RCB vs PBKS: ಗೆದ್ದ ಬಳಿಕ ರಜತ್ ಹೇಳಿದ್ದು.. "ಜೂನ್ 3ರಂದು ಸೆಲೆಬ್ರೇಷನ್ ಮಾಡೋಣ"
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದೆ. ಆರ್‌ಸಿಬಿ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಸಂಘಟಿತ ಆಟವನ್ನು ಆಡಿ ಗಮನ ಸೆಳೆಯಿತು. ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ತಂಡದ ಪರ ಒಬ್ಬ ಒಬ್ಬ ಮ್ಯಾಚ್ ವಿನ್ನರ್‌ಗಳು ಮೂಡಿ ಬಂದಿದ್ದಾರೆ. ಆರ್‌ಸಿಬಿ ಈ ಲೀಗ್‌ನಲ್ಲಿ 10 ಪಂದ್ಯಗಳನ್ನು ಗೆಲುವು ದಾಖಲಿಸಿದ್ದು, 8 ವಿಭಿನ್ನ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ ನಾಯಕ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡಲು ಮುಂದಾಯಿತು. ಈ ವೇಳೆ ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪಂಜಾಬ್ ಕಿಂಗ್ಸ್ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ರಜತ್ ಪಾಟಿದಾರ್ ಪಂದ್ಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ರಜತ್ ಹೇಳಿದ್ದೇನು?
ನಾನು ನಮ್ಮ ಯೋಜನಗೆ ಬದ್ಧವಾಗಿ ಕ್ರಿಕೆಟ್ ಆಡಿದ್ದೇವೆ. ನಮ್ಮ ತಂಡದ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಪಿಚ್‌ನ್ನು ಫಾಸ್ಟ್ ಬೌಲರ್‌ಗಳು ಉತ್ತಮವಾಗಿ ಬಳಸಿಕೊಂಡಿದ್ದಾರೆ. ವೇಗಿಗಳು ಸ್ಟಂಪ್ ಲೈನ್ ಟಾರ್ಗೆಟ್ ಮಾಡಿ ಬೌಲಿಂಗ್ ನಡೆಸಿದ್ದಾರೆ. ಇದು ನಮ್ಮ ಬೌಲರ್‌ಗಳ ಬಲವಾಗಿತ್ತು. ನಾನು ನನ್ನ ಬೌಲರ್‌ಗಳಿಗೆ ಹಲವು ಐಡಿಯಾ ನೀಡಲೇ ಇಲ್ಲ. ನಾವು ಟೂರ್ನಿಯಲ್ಲಿ ಏನನ್ನು ಮಾಡಿದ್ದೆವೋ ಅದನ್ನೇ ಮುಂದುವರೆಸುವ ಪ್ಲ್ಯಾನ್ ನಮ್ಮದಾಗಿತ್ತು. ನಮ್ಮ ತಂಡದ ಆಟಗಾರರು ಒಂದೇ ದಿನ ಬಿಡುವು ಸಿಕ್ಕಿದಕ್ಕೆ ಬೇಸರ ಆಗಲೇ ಇಲ್ಲ ಎಂದು ಕ್ಯಾಪ್ಟನ್ ಹೇಳಿದ್ದಾರೆ.

ನಮ್ಮ ತಂಡದ ಬ್ಯಾಟರ್‌ಗಳು ಸಹ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಆರ್‌ಸಿಬಿ ತಂಡದ ಆರಂಭಿಕ ಫಿಲ್ ಸಾಲ್ಟ್ ಟೂರ್ನಿಯುದ್ದಕ್ಕೂ ತಂಡ ಅವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ನಾನು ಅವರ ಬ್ಯಾಟಿಂಗ್‌ನ ದೊಡ್ಡ ಅಭಿಮಾನಿ ಎಂದು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಿಳಿಸಿದ್ದಾರೆ. ಇನ್ನು ಆರ್‌ಸಿಬಿ ಫ್ಯಾನ್ಸ್ ನಮಗೆ ಎಲ್ಲ ಹಂತದಲ್ಲೂ ಬೆಂಬಲ ನೀಡಿದ್ದಾರೆ. ನಾವು ಯಾವುದೇ ಅಂಗಳದಲ್ಲೇ ಆಡಿದ್ರೋ ನಮಗೆ ಬೆಂಗಳೂರಿನಲ್ಲಿ ಆಡಿದಷ್ಟೇ ಖುಷಿ ಸಿಗುತಿತ್ತು. ಇನ್ನೊಂದೇ ಗೆಲುವು ಎಲ್ಲರೂ ಸೇರಿ ಸಂಭ್ರಮಿಸೋಣ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.
ಫೈನಲ್‌ಗೆ ಆರ್‌ಸಿಬಿ
ಆರ್‌ಸಿಬಿ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಬ್ಬರದ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಜೂನ್ 3ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications