ರಾಯಲ್ ಚಾಲೆಂಜರ್ಸ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಾರಾ?!

ಬೆಂಗಳೂರು, ಸೆಪ್ಟೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಕರ್ಷಣೀಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಒಂದೇ ಒಂದು ಸಾರಿಯೂ ಕಪ್ ಗೆದ್ದಿಲ್ಲ. ಆರ್‌ಸಿಬಿ ನಾಯಕತ್ವ ವಹಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದೊಂದು ರೀತಿಯಲ್ಲಿ ಹಿನ್ನಡೆಯೇ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ವೈಫಲ್ಯ ಅನುಭವಿಸಿದ್ದರೂ ಮುಂಬರುವ 2020ರ ಐಪಿಎಲ್ ಸೀಸನ್‌ನಲ್ಲಿ ತಂಡದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆರ್‌ಸಿಬಿ ನೂತನ ನಿರ್ದೇಶಕ ಮೈಕ್ ಹೆಸನ್ ಹೇಳಿಕೊಂಡಿದ್ದಾರೆ.
ಗುರುವಾರ (ಸೆಪ್ಟೆಂಬರ್ 19) ಸಂದರ್ಶನವೊಂದರಲ್ಲಿ ಮಾತನಾಡಿದ ಹೆಸನ್, 'ವಿರಾಟ್ ಕೊಹ್ಲಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ನಾವೇನೂ ಹೇಳುತ್ತಿಲ್ಲ. ಆದರೆ ಮುಂದಡಿಯಿಡುತ್ತಿರುವ ಕೊಹ್ಲಿ ಹಿಂದಿನ ತಪ್ಪುಗಳಿಂದ ಕಲಿಯುತ್ತಿದ್ದಾರೆ,' ಎಂದರು.
ತಂಡದ ನಾಯಕತ್ವದಲ್ಲಿನ ಬದಲಾವಣೆಯ ಬಗ್ಗೆ ಸುದ್ದಿಗಾರರಿಗೆ ಉತ್ತರಿಸಿದ ಮೈಕ್, 'ನಾವು ಕೆಲ ವಾರಗಳಿಂದ ಚರ್ಚಿಸಿದಂತೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬದಲಾವಣೆ ತರುವ ಪ್ರಶ್ನೆಯೇ ಇಲ್ಲ,' ಎಂದು ಸ್ಪಷ್ಟನೆ ನೀಡಿದ್ದಾರೆ. ಆರ್‌ಸಿಬಿಗೆ ನ್ಯೂಜಿಲೆಂಡ್ ಮಾಜಿ ಕೋಚ್ ಹೆಸನ್ ನಿರ್ದೇಶಕರಾಗಿ, ಆಸ್ಟ್ರೇಲಿಯಾ ಮಾಜಿ ಕೋಚ್ ಸೈಮನ್ ಕಟಿಚ್ ಮುಖ್ಯಕೋಚ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು.
ಅಂದ್ಹಾಗೆ ಐಪಿಎಲ್‌ನಲ್ಲಿ ಒಂದೇ ಒಂದು ಬಾರಿ ಟ್ರೋಫಿ ಗೆಲ್ಲದ ಮೂರೇ ತಂಡಗಳಲ್ಲಿ ಆರ್‌ಸಿಬಿ ಕೂಡ ಗುರುತಿಸಿಕೊಂಡಿದೆ. ಆರ್‌ಸಿಬಿ, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಂದೂ ಸೀಸನ್‌ನಲ್ಲಿ ಪ್ರಶಸ್ತಿ ಜಯಿಸಿಲ್ಲ. 2020ರಲ್ಲಾದರೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications