Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2022: ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಹೇಗಿದೆ? ಇಲ್ಲಿದೆ ನೋಡಿ

RCB Team 2022 Players List: Full List of Royal challengers Bangalore With Price in Kannada

ಈ ಬಾರಿಯ ಹರಾಜು ಪ್ರಕ್ರಿಯೆ ಬಹುತೇಕ ಸಂಪೂರ್ಣವಾಗಿದ್ದು ಬೆಂಗಳೂರು ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದೆ. ಆರ್‌ಸಿಬಿ ತಂಡ ಹರಾಜಿನ ಮೊದಲ ದಿನ ಖರೀದಿಸಿದ ಆಟಗಾರರು ಹಾಗೂ ಕೆಲ ಆಟಗಾರರಿಗೆ ನೀಡಿದ ಮೊತ್ತದ ಬಗ್ಗೆ ಅಭಿಮಾನಿಗಳು ತೃಪ್ತಿಯನ್ನು ಹೊಂದಿರಲಿಲ್ಲ. ಆದರೆ ಎರಡನೇ ದಿನ ಕೆಲ ಉತ್ತಮ ನಿರ್ಧಾರಗಳನ್ನು ಆರ್‌ಸಿಬಿ ಫ್ರಾಂಚೈಸಿ ಮಾಡಿತು. ಹೀಗಾಗಿ ಎರಡನೇ ದಿನ ಅಲ್ಪ ಮೊತ್ತವನ್ನು ಪರ್ಸ್‌ನಲ್ಲಿ ಹೊಂದಿದ್ದರೂ ಕೆಲ ಉತ್ತಮ ಆಟಗಾರರನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹಾಗಾದರೆ ಈ ಬಾರಿಯ ಹರಾಜಿನ ನಂತರ ಆರ್‌ಸಿಬಿ ತಂಡ ಹೇಗಿದೆ? ಯಾವೆಲ್ಲಾ ಆಟಗಾರರು ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ತಂಡದ ಪಾಲಾಗಿದ್ದಾರೆ? ಯಾವ ಮೊತ್ತಕ್ಕೆ ಆರ್‌ಸಿಬಿ ಈ ಆಟಗಾರರನ್ನು ಹರಾಜಿನಲ್ಲಿ ತಂಡಕ್ಕೆ ಸೇರ್ಪಡೆಗೊಳಿಸಿದೆ? ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಸಿಬಿ ಪಾಲಾದ ಫಾಫ್, ಹರ್ಷಲ್, ಡಿಕೆ

ಆರ್‌ಸಿಬಿ ಪಾಲಾದ ಫಾಫ್, ಹರ್ಷಲ್, ಡಿಕೆ

ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಮೊದಲ ಬಿಡ್‌ಅನ್ನು ಅತ್ಯಂತ ಜಾಣ್ಮೆಯಿಂದ ನಡೆಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಬಲಿಷ್ಠ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಗೆ ಬಿಡ್ ಮಾಡಿದ ಆರ್‌ಸಿಬಿ 7 ಕೋಟಿ ರೂಪಾಯಿಗೆ ತಂಡಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾಯಿತು. ಅದಾದ ಬಳಿಕ ಕಳೆದ ಐಪಿಎಲ್ ಆವೃತ್ತಿಯ ಹೀರೋ ಹರ್ಷಲ್ ಪಟೇಲ್ ಅವರನ್ನು ಕೂಡ ದೊಡ್ಡ ಮೊತ್ತವನ್ನು ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು. ಹರ್ಷಲ್ ಪಟೇಲ್‌ಗಾಗಿ ಆರ್‌ಸಿಬಿ ಖರ್ಚು ಮಾಡಿದ್ದು 10.75 ಕೋಟಿ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಪ್ರಯತ್ನ ಆರಂಭಿಸಿತ್ತು. ನಂತರ ಅನುಭವಿ ದಿನೇಶ್ ಕಾರ್ತಿಕ್ ಕೂಡ ಆರ್‌ಸಿಬಿ ತಂಡದ ಪಾಲಾದರು. ವನಿಂದು ಹಸರಂಗ ಅವರನ್ನು ಕೂಡ 10.75 ಕೋಟಿ ನೀಡಿ ಖರೀದಿಸಿದ ಆರ್‌ಸಿಬಿ ಆಸಿಸ್ ವೇಗಿ ಜೋಶ್ ಹೇಜ;್‌ವುಡ್ ಅವರನ್ನು ಕೂಡ ತಂಡಕ್ಕೆ ಸೇರ್ಪಡೆಗೊಳಿಸಿದೆ.

ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ

ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ

ಫಾಫ್ ಡು ಪ್ಲೆಸಿಸ್ (7 ಕೋಟಿ), ಹರ್ಷಲ್ ಪಟೇಲ್ (10.75 ಕೋಟಿ), ವನಿಂದು ಹಸರಂಗ (10.75 ಕೋಟಿ), ದಿನೇಶ್ ಕಾರ್ತಿಕ್ (5.50 ಕೋಟಿ), ಜೋಶ್ ಹೇಜಲ್‌ವುಡ್ (7.75 ಕೋಟಿ), ಶಹಬಾಜ್ ಅಹ್ಮದ್ (2.40 ಕೋಟಿ) ಅನುಜ್ ರಾವತ್ (3.4 ಕೋಟಿ ರೂ.), ಆಕಾಶ್ ದೀಪ್ ಸಿಂಗ್ (20 ಲಕ್ಷ ರೂ.). ಮಹಿಪಾಲ್ ಲೊಮ್ರೋರ್ (95 ಲಕ್ಷ ರೂ.). ಫಿನ್ ಅಲೆನ್ (80 ಲಕ್ಷ ರೂ.), ಶೆರ್ಫೇನ್ ರುದರ್‌ಫೋರ್ಡ್ (1 ಕೋಟಿ ರೂ.), ಜೇಸನ್ ಬೆಹ್ರೆಂಡಾರ್ಫ್ (ರೂ. 75 ಲಕ್ಷ), ಸುಯಶ್ ಪ್ರಭುದೇಸಾಯಿ (ರೂ. 30 ಲಕ್ಷ), ಚಾಮಾ ಮಿಲಿಂದ್ (ರೂ. 25 ಲಕ್ಷ), ಅನೀಶ್ವರ್ ಗೌತಮ್ (ರೂ. 20 ಲಕ್ಷ), ಕರ್ಣ್ ಶರ್ಮಾ (50 ಲಕ್ಷ), ಲುವ್ನಿತ್ ಸಿಸೋಡಿಯಾ ( 20 ಲಕ್ಷ), ಸಿದ್ಧಾರ್ಥ್ ಕೌಲ್ (75 ಲಕ್ಷ), ಡೇವಿಡ್ ವಿಲ್ಲೆ (2 ಕೋಟಿ)

ರೀಟೈನ್ ಮಾಡಿಕೊಂಡಿರುವ ಆಟಗಾರರು

ರೀಟೈನ್ ಮಾಡಿಕೊಂಡಿರುವ ಆಟಗಾರರು

ಆರ್‌ಸಿಬಿ ಈ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ನಾಯಕ ವಿರಾಟ್ ಕೊಹ್ಲಿಯನ್ನು 15 ಕೋಟಿ ನೀಡಿ ಉಳಿಸಿಕೊಂಡಿದ್ದರೆ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ 11 ಕೋಟಿ ಮೊತ್ತಕ್ಕೆ ಆರ್‌ಸಿಬಿ ತಂಡದಲ್ಲಿ ಉಳಿದುಕೊಂಡಿದ್ದರು. ಇನ್ನು ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ 7 ಕೋಟಿ ನೀಡಿ ರೀಟೈನ್ ಮಾಡಿಕೊಂಡಿತ್ತು.

Suresh Raina ಪರಿಸ್ಥಿತಿ ನೋಡಿ ನೊಂದ ಅಭಿಮಾನಿಗಳು | Oneindia Kannada
ಯಾರಾಗಲಿದ್ದಾರೆ ಆರ್‌ಸಿಬಿ ನಾಯಕ?

ಯಾರಾಗಲಿದ್ದಾರೆ ಆರ್‌ಸಿಬಿ ನಾಯಕ?

ಇನ್ನು ಕಳೆದ ಬಾರಿಯ ಐಪಿಎಲ್ ಬಳಿಕ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಬಾರಿ ಆರ್‌ಸಿಬಿ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ. ಈ ಬಾರಿಯ ಹರಾಜಿನಲ್ಲಿ ಖರೀದಿಸಿರುವ ಆಟಗಾರರ ಪೈಕಿ ಕೆಲ ಆಟಗಾರರು ನಾಯಕನಾಗಿಯೂ ಯಶಸ್ಸು ಕಂಡವರಿದ್ದಾರೆ. ಆದರೆ ಆರ್‌ಸಿಬಿ ಫ್ರಾಂಚೈಸಿ ಯಾರನ್ನು ನಾಯಕನನ್ನಾಗಿ ನೇಮಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ರೀಟೈನ್ ಮಾಡಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್, ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳಲು ಕಂಡು ಬರುತ್ತಿರುವ ಕೆಲ ಪ್ರಮುಖ ಹೆಸರುಗಳಾಗಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Story first published: Monday, February 14, 2022, 9:30 [IST]
Other articles published on Feb 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+