ಐಪಿಎಲ್ ಹರಾಜು: ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಿನಿ ಹರಾಜಿನ ಬಳಿಕ ಹೇಗಿದೆ?

ಈ ಬಾರಿಯ ಮಿನಿ ಹರಾಜಿನಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 2023ರ ಐಪಿಎಲ್‌ಗಾಗಿ ಕೆಲ ಗಮನಾರ್ಹ ಸೇರ್ಪಡೆಯನ್ನು ಮಾಡಿದೆ. ಕೊಚ್ಚಿಯಲ್ಲಿ ಡಿಸೆಂಬರ್ 23ರಂದು ನಡೆದ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5.5 ಕೋಟಿ ರೂಪಾಯಿ ನೀಡಿ ಬಂಗಾಳದ ವೇಗಿ ಮುಖೇಶ್ ಕುಮಾರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದು ಇದು ಈ ಮಿನಿ ಹರಾಜಿನಲ್ಲಿ ಡಿಸಿ ಒಬ್ಬ ಆಟಗಾರನ ಮೇಲೆ ಹೂಡಿಕೆ ಮಾಡಿರುವ ದೊಡ್ಡ ಮೊತ್ತವಾಗಿದೆ.
ಈ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಿಮ್ ಸೈಫರ್ಟ್, ಮಂದೀಪ್ ಸಿಂಗ್, ಕೆಎಸ್ ಭರತ್ ಮತ್ತು ಅಶ್ವಿನ್ ಹೆಬ್ಬಾರ್ ಅವರನ್ನು ಬಿಡುಗಡೆಗೊಳಿಸಿತ್ತು. ಇನ್ನು ಅನುಭವಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಟ್ರೇಡ್ ಮಾಡಿಕೊಂಡಿತ್ತು. ಅಮನ್ ಖಾನ್ ಅವರನ್ನು ಕೆಕೆಆರ್ ತಂಡದಿಂದ ತನ್ನ ತಂಡಕ್ಕೆ ಟ್ರೇಡ್ ಮೂಲಕ ಸೇರ್ಪಡೆಗೊಳಿಸಿಕೊಂಡಿತ್ತು.

ಮನೀಶ್ ಪಾಂಡೆ, ರೊಸ್ಸೋ ಡಿಸಿಗೆ ಸೇರ್ಪಡೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಹರಾಜಿಗೆ 19.45 ಕೋಟಿ ರೂಪಾಯಿ ಮೊತ್ತದೊಂದಿಗೆ ಹರಾಜಿನ ಅಖಾಡಕ್ಕೆ ಇಳಿದಿತ್ತು. ಡಿಸಿ ತಂಡಕ್ಕೆ ಬೇಕಿದ್ದಿದ್ದು ಕೇವಲ ಐವರು ಆಟಗಾರರು ಮಾತ್ರ. ಇದರಲ್ಲಿ ಇಬ್ಬರು ವಿದೇಶೀ ಆಟಗಾರರ ಸ್ಥಾನ ಖಾಲಿಯಿತ್ತು. ಫಿಲ್ ಸಾಲ್ಟ್ ಅವರನ್ನು 2 ಕೊಟಿ ರೂಪಾಯಿಗೆ ಸೇರ್ಪಡೆಗೊಳಿಸುವ ಮೂಲಕ ಚಾಲನೆ ನೀಡಿತು. ಬಳಿಕ ಅನುಭವಿ ಆಟಗಾರರಾದ ಕನ್ನಡಿದ ಮನೀಶ್ ಪಾಂಡೆ, ರಿಲೀ ರೊಸ್ಸೋ ಕೂಡ ಡಿಸಿ ಮಾಲಾದರು. ಈ ಇಬ್ಬರು ಕೂಡ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದುಕೊಂಡಿದ್ದರು. ಇನ್ನು ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರರ್ಮ್ ಪ್ರದರ್ಶಿಸುತ್ತಿರುವ ಬಂಗಾಳದ ವೇಗಿ ಮುಕೇಶ್ ಕುಮಾರ್ ಅವರನ್ನು 5.5 ಕೋಟಿ ರೂಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ. ಇನ್ನು ಅನುಭವಿ ಇಶಾಂತ್ ಶರ್ಮ ಕೂಡ ಡಿಸಿ ಪಾಲಾಗಿದ್ದಾರೆ.

ಡೆಲ್ಲಿ ಸೇರ್ಪಡೆಗೊಳಿಸಿದ ಆಟಗಾರರು ಹಾಗೂ ಮೊತ್ತ
ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ 50 ಲಕ್ಷ ರೂಪಾಯಿಗೆ ಡಿಸಿ ಪಾಲಾದರೆ ಇಂಗ್ಲೀಷ್ ಕ್ರಿಕೆಟಿಗ ಫಿಲ್ ಸಾಲ್ಟ್ 2 ಕೋಟಿ ರೂಪಾಯಿಗೆ ಹರಾಜಾದರು. ಇನ್ನು ವೇಗಿ ಮುಕೇಶ್ ಕುಮಾರ್ ಅವರನ್ನು 5.5 ಕೋಟಿ ರೂಪಾಯಿ ನೀಡಿ ಡಿಸಿ ಕೊಂಡುಕೊಂಡಿದೆ. ಅನುಭವಿ ಆಟಗಾರ ಮನೀಶ್ ಪಾಂಡೆ 2.4 ಕೋಟಿಗೆ ಹರಾಜಾದರೆ ರಿಲೀ ರೊಸ್ಸೋ 4.6 ಕೋಟಿಗೆ ಹರಾಜಾದರು.

ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್
ರಿಷಬ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಕೇಶ್ ಕುಮಾರ್, ಮನೀಶ್ ಪಾಂಡೆ, ರಿಲೀ ರೂಸೋವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications