Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs CSK: ಅಬ್ಬರಿಸಿದ ಸಿಎಸ್‌ಕೆ ದಾಂಡಿಗರು: ಆರ್‌ಸಿಬಿಗೆ ಗೆಲ್ಲಲು 227 ರನ್‌ಗಳ ಬೃಹತ್ ಗುರಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ಸ್ಪೋಟಕ ಪ್ರದರ್ಶನ ನೀಡಿದೆ. ಡೆವೋನ್ ಕಾನ್ವೆ, ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ ಅದ್ಭುತ ಪ್ರದರ್ಶನ ನೀಡಿದ್ದು ಆರ್‌ಸಿಬಿ ತಂಡಕ್ಕೆ ಗೆಲ್ಲಲು ಕಠಿಣ ಸವಾಲು ನಿಗದಿಪಡಿಸಿದೆ.

ಈ ಪಂದ್ಯದಲ್ಲಿ ಆರಂಭದಲ್ಲಿ ಆರ್‌ಸಿಬಿ ಆರಂಭದಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ತಂಡದ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರನ್ನು ಅಲ್ಪ ಮೊತ್ತಕ್ಕೆ ಸಿರಾಜ್ ಔಟ್ ಮಾಡಿದರು. ಕೇವಲ ಮೂರು ರನ್‌ಗಳಿಸಿ ಋತುರಾಜ್ ಔಟಾದರು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಡೆವೀನ್ ಕಾನ್ವೆ ಹಾಗೂ ಅಜಿಂಕ್ಯಾ ರಹಾನೆ 74 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಅಜಿಂಕ್ಯಾ ರಹಾನೆ ಔಟಾದ ಬಳಿಕ ಕಣಕ್ಕಿಳಿದ ಶಿವಂ ದುಬೆ ಕಾನ್ವೆ ಜೊತೆಗೆ ಮತ್ತೊಂದು ದೊಡ್ಡ ಜೊತೆಯಾಟದಲ್ಲಿ ಭಾಗಿಯಾದರು.

Chennai Super Kings

ಮೂರನೇ ವಿಕೆಟ್‌ಗೆ ಕಾನ್ವೆ- ದುಬೆ ಜೋಡಿ 80 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಸಿಕ್ಸರ್ ಬೌಂಡರಿಗಳ ಸುರಿಮಳೆಗೈದ ಈ ಜೋಡಿ ಆರ್‌ಸಿಬಿ ಬೌಲರ್‌ಗಳಿಗೆ ಸವಾಲಾದರು. 45 ಎಸೆತಗಳಲ್ಲಿ 83 ರನ್‌ಗಳಿಸಿದ ಕಾನ್ವೆ ಹರ್ಷಲ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆಗಿ ವಕಕೆಟ್ ಕಳೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಬಳಿಕ 27 ಎಸೆತಗಳಲ್ಲಿ 52 ರನ್ ಬಾರಿಸಿದ್ದ ಶಿವಂ ದುಬೆ ಕುಡ ಔಟಾದರು. ನಂತರ ಬಂದ ಅಂಬಾಟಿ ರಾಯುಡು, ಮೊಯೀನ್ ಅಲಿ ಕೂಡ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್‌ಗಳಿಸಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್

ಬೆಂಚ್: ಅನುಜ್ ರಾವತ್, ಡೇವಿಡ್ ವಿಲ್ಲಿ, ಆಕಾಶ್ ದೀಪ್, ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್, ಸೋನು ಯಾದವ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ

ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಥೀಶ ಪತಿರಾನ, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್

ಬೆಂಚ್: ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಶೇಕ್ ರಶೀದ್, ಸುಭ್ರಾಂಶು ಸೇನಾಪತಿ, ಆರ್ ಎಸ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಭಗತ್ ವರ್ಮಾ, ನಿಶಾಂತ್ ಸಿಂಧು

Story first published: Monday, April 17, 2023, 21:18 [IST]
Other articles published on Apr 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+