Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli ಮುಂಬೈ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ವಿರಾಟ್‌

ಮುಂಬೈ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಿಂದಲೂ ಜೊತೆಗಾರರಿಗೆ ಉತ್ತಮ ಸಾಥ್ ನೀಡಿದ ವಿರಾಟ್‌ ಬಳಿಕ ತಮ್ಮ ನೈಜ ಆಟವನ್ನು ಆಡಿದರು. ಈ ಪಂದ್ಯದಲ್ಲಿ ಆರ್‌ಸಿಬಿ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಉತ್ತಮ ಕಾಣಿಕೆ ನೀಡಿದರು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ವಿರಾಟ್‌ ಭರ್ಜರಿ ಪ್ರದರ್ಶನ ನೀಡಿದರು. ಇವರು 38 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 50 ರನ್‌ ಬಾರಿಸಿದರು. ಈ ಮೂಲಕ ವಿರಾಟ್‌ ಐಪಿಎಲ್‌ನಲ್ಲಿ 66ನೇ ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಅರ್ಧಶತಕದ ಬಲದಿಂದ ಹಲವು ದಾಖಲೆಗಳನ್ನು ಬರೆದರು.

Virat Kohli

ಈ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೊಂದು ದಾಖಲೆ ಬರೆದರು. ವಿರಾಟ್‌ ಮುಂಬೈ ತಂಡದ ಪರ 37 ಇನಿಂಗ್ಸ್‌ಗಳಲ್ಲಿ 32ರ ಸರಾಸರಿಯಲ್ಲಿ 1030 ರನ್‌ ಸಿಡಿಸಿದರು. ಈ ಮೂಲಕ 89 ಬೌಂಡರಿ, 37 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಮುಂಬೈ ವಿರುದ್ಧ 1000 ರನ್‌ ಕಲೆ ಹಾಕಿದ ಮೊದಲ ಬ್ಯಾಟರ್‌ ಎಂಬ ಖ್ಯಾತಿ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕರಾಗಿ 49 ಬಾರಿ ಐವತ್ತಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದು, ಇವರು ಈ ಸಾಧನೆಯನ್ನು 60 ಬಾರಿ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು

ವಿರಾಟ್ ಕೊಹ್ಲಿ, 1030 ರನ್‌
ಕೆಎಲ್ ರಾಹುಲ್, 977 ರನ್‌
ಶಿಖರ್ ಧವನ್, 901 ರನ್‌
ಅಜಿಂಕ್ಯ ರಹಾನೆ, 888 ರನ್‌
ಸುರೇಶ್ ರೈನಾ, 850 ರನ್‌

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್‌ 38 ಎಸೆತಗಳಲ್ಲಿ 50 ರನ್ ಗಳಿಸಿದರು. ಅಲ್ಲದೆ ಆರಂಭಿಕ ಫಿಲ್ ಸಾಲ್ಟ್ ಅವರೊಂದಿಗೆ ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಈ ಶತಕದ ಜೊತೆಯಾಟದ ಮೂಲಕವೂ ವಿರಾಟ್‌ ದೊಡ್ಡ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಪಾಲುದಾರಿಕೆಯ ಭಾಗವಾಗಿರುವ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್‌ ತಮ್ಮದಾಗಿಸಿಕೊಂಡರು. ಈ ಮೂಲಕ ಬಾಬರ್ ಅಜಮ್ ಮತ್ತು ಕ್ರಿಸ್ ಗೇಲ್ ಇಬ್ಬರನ್ನೂ ವಿರಾಟ್‌ ಹಿಂದಿಕ್ಕಿದರು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟವಾಡಿದ ಆಟಗಾರರು

ವಿರಾಟ್ ಕೊಹ್ಲಿ, 47 ಬಾರಿ
ಬಾಬರ್ ಅಜಮ್, 46 ಬಾರಿ
ಕ್ರಿಸ್ ಗೇಲ್, 46 ಬಾರಿ
ಡೇವಿಡ್ ವಾರ್ನರ್, 45 ಬಾರಿ
ಫಾಫ್ ಡು ಪ್ಲೆಸಿಸ್, 40 ಬಾರಿ

Story first published: Sunday, April 12, 2026, 22:54 [IST]
Other articles published on Apr 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+