Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಮೊದಲ ಭಾರತೀಯ ವಿರಾಟ್‌ ಕೊಹ್ಲಿ‌; ಟೀಕಾಕಾರರ ಬಾಯಿ ಮುಚ್ಚಿಸಿದ ಕಿಂಗ್!

ಮೇ 19 ಭಾನುವಾರ, ಭಾರೀ ಕುತೂಹಲ ಕೆರಳಿಸಿದ ಐಪಿಎಲ್‌ 2024ರ ಪ್ಲೇ ಆಫ್‌ಗೆ ಆರ್ಹತೆ ಪಡೆಯುವ ನಾಲ್ಕನೇ ತಂಡ ಯಾವುದು ಎಂಬ ಪ್ರಶ್ನೆಗೆ (ಶನಿವಾರ) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತರ ಸಿಕ್ಕಿದೆ.

ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಇನ್ನೊಂದೆಡೆ ಆರ್‌ಸಿಬಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಸಿಎಸ್‌ಕೆ ವಿರುದ್ಧ ಅಬ್ಬರ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು.

RCB vs CSK Virat Kohli new record in IPL History

ಕೊಹ್ಲಿ ಎದುರಿಸಿದ ಕೇವಲ 29 ಎಸೆತಗಳಲ್ಲಿ 4 ಆರ್ಕಷಕ ಸಿಕ್ಸರ್‌ ಹಾಗು 3 ಬೌಂಡರಿ ನೆರವಿನಿಂದ 47 ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ವಿರಾಟ್‌‌ ಕೊಹ್ಲಿ ಅವರು ಮತ್ತೊಂದು ವಿಶೇಷವಾದ ಸಾಧನೆ ಗೈದಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಎರಡು ಬಾರಿ 700 ಪ್ಲಸ್ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದವರಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ವಿರಾಟ್‌ ಕೊಹ್ಲಿ ಈ ಋತುವಿನಲ್ಲಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. 2016 ರಲ್ಲಿ ಮೊದಲ ಬಾರಿಗೆ (973) ವಿರಾಟ್‌ ಕೊಹ್ಲಿ 700 ಪ್ಲಸ್‌ ರನ್ ಹೊಡೆದಿದ್ದು, ಎರಡನೇ ಬಾರಿಗೆ ಈ ಋತುವಿನಲ್ಲಿ (708*) ದಾಖಲೆ ಬರೆದಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಆಡಿರುವ 14 ಪಂದ್ಯಗಳಿಂದ 64.36 ಸರಾಸರಿ ಮತ್ತು 155.60 ಸ್ಟ್ರೈಕ್ ರೇಟ್‌ನಲ್ಲಿ 708* ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ ಅವರ 155.60 ಅತ್ಯಧಿಕ ಸ್ಟ್ರೈಕ್ ರೇಟ್ ಆಗಿದೆ.

2016ರಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ ಮತ್ತು 152 ಸ್ಟ್ರೈಕ್ ರೇಟ್‌ನಲ್ಲಿ 4 ಶತಕಗಳು ಮತ್ತು 7 ಅರ್ಧಶತಕಗಳೊಂದಿಗೆ 973 ರನ್ ಗಳಿಸಿದ್ದರು. ಈವರೆರಗೂ ಕೊಹ್ಲಿ ಮಾಡಿರುವ ಈ ದಾಖಲೆಯನ್ನು ಬ್ರೇಕ್‌ ಮಾಡಲು ಯಾವ ಬ್ಯಾಟರ್‌ನಿಂದಲ್ಲೂ ಸಾಧ್ಯವಾಗಿಲ್ಲ.

ಕೊಹ್ಲಿ ಅವರಿಗೂ ಮುನ್ನ ಎರಡು ಬಾರಿ 700 ಪ್ಲಸ್‌ ರನ್ ಗಳಿಸಿರುವ ಮೊದಲ ಆಟಗಾರನಾಗಿ ಆರ್‌ಸಿಬಿಯ ಮಾಜಿ ಸ್ಪೋಟಕ ಬ್ಯಾಟರ್‌ ಕ್ರಿಸ್ ಗೇಲ್ ಇದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಗೇಲ್ 2012ರಲ್ಲಿ 733 ರನ್ ಮತ್ತು 2013ರಲ್ಲಿ 708 ರನ್ ಗಳಿಸಿದ್ದರು.

ಅತಿ ಹೆಚ್ಚು ಸಿಕ್ಸರ್-ಬೌಂಡರಿ‌

ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ 37 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್‌ ಹೊಡೆದವರ ರೇಸ್‌ನಲ್ಲಿ ಮೊದಲಿಗರಾಗಿದ್ದಾರೆ. 2016ರಲ್ಲಿ ಅದ್ಭುತ ಫಾರ್ಮ್‌ ನಲ್ಲಿದ್ದ ಕೊಹ್ಲಿ 38 ಸಿಕ್ಸರ್‌ ಹೊಡೆದಿದ್ದರು. ಇದು ‌ಐಪಿಎಲ್ ಋತುವಿನಲ್ಲಿ ಕೊಹ್ಲಿ ಸಾರ್ವಕಾಲಿಕ ಗರಿಷ್ಠ ಸಿಕ್ಸರ್‌ ಆಗಿವೆ.

ಕೊಹ್ಲಿಗಿಂತ ಮೊದಲು ಶಿಖರ್ ಧವನ್ ಐಪಿಎಲ್‌ನಲ್ಲಿ 700 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರನಾಗಿದ್ದಾರೆ . 221 ಇನ್ನಿಂಗ್ಸ್‌​​​ಗಳಲ್ಲಿ 768 ಬೌಂಡರಿಗಳನ್ನು ಸಿಡಿಸಿದ್ದಾರೆ. ನಂತರ 700 ಬೌಂಡರಿಗಳನ್ನು ಪೂರೈಸಿದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. 243 ಇನ್ನಿಂಗ್ಸ್‌ಗಳಿಂದ 702 ಬೌಂಡರಿಗಳನ್ನುಚಹೊಡೆದಿದ್ದಾರೆ.

Story first published: Sunday, May 19, 2024, 9:04 [IST]
Other articles published on May 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+