Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಚಾಂಪಿಯನ್‌ ಸಂಭ್ರಮಾಚರಣೆ: ಸ್ಟಾರ್ ಪ್ಲೇಯರ್‌ಗೆ ದಂಡದ ಬಿಸಿ, ಒಂದು ಪಂದ್ಯ ನಿಷೇಧ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸತತ ಎರಡನೇ ಐಪಿಎಲ್ ಟ್ರೋಫಿ ಎತ್ತಿ ಸಂಭ್ರಮಿಸಿದೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026ರ ಫೈನಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ತಂಡದ ಆಟಗಾರರು ಮತ್ತು ಅಭಿಮಾನಿಗಳು ಸಂತೋಷದಿಂದ ಮತ್ತು ಈ ವಿಜಯ ಸಂಭ್ರಮದಲ್ಲಿರುವಾಗಲೇ ಆರ್‌ಸಿಬಿ ಸ್ಟಾರ್ ಆಟಗಾರನಿಗೆ ಬಿಸಿಸಿಐ ಶಾಕ್ ನೀಡಿದೆ.

ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಐಪಿಎಲ್‌ ನೀತಿ ಸಂಹಿತಿಯನ್ನು ಉಲ್ಲಂಘಿಸಿದಕ್ಕಾಗಿ ದಂಡದ ಶಿಕ್ಷೆ ಹೊರ ಬಿದ್ದಿದೆ. ಟಿಮ್ ಡೇವಿಡ್‌ ಅವರ ವಿರುದ್ಧ ಒಂದು ಪಂದ್ಯ ನಿಷೇಧ ಹೇರಲಾಗಿದೆ. ಅಲ್ಲದೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಿದೆ. ಈ ನಿಷೇಧದಿಂದಾಗಿ, ಡೇವಿಡ್ ಇನ್ನು ಮುಂದಿನ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ.

RCB

ಭಾನುವಾರ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್‌ ಐಪಿಎಲ್‌ ನಿಯಮ ಉಲ್ಲಂಘಿಸಿದ್ದಾರೆ. ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಬಳಿಕ ಸೋಮವಾರ ಬಿಸಿಸಿಐ ಈ ಶೀಕ್ಷೆಯನ್ನು ಪ್ರಕಟಿಸಿದೆ. ಅಲ್ಲದೆ ಶೀಕ್ಷೆಯನ್ನು ಪ್ರಕಟಿಸಿದ್ದು ಏಕೆ ಎಂಬ ಬಗ್ಗೆಯೂ ಸ್ಪಷ್ಟತೆ ನೀಡಿದೆ.

ಗುಜರಾತ್ ಬ್ಯಾಟಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಫೀಲ್ಡಿಂಗ್ ಮಾಡುವಾಗ ಡೇವಿಡ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥ ಎಂದು ಕಂಡುಬಂದಿದೆ. ಗುಜರಾತ್ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ವಿಕೆಟ್ ಬಿದ್ದಾಗ, ಡೇವಿಡ್ ಕೋಪದಿಂದ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಬ್ಯಾಗ್ ಎಸೆದರು. ಈ ದುಷ್ಕೃತ್ಯವು ಈ ಗಂಭೀರ ಕ್ರಮಕ್ಕೆ ಕಾರಣವಾಗಿದೆ.

RCB

ಪಂದ್ಯದ ಸಮಯದಲ್ಲಿ ಟಿಮ್ ಡೇವಿಡ್ ಮಾಡಿದ್ದು ಐಪಿಎಲ್ ನಿಯಮಗಳಿಗೆ ವಿರುದ್ಧವಾಗಿದೆ. ಈ ನಿಯಮವು ಮೈದಾನದಲ್ಲಿರುವ ಯಾವುದೇ ಆಟಗಾರ ಅಥವಾ ಅಂಪೈರ್ ಕಡೆಗೆ ಉದ್ದೇಶಪೂರ್ವಕವಾಗಿ ಚೆಂಡು ಅಥವಾ ಯಾವುದೇ ವಸ್ತುವನ್ನು ಎಸೆಯುವುದಕ್ಕೆ ಸಂಬಂಧಿಸಿದ್ದಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಮ್ಯಾಚ್ ರೆಫರಿ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡೇವಿಡ್ ಲೆವೆಲ್ 1 ಅಪರಾಧದಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ. ಟಿಮ್ ಡೇವಿಡ್ ಅವರಿಗೆ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

ಮೂರನೇ ಬಾರಿಗೆ ನೀತಿ ಸಂಹಿತಿ ಉಲ್ಲಂಘಿಸಿದ ಡೇವಿಡ್

ಟಿಮ್ ಡೇವಿಡ್ ಈ ಆವೃತ್ತಿಯಲ್ಲಿ ಮೂರನೇ ಅಪರಾಧ ಎಂದು ಗುರುತಿಸಲಾಗಿದೆ. ಹೀಗಾಗಿ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ. ಟಿಮ್ ಡೇವಿಡ್‌ ಏಪ್ರಿಲ್‌ 12 ರಂದು ಮುಂಬೈ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ಅಪರಾಧ ಮಾಡಿದ್ದರು. ಅಲ್ಲದೆ ಮೇ 10 ರಂದು ಮುಂಬೈ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ತಪ್ಪನ್ನು ಮಾಡಿದ್ದರು. ಫೈನಲ್‌ ಪಂದ್ಯದಲ್ಲೂ ಟಿಮ್ ಡೇವಿಡ್ ಇಂತಹದ್ದೇ ತಪ್ಪನ್ನು ಮಾಡಿದ್ದು ಬಹಿರಂಗವಾಗಿದ್ದು, ಇವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

Story first published: Monday, June 1, 2026, 23:24 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+