ಚಾಂಪಿಯನ್ ಕ್ಯಾಪ್ಟನ್‌ಗೆ ಬಿಡ್ ಮಾಡುತ್ತಾ RCB?
ಐಪಿಎಲ್ ಮೆಗಾ ಹರಾಜು 2025ರ ಕ್ಷಣಗಣನೆ ಆರಂಭವಾಗಲಿದೆ. ಈ ಹರಾಜಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಮೂರು ವರ್ಷಗಳ ನಂತರ ಮೆಗಾ ಹರಾಜು ನಡೆಯಲಿದ್ದು, 10 ತಂಡಗಳು ಸಾಕ್ಷಿ ಆಗಲಿವೆ. ಈ ಹರಾಜಿನಲ್ಲಿ ಹಲವು ತಂಡಗಳು ಕಾತುರವಾಗಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸುತ್ತಿರುವುದು ಎಲ್ಲರ ಚಿತ್ತ ಕದ್ದಿದೆ. ಈ ಸೂಪರ್ ಸ್ಟಾರ್ ಆಟಗಾರರಿಗೆ ಹಣದ ಹೊಳೆಯನ್ನು ಹರಿಸಲು ಮಾಲೀಕರು ಸಿದ್ಧರಾಗಿದ್ದಾರೆ.
ಐಪಿಎಲ್ ರಿಟೇನ್ಷನ್ ಲೀಸ್ಟ್ ಬಿಡುಗಡೆ ಆದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಆರ್‌ಸಿಬಿ ತಂಡದ ಕ್ಯಾಪ್ಟನ್ ಫಾಫ್ ಡುಪ್ಲೇಸಿಸ್ ಹಾಗೂ ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಂದಾಳು ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ಈ ನಾಲ್ವರು ನಾಯಕರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಲಿದ್ದಾರೆ.

ಹರಾಜಿನಲ್ಲಿರುವ ನಾಯಕರು
ಈ ಬಾರಿಯ ಹರಾಜಿನಲ್ಲಿ ಹಲವು ತಂಡಗಳು ನಾಯಕನ ಹುಡುಕಾಟ ನಡೆಸಲಿವೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಸಹ ಅಂಗಳ ಪ್ರವೇಶಿಸಲಿದೆ. ಆರ್‌ಸಿಬಿ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಟ್ಟಿದ್ದು, ಇವರ ರಿಪ್ಲೇಸ್ ಮೆಂಟ್ ಹುಡುಕಾಟ ನಡೆಸಲಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹಲವು ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರು ಅಂಗಳ ಪ್ರವೇಶಿಸಲಿದ್ದಾರೆ.
ಆರ್‌ಸಿಬಿ ಮಹತ್ವದ ನಿರ್ಧಾರ?
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನಾಯಕನ ಹುಡುಕಾಟ ನಡೆಸಲಿವೆ. ಈ ಹರಾಜಿನಲ್ಲಿ ಉತ್ತಮ ಪ್ಲೇಯರ್ ಸಿಕ್ಕರೆ ಅವರನ್ನು ಪಿಕ್ ಮಾಡಲು ಬೇರೆ ತಂಡಗಳು ಸಿದ್ಧರಾಗಿದ್ದಾರೆ. ಐಪಿಎಲ್ ಹರಾಜಿಗೆ ಸುಮಾರು 48 ಗಂಟೆಗಳ ಮೊದಲು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.
ಚಾಂಪಿಯನ್ ಕ್ಯಾಪ್ಟನ್‌ಗೆ ಬಿಡ್?
ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಕಳೆದ ಋತುವಿನಲ್ಲಿ ಚಾಂಪಿಯನ್ ಆಗಿತ್ತು. ಆದರೆ ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರನ್ನು ಕೊಳ್ಳಲು ಹಲವು ಮಾಲೀಕರು ಹಣವನ್ನು ಹೂಡಬಹುದು. ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅಯ್ಯರ್‌ಗೆ ದೊಡ್ಡ ಬಿಡ್ ಮಾಡಲು ಸಿದ್ಧವಾಗಿವೆ ಎಂದು ವರದಿ ಹೇಳುತ್ತದೆ.
ಫಾಫ್ ಬದಲಿಗೆ ಆರ್‌ಸಿಬಿ ಮತ್ತು ಪಂತ್ ಬದಲಿಗೆ ಡೆಲ್ಲಿ ಕೂಡ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಬಹುದು. ಅಯ್ಯರ್‌ಗಾಗಿ ಆರ್‌ಸಿಬಿ ಹಣದ ಹೊಳೆಯನ್ನು ಹರಿಸಬಹುದು ಎಂದು ಹೇಳಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications