Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳೊಂದಿಗೆ ಸಮಯ ಕಳೆದ ಆರ್ ಸಿಬಿ ಸ್ಟಾರ್ಸ್

ಬೆಂಗಳೂರು, ಮೇ 9: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನ ಅಲಂಕರಿಸಿದೆ ಮತ್ತು ಈ ವರ್ಷದ ವಿವೋ ಐಪಿಎಲ್ 2017 ಈ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.

ಜಿಯೋ, ಐಪಿಎಲ್ 2017ರ ಟಾಪ್ ಏಳು ತಂಡಗಳನ್ನು ಪ್ರಾಯೋಜಿಸುತ್ತಿದ್ದು, ಜಿಯೋ ಧನ್ ಧನಾಧನ್ ಇನ್ನಿಂಗ್ಸ್ ಕಾ ಚಾಂಪಿಯನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಅದರಲ್ಲಿ ವಿಜೇತರಾದ 10 ಮಂದಿಗೆ ಆರ್ ಸಿಬಿ ಆಟಗಾರರನ್ನು ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಈ ಅದೃಷ್ಟವಂತ 10 ಮಂದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಮ್ಮ ಫೇವರಿಟ್ ಆಟಗಾರರನ್ನು ಭೇಟಿಯಾದರು. ಸೋಮವಾರದಂದು ಕ್ರಿಸ್ ಗೇಲ್, ಶೇನ್ ವಾಟ್ಸನ್, ಮನ್‍ದೀಪ್ ಸಿಂಗ್ ಮತ್ತು ಕೇದಾರ್ ಜಾಧವ್- ಹೀಗೆ ಈ ಋತುವಿನ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಗಳೊಂದಿಗೆ ಮುಖಾಮುಖಿಯಾದರು.

ಈ ವಿಶೇಷ ಭೇಟಿ ಮತ್ತು ಅದ್ಭುತ ಸಂಜೆಯನ್ನು ಜಿಯೋ ವ್ಯವಸ್ಥೆಗೊಳಿಸಿತ್ತು. ಜಿಯೋ ಸೃಷ್ಟಿಸಿದ್ದ ಈ ವಿಶೇಷ ಐಪಿಎಲ್ ಕ್ಷಣಗಳನ್ನು ವಿಜೇತರು ತಮ್ಮ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಜಿಯೋ ಪ್ರಯೋಜಕತ್ವ ತಂಡಗಳು

ಜಿಯೋ ಪ್ರಯೋಜಕತ್ವ ತಂಡಗಳು

ಜಿಯೋ 7 ಮುಂಚೂಣಿ ಐಪಿಎಲ್ ತಂಡಗಳೊಂದಿಗೆ ಈ ಋತುವಿನಲ್ಲಿ ಸಹಭಾಗಿತ್ವ ಹೊಂದಿದೆ - ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್‍ಡೆವಿಲ್ಸ್, ಗುಜರಾತ್ ಲಯನ್ಸ್, ರೈಸಿಂಗ್ ಪುಣೆ ಸೂಪರ್‍ಜೈಂಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‍ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್.

ಪ್ರತಿದಿನ ಸ್ಪರ್ಧೆ

ಪ್ರತಿದಿನ ಸ್ಪರ್ಧೆ

ಜಿಯೋ ಧನ್‍ಧನಾಧನ್ ಇನ್ನಿಂಗ್ಸ್ ಕಾ ಚಾಂಪಿಯನ್ ಸ್ಪರ್ಧೆಯಲ್ಲಿ ಅಭಿಮಾನಿಗಳು ಭಾಗವಹಿಸಬಹುದಾಗಿದ್ದು, ಇದು ಪ್ರತಿ ಪಂದ್ಯದ ಮಧ್ಯದಲ್ಲಿ ಮತ್ತು ಪಂದ್ಯ ಕೊನೆಗೊಂಡ ಬಳಿಕ ಪ್ರತಿ ಬಾರಿ 20 ನಿಮಿಷಗಳ ಕಾಲ ಪ್ರತಿದಿನ ನಡೆಸಲಾಗುತ್ತದೆ.

ಸ್ಟಾರ್ ಗಳೊಂದಿಗೆ ಸುಂದರ ಸಂಜೆ

ಸ್ಟಾರ್ ಗಳೊಂದಿಗೆ ಸುಂದರ ಸಂಜೆ

ಸ್ಪರ್ಧೆಯು ಜಿಯೋದ ಡಿಜಿಟಲ್ ಲೈಫ್‍ನ ಅಂಗವಾಗಿ ಯುವ ಭಾರತೀಯ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಕಂಪನಿ ಹಮ್ಮಿಕೊಂಡಿರುವ ಯೋಜನೆಯಿದು. ಪ್ರತಿ ತಂಡಗಳ ತವರು ನಗರದ 10 ಅದೃಷ್ಟವಂತ ವಿಜೇತರಿಗೆ ತಮ್ಮ ಕೆಲವು ಫೇವರಿಟ್ ಐಪಿಎಲ್ ಸ್ಟಾರ್ ಗಳೊಂದಿಗೆ ವಿಶೇಷವಾಗಿ ಭೇಟಿಯಾಗುವ ಮತ್ತು ಅದ್ಭುತ ಸಂಜೆಯನ್ನು ಕಳೆಯುವ ಅವಕಾಶ ನೀಡಲಾಗುತ್ತದೆ.

ಹೊಸತೊಂದು ವೇದಿಕೆ

ಹೊಸತೊಂದು ವೇದಿಕೆ

ಭಾರತದ ಅತಿದೊಡ್ಡ ಕ್ರಿಕೆಟ್ ಹಬ್ಬ, ವಿವೋ ಐಪಿಎಲ್ 2017ರೊಂದಿಗಿನ ಜಿಯೋದ ಸಹಭಾಗಿತ್ವವು, ಜನರನ್ನು ಜೋಡಿಸುವ ಹಾಗೂ ಐಪಿಎಲ್ ಋತುವಿನಾದ್ಯಂತ ಅಭಿಮಾನಿಗಳಿಗೆ ಕ್ರಿಕೆಟ್ ಸ್ಟಾರ್ ಗಳ ಜತೆಗೆ ಸಮಯ ಕಳೆಯುವಂಥ ವೇದಿಕೆ ಸೃಷ್ಟಿಸಿದೆ.

ವಿರಾಟ್ ಕೊಹ್ಲಿ ಗೈರು

ವಿರಾಟ್ ಕೊಹ್ಲಿ ಗೈರು

ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಆರ್ ಸಿಬಿಯ ಶ್ರೀನಾಥ್ ಅರವಿಂದ್, ಶೇನ್ ವ್ಯಾಟ್ಸನ್, ಕ್ರಿಸ್ ಗೇಲ್, ಪವನ್ ನೇಗಿ, ಆರ್ ಸಿಬಿಯ ಮುಖ್ಯಸ್ಥ ಮುರಳಿ ಕಿಟ್ಟು ಮುಂತಾದವರು ಪಾಲ್ಗೊಂಡಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಸಮಾರಂಭಕ್ಕೆ ಆಗಮಿಸಿರಲಿಲ್ಲ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+