Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ಟೀಮ್ ಇಂಡಿಯಾದ ಸ್ವಿಂಗ್ ಬೌಲರ್‌ಗೆ ಆರ್‌ಸಿಬಿ ಟಾರ್ಗೆಟ್‌

ಐಪಿಎಲ್‌ ರಿಟೆನ್ಷನ್‌ ಲೀಸ್ಟ್ ನೀಡಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಕೊನೆಯ ಹಂತದ ಕಸರತ್ತು ನಡೆಸಿವೆ. ಗುಜರಾತ್ ಟೈಟಾನ್ಸ್‌ ತಾನು ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಲೆಕ್ಕಾಚಾರ ಆರಂಭಿಸಿದೆ. ಎಲ್ಲ ತಂಡಗಳು ಅಕ್ಟೋಬರ್ 31 ರೊಳಗೆ ನೀಡಬೇಕಿದೆ.

ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಗುಜರಾತ್ ರಿಟೈನ್ಡ್ ಪಟ್ಟಿಯಲ್ಲಿ ಶುಭಮನ್ ಗಿಲ್ ಜೊತೆಗೆ ಇಬ್ಬರು ಆಟಗಾರರನ್ನು ಸೇರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ ಅವರ ಪಟ್ಟಿಯಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಹೆಸರು ಕಾಣಿಸುತ್ತಿಲ್ಲ. ಅಂದರೆ ಶಮಿ ಮತ್ತೊಮ್ಮೆ ಹರಾಜು ಅಂಗಳಕ್ಕೆ ಇಳಿಯುವುದು ಪಕ್ಕಾ ಆದಂತೆ ಕಾಣುತ್ತಿದೆ.

Rcb Targets Mohammed Shami for Ipl 2025 Rcb Target Pace Bowler

ಗುಜರಾತ್‌ ಯಾರಿಗೆ ಮಣೆ

ಮಾಹಿತಿಯ ಪ್ರಕಾರ ಗುಜರಾತ್ ಟೈಟಾನ್ಸ್ ತಂಡ ನಾಯಕ ಶುಭಮನ್‌ ಗಿಲ್‌ ಮೊದಲ ಆಯ್ಕೆಯ ಆಟಗಾರರಾಗಿ ಉಳಿಸಿಕೊಳ್ಳುವುದು ಪಕ್ಕಾ ಆದಂತೆ ಕಾಣುತ್ತಿದೆ. ಇವರ ಎರಡನೇ ಆಯ್ಕೆಯ ಆಟಗಾರ ಅಫ್ಘಾನಿಸ್ತಾನ ತಂಡದ ರಶೀದ್‌ ಖಾನ್‌ ಆಗುವ ಸಾಧ್ಯತೆ ಇದೆ. ಉಳಿದಂತೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರನ್ನು ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ತಂಡದಲ್ಲಿ ಕೆಲವು ಅನ್‌ಕ್ಯಾಪ್ಡ್‌ ಪ್ಲೇಯರ್‌ಗೆ ಸ್ಥಾನ ಲಭಿಸುವ ಸಾಧ್ಯತೆ ಇದೆ.

ಶಮಿ ಸದ್ಯ ಅಭ್ಯಾಸ ಆರಂಭಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಶಮಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಇವರು ಇನ್ನು ತಂಡಕ್ಕೆ ವಾಪಸ್ ಆಗಿಲ್ಲ. ಇವರನ್ನು ಆಸ್ಟ್ರೇಲಿಯಾ ಪ್ರವಾಸದ ತಂಡದಲ್ಲೂ ಸೇರಿಸಿಕೊಳ್ಳಲಾಗಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಇವರಿಗೆ ಸ್ಥಾನ ಲಭಿಸುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಶಮಿಗೆ ಹಿನ್ನಡೆ ಆಗಿದೆ. ಇನ್ನು ಇವರು ಮೈದಾನಕ್ಕೆ ಮರಳುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಹೀಗಾಗಿ ಫ್ರಾಂಚೈಸಿ ಇವರನ್ನು ಕೈ ಬಿಡುವ ಸಾಧ್ಯತೆ ಇದೆ.

ಆರ್‌ಸಿಬಿ ಟಾರ್ಗೆಟ್

ಆರ್‌ಸಿಬಿ ಹರಾಜಿನಲ್ಲಿ ದೇಶೀಯ ವೇಗದ ಬೌಲರ್‌ಗಳನ್ನು ಟಾರ್ಗೆಟ್ ಮಾಡಲಿದೆ. ಆರ್‌ಸಿಬಿ ಬಕೆಟ್‌ ಲೀಸ್ಟ್‌ನಲ್ಲಿ ಶಮಿ ಹೆಸರೂ ಸಹ ಇರಲಿದೆ. ಶಮಿ ಅವರ ಹೆಸರು ಬರುತ್ತಿದ್ದಂತೆ ಆರ್‌ಸಿಬಿ ಹಣದ ಹೊಳೆಯನ್ನು ಹರಿಸಬಹುದು. ಅಲ್ಲದೆ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿ ಆದಲ್ಲಿ, ತಂಡ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಒಬ್ಬ ಸ್ಟಾರ್ ಬೌಲರ್‌ ಸಿಕ್ಕಂತೆ ಆಗುತ್ತದೆ. ಅಲ್ಲದೆ ಇವರು ತಮ್ಮ ವೇರಿಯೆಷನ್‌ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ.

ಶಮಿ ಐಪಿಎಲ್ ಸಾಧನೆ

2013ರಲ್ಲಿ ಮೊಹಮ್ಮದ್ ಶಮಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇವರು ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ನಡೆಸಿದ್ದಾರೆ. ಒಟ್ಟು 110 ಪಂದ್ಯಗಳಲ್ಲಿ 127 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Wednesday, October 30, 2024, 13:24 [IST]
Other articles published on Oct 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+