RCB ಪಂದ್ಯದ Ticket ಬುಕ್ ಮಾಡುವುದು ಹೇಗೆ? ಉಚಿತ ಮೆಟ್ರೋ ಪ್ರಯಾಣದ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಬರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಮೆಟ್ರೋ ನೀಡಿದೆ.
ಆರ್‌ಸಿಬಿ ಪಂದ್ಯದ ಟಿಕೆಟ್‌ಗಳನ್ನು ಕೇವಲ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಅಥವಾ RCB ಅಧಿಕೃತ ಆ್ಯಪ್ ಮೂಲಕ ಮಾತ್ರ ಖರೀದಿಸಬಹುದಾಗಿದೆ. ಅಲ್ಲದೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮೂರನೇ ವ್ಯಕ್ತಿ ಅಥವಾ ಅನಧಿಕೃತ ವೆಬ್‌ಸೈಟ್‌ಗಳಿಂದ ಟಿಕೆಟ್ ಖರೀದಿಸಿ ವಂಚನೆಗೊಳಗಾಗದಂತೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದೆ.

ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಈ ಬಾರಿ ಆರ್‌ಸಿಬಿ ಮೈದಾನವನ್ನು ಪ್ರವೇಶಿಸಲಿದ್ದು, ಅಪಾರ ಸಂಖ್ಯೆ ಅಭಿಮಾನಿಗಳು ರಜತ್ ಪಾಟಿದಾರ ಪಡೆಯ ಆಟವನ್ನು ನೋಡಲು ಬರಲಿದ್ದಾರೆ.
ಆರ್‌ಸಿಬಿ ತವರಿನ ಪಂದ್ಯಗಳನ್ನು ಪಡೆಯಲು ಮಾರ್ಗಸೂಚಿ
- ಆರ್‌ಸಿಬಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (shop.royalchallengers.com) ಟಿಕೆಟ್ ಬುಕ್ ಮಾಡಿಕೊಳ್ಳಬಹುದು
- ನೀವು ನೋಡಲು ಬಯಿಸುವ ಪಂದ್ಯವನ್ನು ಇದರಲ್ಲಿ ಸೆಲೆಕ್ಟ್ ಮಾಡಿ
- ನಿಮ್ಮ ಆದ್ಯತೆಯ ಆಸನ ಹಾಗೂ ಟಿಕೆಟ್‌ಗಳ ಸಂಖ್ಯೆಯನ್ನು ಆರಿಸಿ.
- ವಾಹನ ಪಾರ್ಕಿಂಗ್ ಮಾಡಲು ಮೊದಲೇ ಆಯ್ಕೆ ಮಾಡಿಕೊಳ್ಳಿ. ಗರುಡ ಮಾಲ್, ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್, ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್ ಸೇರಿದಂತೆ ಅನುಮೋದಿತ ವಲಯಗಳಲ್ಲಿ ಸೀಮಿತ ಸ್ಥಳಗಳು ಲಭ್ಯವಿದೆ.
- ಹಣವನ್ನು ಪಾವತಿಯನ್ನು ಪೂರ್ಣಗೊಳಿಸಿ ಮತ್ತು ಇ-ಟಿಕೆಟ್ ಸ್ವೀಕರಿಸಿ.
- ಪಡೆದ ಟಿಕೆಟ್‌ಗಳಲ್ಲಿ ಇರುವ ಕ್ಯೂಆರ್ ಕೋಡ್ ಬಳಸಿಕೊಂಡು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹೇಗೆಂದರೆ ಕ್ಯೂಆರ್ ಕೋಡ್ ಅನ್ನು ಮೆಟ್ರೋ ಗೇಟ್‌ನಲ್ಲಿ ಸ್ಕ್ಯಾನ್ ಮಾಡಿ, ಉಚಿತ ಮೆಟ್ರೋ ಪ್ರಯಾಣವನ್ನು ಅಭಿಮಾನಿಗಳು ಆನಂದಿಸಬಹುದಾಗಿದೆ.
- ಅಭಿಮಾನಿಗಳು ಪಂದ್ಯಕ್ಕೆ ಬರುವ ಮುನ್ನ ಖಡ್ಡಾಯವಾಗಿ ತರಬೇಕು. ಅಲ್ಲದೆ ಮೈದಾನವನ್ನು ಪ್ರವೇಶಿಸಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಸಹಕರಿಸಬೇಕಾಗಿದೆ. ಅಲ್ಲದೆ ಪ್ರವೇಶಕ್ಕಾಗಿ ಲಿಂಕ್ ರೋಡ್ ಹಾಗೂ ಕಬ್ಬನ್ ರೋಡ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪಂದ್ಯದ ದಿನದಂದು ಅಭಿಮಾನಿಗಳು ಟಿಕೆಟ್‌ಗಳನ್ನು ಬಳಸಿ ಮೆಟ್ರೋ ಪ್ರಯಾಣವನ್ನು ಉಚಿತವಾಗಿ ಮಾಡಬಹುದು. ಅಲ್ಲದೆ ಟಿಕೆಟ್ ಸ್ಕ್ಯಾನ್ ಮಾಡಿ ಉಪಯೋಗ ಪಡೆಯಬಹುದಾಗಿದೆ.
ಆರ್‌ಸಿಬಿ ತವರಿನಲ್ಲಿ ಮೊದಲ ಹಂತದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಮಾರ್ಚ್ 28 ರಂದು ಉದ್ಘಾಟನಾ ಪಂದ್ಯದ ಬಳಿಕ, ಬೆಂಗಳೂರಿನಲ್ಲಿ ಎರಡನೇ ಪಂದ್ಯ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications