Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs CSK: ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಹೊಸ ಮಾರ್ಗ ಕಂಡುಕೊಂಡ ಆರ್‌ಸಿಬಿ ಆಟಗಾರರು

ಮೇ 14 ಮಂಗಳವಾರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ನಡುವಿನ ಹೈವೋಲ್ಟೇಜ್‌ ಪಂದ್ಯ ಭಾನುವಾರ (ಮೇ 18) ಬೆಂಗಳಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (ಮೇ 12) ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌‌ ವಿರುದ್ಧ ಆರ್‌ಸಿಬಿ 41 ರನ್‌ಗಳ ಅಂತರದಿಂದ ಗೆದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರೊಂದಿಗೆ ಆರ್‌ಸಿಬಿ ಈ ಆವೃತ್ತಿಯ ಐಪಿಎಲ್‌ನಲ್ಲಿ ಸತತ 5 ಗೆಲುವು ಸಾಧಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RCB vs CSK IPL 2024 Royal Challengers Bengaluru players visit Tirupati

ಆರ್‌ಸಿಬಿ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ತವರಿನಲ್ಲೇ ಆಡುತ್ತಿದೆ. ಪ್ಲೇ ಆಫ್‌​ ಆಸೆಯನ್ನು ಜೀವಂತವಾಗಿಟ್ಟುಕೊಂಡಿರುವ ಆರ್‌ಸಿಬಿ ಚೆನ್ನೈ ಎದುರು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆರ್‌ಸಿಬಿ ಗೆದ್ದರು ಉಳಿದ ತಂಡಗಳ ಫಲಿತಾಂಶ ಮೇಲೆ ಪ್ಲೇ ಆಫ್‌ಗೆ ಆರ್ಹತೆ ಪಡೆಯುವುದು ನಿರ್ಧಾರವಾಗಲಿದೆ.

ಹೀಗಾಗಿ ಮೊದಲು ಸಿಎಸ್‌ಕೆ ಎದುರು ಜಯ ಗಳಿಸಬೇಕೆಂದು ಕೊಂಡಿರುವ ಆರ್‌ಸಿಬಿ ಆಟಗಾರರು ಟೆಂಪಲ್‌ ರನ್‌ ಶುರು ಮಾಡಿದ್ದಾರೆ. ಆರ್‌ಸಿಬಿ ವಿಕೆಟ್‌ ಕೀಪರ್‌ ಅಂಡ್‌ ಬ್ಯಾಟರ್‌ ಅನುಜ್ ರಾವತ್, ಸ್ಪಿನ್ನರ್‌ ಕರಣ್‌ ಶರ್ಮಾ, ಆಲ್‌ರೌಂಡರ್‌ ಸ್ವಪ್ನಿಲ್ ಸಿಂಗ್ ಮತ್ತು ತಂಡದ ಸಹಾಯಕ ಸಿಬ್ಬಂದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಸಿಎಸ್‌‌ಕೆ ವಿರುದ್ಧದ ಪಂದ್ಯಕ್ಕೆ 4 ದಿನಗಳ ಬಾಕಿ ಇರುವಂತೆ ಆರ್‌ಸಿಬಿ ಆಟಗಾರರು ಮೋಜು-ಮಸ್ತಿ ಮಾಡುವುದನ್ನು ಬಿಟ್ಟು ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸತತ ಸೋಲಿನಿಂದ ಕಂಗೆಟ್ಟಿ ಹೋಗಿದ್ದ ಆರ್‌ಸಿಬಿ ಪ್ಲೇ ಆಫ್‌ ರೇಸ್‌ನಿಂದ ಔಟ್‌ ಆಗುತ್ತೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಆರ್‌ಸಿಬಿ ನಿರೀಕ್ಷೆಗೂ ಮೀರಿದ ಪ್ರದರ್ಶನದಿಂದ ಮತ್ತೆ ಪುಟಿದೆದ್ದು, ಪ್ಲೇಆಫ್‌ಗೆ ಹಾರುವ ಕನಸು ಹೊತ್ತಿಕೊಂಡಿದೆ.

ಆರ್‌ಸಿಬಿ ಪ್ಲೇ ಆಫ್‌ ಅರ್ಹತೆ ಪಡೆಯುವ ಹಾದಿ

ಆರ್‌ಸಿಬಿ ಪ್ಲೇ ಆಫ್‌ ಅರ್ಹತೆ ಪಡೆಯಬೇಕಾದರೆ ಸನ್ ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆಯಲು ತಮ್ಮ ಒಂದು ಅಥವಾ ಎರಡೂ ಪಂದ್ಯಗಳನ್ನು ಗೆಲ್ಲುವುದು. ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಗೆಲ್ಲದಿರುವುದು. ಐಪಿಎಲ್ 2024ರ ಪ್ಲೇ ಆಫ್‌ನ ಅಂತಿಮ ಸ್ಥಾನವು ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯವನ್ನು ಅವಲಂಬಿಸಿರುತ್ತದೆ.

ಬೆಂಗಳೂರಿನಲ್ಲಿ ನಡೆಯಲಿರುವ ಸಿಎಸ್‌ಕೆ ವಿರುದ್ಧ ಪಂದ್ಯವು ಪ್ಲೇ ಆಫ್‌ ರೇಸ್‌ನಲ್ಲಿ ವರ್ಚುವಲ್ ಎಲಿಮಿನೇಟರ್ ಆಗಿ ಬದಲಾಗುತ್ತದೆ. ಅಲ್ಲದೆ, ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿ 18 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಂದ ಸಿಎಸ್‌ಕೆ ತಂಡವನ್ನು ಸೋಲಿಸಿದರೆ, ಸಿಎಸ್‌ಕೆ ತಂಡದ ನೆಟ್ ರನ್-ರೇಟ್ ಅನ್ನು ಮೀರಿಸುತ್ತದೆ. ಒಂದು ವೇಳೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದರೆ, ಆರ್‌ಸಿಬಿ ಸುಮಾರು 11 ಎಸೆತಗಳು ಬಾಕಿ ಇರುವಾಗಲ್ಲೇ ಗೆಲ್ಲಬೇಕಾಗುತ್ತದೆ.

Story first published: Tuesday, May 14, 2024, 18:59 [IST]
Other articles published on May 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+