
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ ಹೋರಾಟ ನಡೆಸಿದ ಹೊರತಾಗಿಯೂ ಸೋಲು ಅನುಭವಿಸಿದೆ. ಬೃಹತ್ ಗುರಿಯನ್ನು ಪಡೆದಿದ್ದರೂ ಆರ್‌ಸಿಬಿ ತಂಡ ಒಂದು ಹಂತದಲ್ಲಿ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಗ್ಲೆನ್ ಮ್ಯಾಕ್ಸ್‌ವಲ್ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿಯ ಸ್ಪೊಓಟಕ ಆಟ ಇದಕ್ಕೆ ಕಾರಣ. ಆದರೆ ಧೋನಿ ಪಡೆದ ಎರಡು ಕ್ಯಾಚ್ ಪಂದ್ಯದ ಗರಿಯನ್ನು ಬದಲಾಯಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 227 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ್ದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ ಆಘಾತ ಉಂಟಾಯಿತು. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೋಮ್ರೋರ್ ತಂಡದ ಮೊತ್ತ 15 ರನ್‌ಗಳಾಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಆರಂಭವಾಗಿದ್ದು ಆರ್‌ಸಿಬಿಯ ಅಬ್ಬರದಾಟ. ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಸೇರಿಕೊಂಡು ಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸರ್ ಬೌಂಡರಿಗಳ ಸುರಿಮಳೆಗೈಯಲು ಆರಂಭಿಸಿದರು.
ಸ್ಪೋಟಕವಾಗಿ ಆಡಿದ ಈ ಇಬ್ಬರು ಆಟಗಾರರು ಕೂಡ ಆರ್‌ಸಿಬಿ ತಂಡಕ್ಕೆ ಸಂಪೂರ್ಣ ಮೇಲುಗೈ ಒದಗಿಸುತ್ತಾ ಸಾಗಿದರು. ಕೇವಲ 12 ಓವರ್‌ಗಳ ಮುಕ್ತಾಯದ ವೇಳೆಗೆ ಆರ್‌ಸಿಬಿ 141 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಹಂತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಡವಿದರು. ಮಹೀಶ್ ತೀಕ್ಷಣ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ವಿಫಲವಾದ ಮ್ಯಾಕ್ಸ್‌ವೆಲ್ ವಿಕೆಟ್ ಕೀಪರ್ ಧೋನಿ ಹಿಡಿದ ಕ್ಯಾಚ್‌ಗೆ ಬಲಿಯಾದರು. ಈ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಕೇವಲ 36 ಎಸೆತಗಳಲ್ಲಿ 76 ರನ್ ಬಾರಿಸಿದ್ದರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ 3 ಬೌಂಡರಿಗಳು ಇತ್ತು.
ಅದಾದ ಕೆಲವೇ ಎಸೆತಗಳ ಅಂತರದಲ್ಲಿ ಫಾಫ್ ಡು ಪ್ಲೆಸಿಸ್ ಕೂಡ ಒತ್ತಡಕ್ಕೆ ಒಳಗಾಗಿ ವಿಕೆಟ್ ಕಳೆದುಕೊಂಡರು. ಮೊಯೀನ್ ಅಲಿ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದ ಫಾಫ್ ಡು ಪ್ಲೆಸಿಸ್ ಎಡವಿದರು. ಬ್ಯಾಟ್‌ನ ಬದಿಗೆ ಬಡಿದ ಚೆಂಡು ಮೇಲಕ್ಕೆ ಚಿಮ್ಮಿತ್ತು. ಇದು ಕೂಡ ಧೋನಿ ಕೈಗೆ ಸುರಕ್ಷಿತವಾಗಿ ತಲುಪಿತ್ತು. ಈ ಮೂಲಕ ಇಬ್ಬರು ಆಟಗಾರರ ಅದ್ಭುತ ಇನ್ನಿಂಗ್ಸ್ ಅಂತ್ಯವಾಯಿತು. 33 ಎಸೆತ ಎದುರಿಸಿ ಫಾಫ್ 62 ರನ್‌ಗಳಿಸಿಔಟಾದರು. ಈ ಅಮೋಘ ಇನ್ನಿಂಗ್ಸ್‌ನಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಯನ್ನು ಒಳಗೊಂಡಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್
ಬೆಂಚ್: ಅನುಜ್ ರಾವತ್, ಡೇವಿಡ್ ವಿಲ್ಲಿ, ಆಕಾಶ್ ದೀಪ್, ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್, ಸೋನು ಯಾದವ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಥೀಶ ಪತಿರಾನ, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್
ಬೆಂಚ್: ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಶೇಕ್ ರಶೀದ್, ಸುಭ್ರಾಂಶು ಸೇನಾಪತಿ, ಆರ್ ಎಸ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಭಗತ್ ವರ್ಮಾ, ನಿಶಾಂತ್ ಸಿಂಧು