RCB ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್
ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನವನ್ನು ನೀಡಿದ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳಿಂದ ಆರ್‌ಸಿಬಿ (RCB) ತಂಡವನ್ನು ಸೋಲಿಸಿತು. ಈ ಲೀಗ್‌ನಲ್ಲಿ ಆರ್‌ಸಿಬಿ ಮೊದಲ ಸೋಲಿನ ಕಹಿಯನ್ನು ಕಂಡಿತು. ಈ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರೆ, ಆರ್‌ಸಿಬಿ ಸೋತರೂ ಮೊದಲ ಸ್ಥಾನ ಭಧ್ರ ಪಡಿಸಿಕೊಂಡಿದೆ.
110 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಶಫಾಲಿ ವರ್ಮಾ (16) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಲಿಜೆಲ್ ಲೀ (6) ಸಹ ಬೇಗನೆ ವಿಕೆಟ್ ಒಪ್ಪಿಸಿದರು.

24 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಆಟಗಾರ್ತಿ ಲಾರಾ ವೋಲ್ವಾರ್ಡ್ ಹಾಗೂ ನಾಯಕಿ ಜೆಮಿಮಾ ರೊಡ್ರಿಗಸ್ ಆಧಾರವಾದರು. ಈ ಜೋಡಿ ತಂಡ ಗೆಲುವಿನ ಹಂತಕ್ಕೆ ತಂದು ನಿಲ್ಲಿಸುವಂತೆ ಬ್ಯಾಟ್ ಮಾಡಿತು. ಲಾರಾ ವೋಲ್ವಾರ್ಡ್ ಹಾಗೂ ಜೆಮಿಮಾ ಜೋಡಿ 49 ಎಸೆತಗಳಲ್ಲಿ 52 ರನ್ ಸೇರಿಸಿತು. ಈ ವೇಳೆ ಜೆಮಿಮಾ 4 ಬೌಂಡರಿ ನೆರವಿನಿಂದ 24 ರನ್ ಸಿಡಿಸಿತು. ಲಾರಾ ವೋಲ್ವಾರ್ಡ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 42 ರನ್ ಬಾರಿಸಿದರು. ಮಾರಿಜಾನ್ ಕಪ್ ಅಜೇಯ 19 ರನ್ ಸಿಡಿಸಿದರು. ಅಂತಿಮವಾಗಿ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 111 ರನ್ ಸೇರಿಸಿತು.
ಆರ್‌ಸಿಬಿಗೆ ನಿರಾಸೆ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರೀಸ್ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 36 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಗ್ರೇಸ್ ಹ್ಯಾರಿಸ್ 9 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ನಾಯಕಿ ಸ್ಮೃತಿ ಮಂಧಾನ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 38 ರನ್ ಬಾರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೋಲ್ (11) ಹಾಗೂ ರಾಧಾ ಯಾದವ್ (18) ಅವರನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ಒಂದಂಕಿಯಲ್ಲಿ ಆಟ ಮುಗಿಸಿದರು. ಅಂತಿಮವಾಗಿ ಆರ್‌ಸಿಬಿ 109 ರನ್‌ಗಳಿಗೆ ಆಲೌಟ್ ಆಯಿತು. ಡೆಲ್ಲಿ ತಂಡದ ಪರ ನಂದಿನಿ ಶರ್ಮಾ 3, ಚಿನೆಲ್ಲೆ ಹೆನ್ರಿ, ಮರಿಜಾನ್ನೆ ಕಪ್, ಮಿನ್ನು ಮಣಿ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications