IND vs ENG 1st ODI: ಇಂಗ್ಲೆಂಡ್ ಬ್ಯಾಟಿಂಗ್‌ಗೆ ಆಧಾರವಾದ RCB ಸ್ಟಾರ್ಸ್: ಫ್ಯಾನ್ಸ್ ಫುಲ್ ಖುಷ್
ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ಈಗ ನಡೆಯುತ್ತಿವೆ. ಈ ವೇಳೆ ಐಪಿಎಲ್ ತಂಡಗಳ ಅಭಿಮಾನಿಗಳ ಕಣ್ಣು, ತಮ್ಮ ತಂಡದ ಆಟಗಾರರ ಮೇಲೆ ನೆಟ್ಟಿರಲಿದೆ. ಇಂಗ್ಲೆಂಡ್, ಭಾರತ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಿತ್ತು. ಈ ವೇಳೆ ಹಲವು ಆಟಗಾರರು ನಿರಾಸೆಯನ್ನು ಅನುಭವಿಸಿದ್ದರು. ಆದರೆ ಏಕದಿನ ಕ್ರಿಕೆಟ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಾಗ್ಪುರ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಆರ್‌ಸಿಬಿ ಆಟಗಾರರು ಆಧಾರವಾದರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 248 ರನ್‌ಗಳಿಗೆ ಆಲೌಟ್ ಆಯಿತು.
ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಇಂಗ್ಲೆಂಡ್ ತಂಡದ ಪಾಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಲು ಇಂಗ್ಲೆಂಡ್ ಮುಂದಾಯಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆರಂಭಿಕ ಆಟಗಾರರು ಸಫಲರಾದರು. ಆರ್‌ಸಿಬಿ ಪರ ಈ ಬಾರಿ ಐಪಿಎಲ್‌ನಲ್ಲಿ ಮಿಂಚು ಹರಿಸಲಿರುವ ಫಿಲ್ ಸಾಲ್ಟ್ ಅಮೋಘ ಬ್ಯಾಟಿಂಗ್ ನಡೆಸಿದರು. ಪವರ್ ಫುಲ್ ಬ್ಯಾಟಿಂಗ್ ನಡೆಸಿದ ಸಾಲ್ಟ್, ಆರಂಭದಲ್ಲಿ ತಂಡಕ್ಕೆ ಆಧಾರವಾದರು. ಅಲ್ಲದೆ ತಂಡ ಉತ್ತಮ ಮೊತ್ತ ಕಲೆ ಹಾಕಲು ಉತ್ತಮ ಅಡಿಪಾಯ ಹಾಕಿಕೊಟ್ಟರು.

ಭರ್ಜರಿ ಆರಂಭ
ಇಂಗ್ಲೆಂಡ್ ತಂಡದ ಆರಂಭಿಕರಾಗಿ ಕಾಣಿಸಿಕೊಂಡ ಬೆನ್ ಡಕೆಟ್ ಹಾಗೂ ಫಿಲ್ ಸಾಲ್ಟ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಆರಂಭದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳಿಗೆ ಸುಧಾರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಈ ಇಬ್ಬರೂ ಆಟಗಾರರು ಭಾರತದ ಬೌಲರ್‌ಗಳಿಗೆ ಕಾಟ ನೀಡಿದರು. ಈ ಜೊಡಿ 8.5 ಓವರ್‌ಗಳಲ್ಲಿ 75 ರನ್ ಸೇರಿಸಿತು. ಇದೇ ವೇಳೆ ಆರ್‌ಸಿಬಿ ಪರ ಆಡಲಿರುವ ಫಿಲ್ ಸಾಲ್ಟ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಆಡಿದ 26 ಪಂದ್ಯಗಳಲ್ಲಿ 5 ಬೌಂಡರಿ ನೆರವಿನಿಂದ 3 ಸಿಕ್ಸರ್ ಸಹಾಯದಿದ 43 ರನ್ ಸಿಡಿಸಿದರು. ಆದರೆ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ (19), ಹ್ಯಾರಿ ಬ್ರೂಕ್ (0), ದೊಡ್ಡ ಇನಿಂಗ್ಸ್ ಕಟ್ಲಲಿಲ್ಲ. ನಾಯಕ ಜೋಸ್ ಬಟ್ಲರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 67 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 52 ರನ್ ಬಾರಿಸಿದರು. ಭಾರತದಲ್ಲಿ ಇದು ಜಟ್ಲರ್ ಅವರ ಮೊದಲ ಅರ್ಧಶತಕ.
ಜಾಕಬ್ ಅಬ್ಬರ
ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಜಾಕಬ್ ಬೇತೆಲ್, ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿದರು. ಇವರು ಆಡಿದ 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ತಂಡಕ್ಕೆ ಆಧಾರವದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು.

ಉಳಿದಂತೆ ಇಂಗ್ಲೆಂಡ್ ತಂಡದ ಪರ ಯಾವೊಬ್ಬ ಬ್ಯಾಟರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಕೆಳ ಕ್ರಮಾಂಕದಲ್ಲಿ ಜೋಫ್ರಾ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 21 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಜಡೇಜಾ, ರಾಣಾಗೆ 3 ವಿಕೆಟ್
ಟೀಮ್ ಇಂಡಿಯಾದ ಪರ ಪದಾರ್ಪಣೆ ಪಂದ್ಯದಲ್ಲಿ ಹರ್ಷಿತ್ ರಾಣಾ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications