For Quick Alerts
ALLOW NOTIFICATIONS  
For Daily Alerts
 

ಬ್ರಂಟ್‌ ಶತಕದ ಬಲ: RCB ವಿರುದ್ಧ ಗೆದ್ದ ಮುಂಬೈ

ವಡೋದರಾ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಸೋಲು ಕಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ ಸವಾಲಿನ ಮೊತ್ತವನ್ನು ಹಿಂಬಾಲಿಸುವಲ್ಲಿ ವಿಫಲವಾದ ಆರ್‌ಸಿಬಿ 15 ರನ್‌ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಗೆದ್ದ ಮುಂಬೈ ಇಂಡಿಯನ್ಸ್‌ ಮುಂದಿನ ಹಂತವನ್ನು ಪ್ರವೇಶಿಸುವ ಆಸೆ ಜೀವಂತವಾಗಿಸಿಕೊಂಡಿದೆ. ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್‌ ಲೀಗ್‌ನಲ್ಲಿ ಮೂರನೇ ಗೆಲುವು ದಾಖಲಿಸಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಮುಂಬೈ ಗೆಲುವಿನಲ್ಲಿ ಸ್ಟಾರ್ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಮಿಂಚಿದರು. ಇವರು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮೊದಲ ಶತಕ ಬಾರಿಸಿ ಅಬ್ಬರಿಸಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲ ಆರ್‌ಸಿಬಿ ವಿಫಲವಾಯಿತು. ಇವರು 57 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 100 ರನ್‌ ಬಾರಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾದರು. ಇವರನ್ನು ಬಿಟ್ಟರೆ ಆರಂಭಿಕ ಆಟಗಾರ್ತಿ ಹ್ಯಾಲಿ ಮ್ಯಾಥ್ಯೂಸ್‌ 9 ಬೌಂಡರಿ ಸಹಾಯದಿಂದ 56 ರನ್‌ ಬಾರಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಸೇರಿಸಿತು.

RCB

ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ನಾಯಕಿ ಸ್ಮೃತಿ ಮಂಧಾನ (6), ಜಾರ್ಜಿಯಾ ವೋಲ್‌ (9), ಗೌತಮಿ ನಾಯಕ್ (1), ರಾಧಾ ಯಾದವ್ (0), ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್‌ (15) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆರ್‌ಸಿಬಿ ಪವರ್‌ ಪ್ಲೇನಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6ನೇ ವಿಕೆಟ್‌ಗೆ ನಾಡಿನ್‌ ಡಿ ಕ್ಲಾರ್ಕ್‌ ಹಾಗೂ ರಿಚಾ ಘೋಷ್‌ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 36 ಎಸೆತಗಳಲ್ಲಿ 42 ರನ್‌ ಸೇರಿಸಿತು. ಈ ವೇಳೆ ಕ್ಲಕ್‌ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 28 ರನ್‌ ಬಾರಿಸಿ ಔಟ್ ಆದರು.

ರಿಚಾ ಘೋಷ್‌ ಅಬ್ಬರ

7ನೇ ವಿಕೆಟ್‌ಗೆ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್‌ ಅವರನ್ನು ಸೇರಿಕೊಂಡ ಅರುಂಧತಿ ರೆಡ್ಡಿ ಸಹ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 52 ರನ್ ಸೇರಿಸಿ ತಂಡದ ಪರ ಗೆಲುವಿನ ಆಸೆ ಚಿಗುರಿಸಿತು. ಈ ಹಂತದಲ್ಲಿ ಅರುಂಧತಿ ರೆಡ್ಡಿ 14 ರನ್‌ ಬಾರಿಸಿ ಔಟ್ ಆದರು. ಇನ್ನು ರಿಚಾ ಘೋಷ್‌ ಪವರ್ ಫುಲ್ ಆಟವನ್ನು ಆಡಿದರು. ಕೊನೆಯ ಎರಡು ಓವರ್‌ಗಳಲ್ಲಿ 59 ರನ್ ಅವಶ್ಯಕ ಇದ್ದಾಗ ಅಮೋಘ ಬ್ಯಾಟಿಂಗ್ ನಡೆಸಿದರು. 19ನೇ ಓವರ್‌ನಲ್ಲಿ ಇವರು 27 ರನ್‌ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಕೊನೆಯ ಓವರ್‌ನಲ್ಲಿ 32 ರನ್‌ ಸೇರಿಸುವಲ್ಲಿ ವಿಫಲರಾದರು.

Story first published: Monday, January 26, 2026, 23:58 [IST]
Other articles published on Jan 26, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+