Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಬಳಿ ಚಾರ್ಟರ್ಡ್ ಫ್ಲೈಟ್‌ ಬೇಡಿಕೆ ಇಟ್ಟಿದ್ದರೇ ವಿರಾಟ್‌ ಕೊಹ್ಲಿ? ಏನಿದರ ಅಸಲಿಯತ್ತು

19ನೇ ಆವೃತ್ತಿಯ ಐಪಿಎಲ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ವೇಳೆ ಎಲ್ಲರ ಚಿತ್ತ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮೇಲೆ ನೆಟ್ಟಿರಲಿದೆ. ಆರ್‌ಸಿಬಿ ಈ ಬಾರಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಮಾರ್ಚ್‌ 28 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಈ ವೇಳೆ ಆಕರ್ಷಣೆಯ ಕೇಂದ್ರ ಬಿಂದು ವಿರಾಟ್‌ ಕೊಹ್ಲಿ ಅವರು ಆಗಿರಲಿದ್ದಾರೆ.

ಐಪಿಎಲ್‌ ಆರಂಭಕ್ಕೆ ದಿನಗಳು ಬಾಕಿ ಇರುವಾಗಲೇ ಸಾಮಾಜಿಕ ತಾಣದಲ್ಲಿ ಒಂದು ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿಗೆ ಸಂಬಂಧಿಸಿದಂತೆ ಆರ್‌ಸಿಬಿ ಸ್ಟಾರ್ ಆಟಗಾರರ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೆ ಆ ಸುದ್ದಿ ಏನು? ವಿರಾಟ್‌ ನೀಡಿದ ಉತ್ತರ ಹೇಗಿತ್ತು ಎಂಬ ಬಗ್ಗೆ ವರದಿ ಇಲ್ಲಿದೆ.

RCB Star Virat Kohli

ವಿರಾಟ್‌ ಕೊಹ್ಲಿ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಇದೇ ವೇಳೆ ಹಲವು ವರದಿಗಳಲ್ಲಿ ವಿರಾಟ್‌ ಕೊಹ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಲಂಡನ್‌ನಿಂದ ಭಾರತಕ್ಕೆ ಹೋಗಿ ಬರಲು ಚಾರ್ಟರ್ಡ್ ಫ್ಲೈಟ್‌ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿತ್ತು. ಈ ವರದಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ದೊಡ್ಡ ಹೇಳಿಕೆ ನೀಡಿದ್ದಾರೆ.

ವಿರಾಟ್‌ ಹೇಳಿದ್ದಿಷ್ಟು

ವರದಿಗಳಲ್ಲಿ ವಿರಾಟ್‌ ಮ್ಯಾನೇಜ್ಮೆಂಟ್‌ಗೆ ಚಾರ್ಟಡ್‌ ಫ್ಲೈಟ್‌ ಬೇಡಿಕೆ ಇಟ್ಟಿದ್ದಾಗಿ ತಿಳಿದು ಬಂದಿತ್ತು. ಒಂದು ವೇಳೆ ಎರಡು ಪಂದ್ಯಗಳ ಮಧ್ಯದಲ್ಲಿ ಮೂರು ದಿನಗಳ ಗ್ಯಾಪ್‌ಗಳು ಇದ್ದರೆ, ಲಂಡನ್‌ಗೆ ಹಾರಿ ಮತ್ತೆ ಎರಡನೇ ಪಂದ್ಯಕ್ಕೂ ಮುನ್ನ ತಂಡ ಸೇರುವ ಆಸೆಯಾಗಿತ್ತು. ಆದರೆ ಈ ಹೇಳಿಕೆಗೆ ಸಂಬಂಧಿಸಿದಂತೆ ವಿರಾಟ್‌ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲ ವರದಿಗಳು ಸುಳ್ಳು ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿಗಳಿಗೆ ವಿರಾಟ್‌ ಉತ್ತರ ನೀಡಿದ್ದಾರೆ. ಈ ಸ್ಟೋರಿಯಲ್ಲಿ ವಿರಾಟ್‌ ನಗುವ ಎಮೋಜಿ ಮೂಲಕ ಉತ್ತರ ನೀಡಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ಸಾಧನೆ

ವಿರಾಟ್‌ ಕೊಹ್ಲಿ ಸದ್ಯ ಐಪಿಎಲ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಆರ್‌ಸಿಬಿ ತಂಡವು ಹಲವು ವಿಡಿಯೊಗಳನ್ನು ಹಂಚಿಕೊಂಡಿದೆ. ಈ ವಿಡಿಯೊಗಳಲ್ಲಿ ವಿರಾಟ್‌ ಮೈದಾನದಲ್ಲಿ ಬೆವರು ಹರಿಸುತ್ತಿರುವುದು ಕಂಡು ಬಂದಿದೆ. ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 267 ಪಂದ್ಯಗಳಲ್ಲಿ 8 ಶತಕ ಹಾಗೂ 63 ಅರ್ಧಶತಕಗಳು ಒಳಗೊಂಡಂತೆ 8,661 ರನ್‌ ಕಲೆ ಹಾಕಿದ್ದಾರೆ. ಇದೇ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ 9 ಸಾವಿರ ರನ್‌ ಪೂರೈಸುವ ಹೊಸ್ತಿಲಲ್ಲಿದ್ದಾರೆ. ಈಗಾಗಲೇ ಒಮ್ಮೆ ಐಪಿಎಲ್‌ ಟ್ರೋಫಿ ಗೆದ್ದಿರುವ ಆರ್‌ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ವಿರಾಟ್‌ ಕೊಹ್ಲಿ ಸಹ ಆಟಗಾರರಲ್ಲಿ ಹಿಂದೆ ಆಗಿದ್ದನ್ನು ಮರೆತು ಹೊಸ ಸವಾಲಿಗೆ ಸನ್ನದ್ಧರಾಗುವಂತೆ ತಿಳಿಸಿದ್ದಾರೆ.

Story first published: Sunday, March 22, 2026, 18:53 [IST]
Other articles published on Mar 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+