RCB Unbox Event: ವಿರಾಟ್ ಕೊಹ್ಲಿ ಹೊಸ ಅಧ್ಯಾಯ ಆರಂಭ ಎಂದಿದ್ದು ಏಕೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ವಿರಾಟ್ ಮಾತನಾಡಿರುವ ಆ ಒಂದು ಕನ್ನಡ ಲೈನ್ ಸಂಚಲನ ಮೂಡಿಸಿದೆ. ದೊಡ್ಡ ಕಾರ್ಯಕ್ರಮದಲ್ಲಿ ಚೇಸಿಂಗ್ ಸ್ಟಾರ್ ಹಾಗೇ ಹೇಳಿದ್ದು ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಐಪಿಎಲ್ 2024 ಶುಕ್ರವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕಾದಾಟವನ್ನು ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಹೇಳಿದ ಆ ಒಂದು ಲೈನ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅನ್ ಬಾಕ್ಸ್ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಹೇಳಿದರು. ಹೀಗೆ ಹೇಳಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಯಾವೆಲ್ಲಾ ದೃಷ್ಟಿಯಿಂದ ವಿರಾಟ್ ಹೀಗೆ ಹೇಳಿರಬಹುದು ಎಂಬ ಸಂಶಯ ಅಭಿಮಾನಿಗಳಿಗೆ ಕಾಡುತ್ತಿದೆ.

ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿದ್ದಕ್ಕೆ ಹೀಗೆ ಹೇಳಿದರಾ ಕೊಹ್ಲಿ?
ಇತ್ತೀಚಿಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಆರ್‌ಸಿಬಿ ಮಹಿಳಾ ತಂಡ 16 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದಕ್ಕೆ ಹೊಸ ಅಧ್ಯಾಯ ಎಂದರಾ ಎಂಬ ಸಂಶಯ ಉದ್ಭವಿಸಿದೆ.
ಕಲರ್ ಚೇಂಜ್ ಆಗಿದ್ದಕ್ಕಾ?
ಆರ್‌ಸಿಬಿ ಕಳೆದ ಕೆಲವು ವರ್ಷಗಳಿಂದ ಕಪ್ಪು ಹಾಗೂ ಕೆಂಪು ಬಣ್ಣದ ಜೆರ್ಸಿಗಳನ್ನು ತೊಟ್ಟು ಆಡುತ್ತಿತ್ತು. ಈ ಬಾರಿ ಕಪ್ಪು ಬಣ್ಣದ ಬದಲು ನೀಲಿ ಬಣ್ಣದಲ್ಲಿ ಆರ್‌ಸಿಬಿ ಕಂಗೊಳಿಸಲಿದೆ. ಈ ದೃಷ್ಟಿಯಿಂದ ವಿರಾಟ್ ಹೀಗೆ ಹೇಳಿರಬಹುದು ಎಂಬ ಸಂಶಯ ಮನೆ ಮಾಡಿದೆ.
ಹೆಸರು ಬದಲಾವಣೆ ಆಗಿದ್ದಕ್ಕಾ?
16 ಆವೃತ್ತಿಗಳಲ್ಲಿ ಪ್ರಶಸ್ತಿ ಬರವನ್ನು ಎದುರಿಸುವಲ್ಲಿ ವಿಫಲರಾದ ಆರ್‌ಸಿಬಿ ಬೇಸತ್ತು, ಈ ಬಾರಿ ಹೆಸರು ಚೇಂಜ್ ಮಾಡಿದೆ. ಮೊದಲು ರಾಯಲ್ ಚಾಲೆಂಜರ್ಸ್ Bangalore ಎಂದು ಇತ್ತು. ಈಗ ರಾಯಲ್ ಚಾಲೆಂಜರ್ಸ್ Bengaluru ಎಂದಾಗಿದೆ.
ಯುವಕರಿಗೆ ಮಣೆ ಹಾಕುವ ದೃಷ್ಟಿಯಿಂದ ಹೀಗೆ ಹೇಳಿದರಾ ಕೊಹ್ಲಿ?
ಆರ್‌ಸಿಬಿ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಯುವಕರಿಗೆ ಮಣೆ ಹಾಕುತ್ತದೆ ಎಂಬ ಸಂದೇಶವನ್ನು ಸಾರಲು ವಿರಾಟ್ ಈ ವೇದಿಕೆಯನ್ನು ಹೀಗೆ ಬಳಸಿಕೊಂಡ್ರಾ ಎಂಬ ಸಂಶಯ ಕಾಡುತ್ತಿದೆ.
ಭಾರತೀಯ ಆಟಗಾರರಿಗೆ ಮನ್ನಣೆ ಸಿಗುವ ದೃಷ್ಟಿಯಿಂದ ಹೇಳಿದ ಮಾತಾ?
ಆರ್‌ಸಿಬಿ ಮೊದಲಿನಿಂದಲೂ ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಮೋಹವನ್ನು ಹೊಂದಿತ್ತು. ಈಗಲೂ ಇದೆ. ಈ ಮೋಹ ಕ್ರಮೇಣ ಕಡಿಮೆ ಆಗಿ ಭಾರತೀಯ ಆಟಗಾರರಿಗೆ ಮಣೆ ಹಾಕುವ ಉದ್ದೇಶದಿಂದ ವಿರಾಟ್ ಹೊಸ ಅಧ್ಯಾಯ ಆರಂಭ ಎಂದು ಹೇಳಿದರಾ ಎಂದು ಅಭಿಮಾನಿಗಳಿಗೆ ಕಾಡುತ್ತಿದೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 2.0 ದರ್ಶನ?
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವುದು ಅನಿವಾರ್ಯ. ವಿರಾಟ್ ಅವರಿಗೆ ಚುಟುಕು ವಿಶ್ವಕಪ್‌ನಲ್ಲಿ ಸ್ಥಾನ ನೀಡಬಾರದು ಎಂಬ ಕೂಗ ಕೇಳಿ ಬರುತ್ತಿದೆ. ತಮ್ಮ ಮೇಲಿನ ಟೀಕೆಗೆ ಉತ್ತರ ನೀಡಲು ಕೊಹ್ಲಿ ಮೈದಾನದಲ್ಲಿ ಅಬ್ಬರಿಸುವುದು ಅನಿವಾರ್ಯ.
ಈ ಬಾರಿ ಸಂಘಟಿತ ಆಟವೇ ಬಲನಾ?
ಆರ್‌ಸಿಬಿ ಕಳೆದ ಕೆಲವು ಆವೃತ್ತಿಗಳಲ್ಲಿ ಕೆಲವು ಆಟಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿತ್ತು. ಅದರಲ್ಲೂ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚಿನ ಹೊರೆ ಹಾಕಲಾಗುತಿತ್ತು. ಈ ಬಾರಿ ಬ್ಯಾಟಿಂಗ್, ಬೌಲಿಂಗ್ ಸಮಬಲದಲ್ಲಿದೆ ಎಂಬ ಉದ್ದೇಶದಿಂದ ವಿರಾಟ್ ಹೀಗೆ ಹೇಳಿದಂತೆ ಕಾಣುತ್ತಿದೆ.
ಟಾಪ್ ಆರ್ಡರ್‌ಗಳ ಮೇಲೆ ಒತ್ತಡ ಕಡಿಮೆ ಆಗಿದ್ದಕ್ಕೆ ಹೀಗೆ ಹೇಳಿದ್ರಾ?
ಆರ್‌ಸಿಬಿ ಹಲವು ಆವೃತ್ತಿಗಳಲ್ಲಿ ಟಾಪ್ ಆರ್ಡರ್ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಆದರೆ ಈ ಬಾರಿ ಯುವಕರು ಹಾಗೂ ಸ್ಟಾರ್ ಆಲ್‌ರೌಂಡರ್‌ಗಳು ತಂಡ ಸೇರಿಕೊಂಡಿದ್ದರಿಂದ ಟಾಪ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಆಗಿದೆ ಎಂದು ಹೇಳಿದರಾ ಕೊಹ್ಲಿ ಎಂಬ ಸಂಶಯ ಮನೆ ಮಾಡಿದೆ.
ವೇಗದ ಬೌಲಿಂಗ್ ವಿಭಾಗ ಸ್ಟ್ರಾಂಗ್ ಆಗಿದಕ್ಕಾ?
ಇನ್ನು ಹಲವು ವರ್ಷಗಳಿಂದ ಆರ್‌ಸಿಬಿ ದೌರ್ಬಲ್ಯದಂತೆ ಕಾಣುತ್ತಿದ್ದ ವೇಗದ ಬೌಲಿಂಗ್ ವಿಭಾಗ ಈ ಬಾರಿ ಕೊಂಚ ಸ್ಟ್ರಾಂಗ್ ಇದ್ದಂತೆ ಕಾಣುತ್ತದೆ. ವಿಶ್ವದ ಸ್ಟಾರ್ ವೇಗದ ಬೌಲರ್‌ಗಳು ಹಾಗೂ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ತಂಡದಲ್ಲಿ ಇರುವುದುರಿಂದ ಹೊಸ ಅಧ್ಯಾಯ ಎಂದರಿಬಹುದು.
ಆಲ್‌ರೌಂಡರ್ ಬಲ ಹೆಚ್ಚಾಗಿದ್ದಕ್ಕಾ?
ಆರ್‌ಸಿಬಿ ತಂಡದಲ್ಲಿ ಆಲ್‌ರೌಂಡರ್‌ಗಳು ಕಡಿಮೆ ಇದ್ದರು. ಆದರೆ ಈ ಬಾರಿ ಆಲ್‌ರೌಂಡರ್‌ಗಳ ಸಂಖ್ಯೆ ಹೆಚ್ಚಾಗಿದೆ. ವಿಶ್ವದ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವು ಗ್ಲೇನ್ ಮ್ಯಾಕ್ಸ್‌ವೆಲ್, ಕ್ಯಾಮ್ರೂನ್ ಗ್ರೀನ್, ಕರ್ನಾಟಕದ ವಿಜಯಕುಮಾರ್ ವೈಶಾಖ್, ಮಯಾಂಕ್ ದಗಾರ್, ಮಹಿಪಾಲ್ ಲೋಮ್ರಾರ್ ತಂಡದಲ್ಲಿ ಆಲ್‌ರೌಂಡರ್ ಸ್ಥಾನವನ್ನು ತುಂಬಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications