ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುದಾಬಿಯಲ್ಲಿ ನಡೆಯಲಿರುವ ಹರಾಜಿನಲ್ಲಿ 350 ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಸ್ಟಾರ್ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಮಾಲೀಕರ ಚಿತ್ತ ಕದಿಯಲಿದ್ದಾರೆ. ಇನ್ನು ಮಾಲೀಕರು ಸಹ ಈಗಾಗಲೇ ತಮ್ಮ ತಂಡಕ್ಕೆ ಬೇಕಾಗಿರುವ ಆಟಗಾರರ ಶಾರ್ಟ್ ಲೀಸ್ಟ್‌ಗಳನ್ನು ಮಾಡಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಆರ್‌ಸಿಬಿ ಸಹ ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದಾದ ಆಟಗಾರರನ್ನು ಗುರುತಿಸಿಕೊಂಡಿದೆ.
18ನೇ ಆವೃತ್ತಿಯ ಚಾಂಪಿಯನ್ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂಡವನ್ನು ಬಲ ಪಡಿಸಲು ಯೋಜನೆ ರೂಪಿಸಿಕೊಳ್ಳುತ್ತಿದೆ. ಈ ವೇಳೆ ಕೈ ಬಿಟ್ಟ ಆಟಗಾರರ ಬದಲಿಗೆ ಸ್ಟಾರ್ ಆಟಗಾರರನ್ನು ಖರೀದಿಸಿ ತಂಡದ ಸಮತೋಲನವನ್ನು ಬಲ ಪಡಿಸುವ ನಿಟ್ಟಿನಲ್ಲಿ ಆರ್‌ಸಿಬಿ ತಂತ್ರ ಹೆಣೆಯುತ್ತಿದೆ. ಈ ವೇಳೆ ಆರ್‌ಸಿಬಿ ಡೆತ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಬೌಲರ್‌ಗಳನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ.

ಆರ್‌ಸಿಬಿ ಹರಾಜಿನಲ್ಲಿ ಅನ್ರಿಕ್ ನಾರ್ಕಿಯೆ ಅವರಿಗೆ ಹಣದ ಹೊಳೆಯನ್ನು ಹರಿಸಲಿದೆ. ಅನ್ರಿಕ್ ನಾರ್ಕಿಯೆ ಟಿ20 ಕ್ರಿಕೆಟ್‌ನಲ್ಲಿ ಕ್ವಿಕ್ ಎಸೆತಗಳಿಗೆ ಹೆಸರುವಾಸಿ. ಅಲ್ಲದೆ ಡೆತ್ ಓವರ್‌ಗಳಲ್ಲಿ ಇವರು ಬಿಗುವಿನ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ. ಜೋಶ್ ಹ್ಯಾಜಲ್‌ವುಡ್‌ಗೆ ಉತ್ತಮ ಸಾಥ್ ನೀಡಬಲ್ಲ ವಿಶ್ವದ ಕ್ಲಾಸ್ ಬೌಲರ್ ಹುಡುಕಾಟದಲ್ಲಿ ಆರ್‌ಸಿಬಿ ಇದೆ. ಈ ವೇಳೆ ಅನ್ರಿಕ್ ನಾರ್ಕಿಯೆ ಒಳ್ಳೆಯ ಆಯ್ಕೆ. ಇವರು 2 ಕೋಟಿ ರೂ. ಮೂಲ ಬೆಲೆಯಿಂದ ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಅಲ್ಲದೆ ಇವರು ಐಪಿಎಲ್‌ನಲ್ಲಿ ಆಡಿದ 48 ಪಂದ್ಯಗಳಲ್ಲಿ 69 ವಿಕೆಟ್ ಕಬಳಿಸಿದ್ದಾರೆ.
ಶ್ರೀಲಂಕಾ ತಂಡದ ಮತಿಶ್ ಪತಿರಾಣಾ ಅವರು ಸಹ ಈ ಬಾರಿ ಹರಾಜಿನ ಅಂಗಳದಲ್ಲಿ ಇರುವ ಪ್ರತಿಭೆ. ಇವರು ಸಹ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲರು. ಅಲ್ಲದೆ ಮತಿಶ್, ಲಿಸತ್ ಮಲಿಂಗ್ ರೀತಿಯ ಬೌಲಿಂಗ್ ಶೈಲಿ ಹೊಂದಿರುವುದರಿಂದ ಪ್ರಭಾವ ಬೀರಬಲ್ಲರು. ಇವರು ಕೊನೆಯ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಮತಿಶ್ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಿದ ಅನುಭವ ಹೊಂದಿದ್ದು, ಇವರಿಗೆ ಆರ್‌ಸಿಬಿ ಗಾಳ ಹಾಕಬಹುದು. ಇವರ ಮೂಲ ಬೆಲೆ 2 ಕೋಟಿ ರೂ. ಆಗಿದ್ದು, ಹರಾಜಿನಲ್ಲಿ ಆರ್‌ಸಿಬಿ ಇವರಿಗೂ ಹಣವನ್ನು ಹೂಡಬಹುದು.
ಆರ್‌ಸಿಬಿ ಡೆತ್ ಓವರ್ ಸ್ಪೆಷಲಿಸ್ಟ್ ಬಿಟ್ಟರೆ, ಸ್ಪಿನ್ ಬೌಲರ್ ಹುಡುಕಟವನ್ನು ಹರಾಜಿನಲ್ಲಿ ನಡೆಸಲಿದೆ. ಈ ವೇಳೆ ಆರ್‌ಸಿಬಿ ವನಿಂದು ಹಸರಂಗ ಭಾರತದ ಯುವ ಬೌಲರ್ ರವಿ ಬಿಷ್ಣೋಯಿ ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಈ ಇಬ್ಬರು ಬೌಲರ್‌ಗಳು ಮಿಡ್ಲ್ ಓವರ್‌ನಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು.