಳ್ಳುವುದಿಲ್ಲ.

RCB Star Spinner Shreyanka Patil Ruled Out of Women s Premier League Due to Injury


ತಂಡಕ್ಕೆ ಕಾಡುತ್ತಿದೆ ಗಾಯ

ಆರ್‌ಸಿಬಿ ತಂಡಕ್ಕೆ ಈಗಾಗಲೇ ಗಾಯ ಬಹುವಾಗಿ ಕಾಡುತ್ತಿದೆ. ಈಗಾಗಲೇ ತಂಡದಿಂದ ಸ್ಟಾರ್ ಆಟಗಾರರು ಹೊರ ನಡೆದಿದ್ದಾರೆ. ಈಗ ಚಾಂಪಿಯನ್‌ ಬೌಲರ್‌ ಶ್ರೇಯಾಂಕಾ ಪಾಟೀಲ್‌ ಹೊರ ನಡೆದಿರುವುದು ತಂಡಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈಗಾಗಲೇ ತಂಡದ ಪ್ರಮುಖ ಲೆಗ್-ಸ್ಪಿನ್ನರ್ ಆಶಾ ಶೋಭನಾ ಮೊಣಕಾಲಿನ ಗಾಯದಿಂದಾಗಿ ಹೊರಗುಳಿದಿದ್ದಾರೆ, ಆದರೆ ಅನುಭವಿ ಆಲ್‌ರೌಂಡರ್ ಸೋಫಿ ಡಿವೈನ್ ವಿರಾಮ ತೆಗೆದುಕೊಂಡಿದ್ದಾರೆ. ಇದಲ್ಲದೆ, ಎಡಗೈ ಸ್ಪಿನ್ನರ್ ಸೋಫಿ ಮೊಲಿನೆಕ್ಸ್ ಮತ್ತು ವೇಗದ ಬೌಲರ್ ಕೇಟ್ ಕ್ರಾಸ್ ಕೂಡ ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದು, ಆರ್‌ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನಕ್ಕೆ ಭಾರೀ ಪೆಟ್ಟು ನೀಡಿದೆ.

ಶ್ರೇಯಾಂಕಾ ಸಾಧನೆ

ಕಳೆದ ಆವೃತ್ತಿಯಲ್ಲಿ ಶ್ರೇಯಾಂಕಾ ಪಾಟೀಲ್‌ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಧಿಕ ವಿಕೆಟ್‌ ಪಡೆದು ಸಾಧನೆ ಮಾಡಿದ್ದರು. ಇವರು ಕಳೆದ ಆವೃತ್ತಿಯಲ್ಲಿ ಪರ್ಪಲ್‌ ಕ್ಯಾಪ್‌ನ್ನು ಸಹ ಪಡೆದಿದ್ದರು. ಇವರು ಆಡಿರುವ 15 ಪಂದ್ಯಗಳಲ್ಲಿ 19 ವಿಕೆಟ್‌ ಪಡೆದು ಬೀಗಿದ್ದಾರೆ. ಇವರು ತಂಡದಿಂದ ಹೊರ ನಡೆದಿರುವುದು ತಂಡಕ್ಕೆ ಪೆಟ್ಟು ಬಿದ್ದಿದೆ.

ಸ್ನೇಹಾ ರಾಣಾ

ಶ್ರೇಯಾಂಕಾ ಪಾಟೀಲ್‌ ಬದಲಿಗೆ ಸ್ನೇಹಾ ರಾಣಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. 30 ವರ್ಷದ ಸ್ನೇಹಾ ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 6 ವಿಕೆಟ್‌ ಕಬಳಿಸಿದ್ದಾರೆ.

Story first published: Saturday, February 15, 2025, 20:46 [IST]
Other articles published on Feb 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+