ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಅಂಗಳಕ್ಕೆ ಪ್ರವೇಶಿಸಲಿದ್ದು, ಕುತೂಹಲ ಹೆಚ್ಚಿಸಿದೆ. ಮಹೇಂದ್ರ ಸಿಂಗ್ ಧೋನಿ ಸಾರಾಥ್ಯದಲ್ಲಿ ಸಿಎಸ್‌ಕೆ ತಂಡ ಕಾಣಿಸಿಕೊಂಡರೆ, ವಿರಾಟ್ ಬೆಂಗಳೂರು ತಂಡದ ಮುಖವಾಗಿದ್ದಾರೆ. ಈ ಇಬ್ಬರು ಅಂಗಳಕ್ಕೆ ಇಳಿದಾಗ ಹೈ ಜೋಶ್ ಇದ್ದೇ ಇರುತ್ತದೆ.
ಈ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಣ ಜಿದ್ದಾಜಿದ್ದಿನ ಕಾದಾಟ ಕಂಡು ಬರಲಿದೆ. ಚೆನ್ನೈ ತಂಡ ಅಂಗಳಕ್ಕೆ ಇಳಿಯುವ ಮುನ್ನವೇ ತಂಡಕ್ಕೆ ಹಿನ್ನಡೆ ಆಗಿದೆ. ಎರಡೂ ತಂಡಗಳಲ್ಲಿ ಗಾಯ ಬಹುವಾಗಿ ಕಾಡುತ್ತಿದೆ. ಬೆಂಗಳೂರು ತಂಡದ ಸ್ಟಾರ್ ಆಟಗಾರ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿರಲಿಲ್ಲ. ಈ ವೇಳೆ ಇವರು ಗಾಯದ ಸಮಸ್ಯೆ ಬಹುವಾಗಿ ಕಾಡಿತ್ತು. ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಚೆನ್ನೈ ವಿರುದ್ಧ ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ.

ಗಾಯದ ಸಮಸ್ಯೆ ಬರೀ ಆರ್‌ಸಿಬಿಗಷ್ಟೇ ಕಾಡುತ್ತಿಲ್ಲ, ಚೆನ್ನೈ ತಂಡಕ್ಕೂ ಬಹುವಾಗಿ ಕಾಡುತ್ತಿದೆ. ಇದರಿಂದ ಎರಡೂ ತಂಡಗಳ ಲೈನ್‌ಅಪ್ ಚೇಂಜ್ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಇವರ ಬದಲಿಗೆ ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದು ದೊಡ್ಡ ಚಿಂತೆ ಆಗಿದೆ. ಚೆನ್ನೈ ತಂಡದ ಪರ ಸ್ಟಾರ್ ವೇಗದ ಬೌಲರ್ ಗಾಯಕ್ಕೆ ತುತ್ತಾಗಿದ್ದು ಚಿಂತೆಯನ್ನು ಹೆಚ್ಚಿಸಿದೆ.
ಮಹೇಶ್ ಪತಿರಾಣಾ: ಶ್ರೀಲಂಕಾ ತಂಡದ ವೇಗಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಇವರ ಗಾಯದ ಸಮಸ್ಯೆ ತಂಡಕ್ಕೆ ಪೆಟ್ಟು ನೀಡಿದೆ. ಇವರು ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇವರ ಅನುಪಸ್ಥಿತಿಯಲ್ಲಿ ನಾಥನ್ ಎಲ್ಲಿಸ್ ತಂಡದಲ್ಲಿ ಸ್ಥಾನ ಪಡೆಯಬಹುದು. ಇವರು ಮುಂಬೈ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದರಿಂದ ಭರವಸೆ ಹೆಚ್ಚಿದೆ.

ಭುವನೇಶ್ವರ್ ಕುಮಾರ್: ಆರ್‌ಸಿಬಿ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಸಹ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇವರು ಚೆನ್ನೈ ವಿರುದ್ಧ ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಭುವಿ ಈಗಾಗಲೇ ಅಭ್ಯಾಸ ನಡೆಸಿದ್ದು ತಂಡವನ್ನು ಸೇರಿಕೊಳ್ಳಬಹುದು. ಈ ಮೂಲಕ ಆರ್‌ಸಿಬಿ ಬೌಲಿಂಗ್ ಲೈನ್‌ಅಪ್‌ಗೆ ಸ್ಟ್ರೆಂತ್ ನೀಡುವ ಕೆಲಸ ಮಾಡಬಹುದು.
- ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಕಮಾಲ್ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದ ಪ್ಲೇಯರ್. ಇವರು ಈಗಾಗಲೇ 1053 ರನ್ ಸಿಡಿಸಿದ್ದು, 37.60 ಸರಾಸರಿ ಹೊಂದಿದ್ದಾರೆ.
- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೂ ಆರ್‌ಸಿಬಿ ವಿರುದ್ಧ ಪಂದ್ಯ ಆಡುವುದು ಅಚ್ಚು ಮೆಚ್ಚು. ಇವರು ಸಹ 146ರ ಸ್ಟ್ರೈಕ್ ರೇಟ್‌ನಲ್ಲಿ 765 ರನ್ ಸಿಡಿಸಿದ್ದಾರೆ.
- ಚೆನ್ನೈ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಆರ್‌ಸಿಬಿ ವಿರುದ್ಧ 18 ವಿಕೆಟ್‌ಗಳನ್ನು ಪಡೆದಿದ್ದು, ಈ ವೇಳೆ ಇವರ ಎಕಾನಮಿ 7.23 ಆಗಿದೆ.
- ಚೆನ್ನೈನಲ್ಲಿ ಸಿಎಸ್‌ಕೆ ಪ್ರಾಬಲ್ಯ ಹೊಂದಿದೆ. ಈ ಅಂಗಳದಲ್ಲಿ ಆಡಿದ 9 ಪಂದ್ಯಗಳಲ್ಲಿ ಚೆನ್ನೈ 8 ಪಂದ್ಯ ಗೆದ್ದಿದೆ. ಈ ಪಂದ್ಯ್ಲ್ಲಿ ಆರ್‌ಸಿಬಿ ಕೇವಲ ಒಂದೇ ಒಂದು ಪಂದ್ಯ ಗೆದ್ದಿದೆ.