ಸನ್‌ರೈಸರ್ಸ್ ವಿರುದ್ಧ ಹೇಗಿದೆ ವಿರಾಟ್ ಕೊಹ್ಲಿ ಪ್ರದರ್ಶನ? ಇಲ್ಲಿದೆ ಡಿಟೇಲ್ಸ್
ಶನಿವಾರದಿಂದ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಈ ಲೀಗ್‌ನ ಚಾಂಪಿಯನ್ ಪಟ್ಟದ ಮೇಲೆ 10 ತಂಡಗಳು ಕಣ್ಣು ನೆಟ್ಟಿವೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ವಿರಾಟ್ ಕೊಹ್ಲಿ ಸಹ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೇಗಿದೆ ವಿರಾಟ್ ಸಾಧನೆ ಎಂಬ ಬಗ್ಗೆ ವರದಿ ಇಲ್ಲಿದೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿರುವ ಆಟಗಾರ. ಇವರು ಮೊದಲ ಐಪಿಎಲ್‌ನಿಂದ ಆರ್‌ಸಿಬಿ ತಂಡದ ಪರ ಆಡುತ್ತಿದ್ದಾರೆ. ತಮ್ಮ ಸ್ಥಿರ ಬ್ಯಾಟಿಂಗ್‌ಗೆ ಇವರು ಹೆಸರುವಾಸಿಯಾದ ಆಟಗಾರ. ಎದುರಾಳಿ ಬೌಲರ್‌ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ವಿರಾಟ್, ಹಲವು ದಾಖಲೆಗಳನ್ನು ಬರೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೂ ವಿರಾಟ್ ದಾಖಲೆ ಉತ್ತಮವಾಗಿದೆ.

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿರುವ ಆಟಗಾರ. ಇವರು ಈ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಒಟ್ಟಾರೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ 267 ಪಂದ್ಯಗಳಲ್ಲಿ 132ರ ಸ್ಟ್ರೈಕ್ ರೇಟ್‌ನಲ್ಲಿ 39ರ ಸರಾಸರಿಯಲ್ಲಿ 8,661 ರನ್ ಕಲೆ ಹಾಕಿದ್ದಾರೆ. ಈ ವೇಳೆ 8 ಶತಕ ಹಾಗೂ 63 ಅರ್ಧಶತಕಗಳು ಸೇರಿವೆ.
ಸನ್ ವಿರುದ್ಧ ಹೇಗಿದೆ ವಿರಾಟ್ ಪ್ರದರ್ಶನ?
ವಿರಾಟ್ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಇವರು ಸನ್ ವಿರುದ್ಧ ಆಡಿದ 24 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 805 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಈ ವೇಳೆ ವಿರಾಟ್ ಅವರ ಸ್ಟ್ರೈಕ್ ರೇಟ್ 141 ಆಗಿದೆ. ಒಟ್ಟಾರೆ ಹೈದರಾಬಾದ್ ವಿರುದ್ಧ 83 ಬೌಂಡರಿ, 29 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ ಕಣಕ್ಕೆ ಇಳಿದಾಗ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿರಲಿವೆ. ಇವರು ಭಾರತದ ಪರ ಏಕದಿನ ಫಾರ್ಮೆಟ್ ಮಾತ್ರ ಆಡುತ್ತಿದ್ದಾರೆ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದರು. ಇದೇ ಪ್ರದರ್ಶನವನ್ನು ವಿರಾಟ್ ಈ ಬಾರಿಯೂ ಮುಂದುವರೆಸುವ ಇರಾದೆಯನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾರೆ. ಈ ಲೀಗ್‌ನಲ್ಲಿ ಇನ್ನು 9 ಸಿಕ್ಸರ್ ಬಾರಿಸಿದರೆ ವಿರಾಟ್ ಐಪಿಎಲ್‌ನಲ್ಲಿ 300 ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಸಾಧನೆಯನ್ನು ಈ ಮೊದಲು ರೋಹಿತ್ ಶರ್ಮಾ, ಕ್ರಿಸ್ ಗೇಲ್ ಮಾಡಿದ್ದರು. ಈಗ ಈ ಕ್ಲಬ್ ಸೇರಲು ವಿರಾಟ್ ಕಾತರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications