RCB vs DC: ಆಧಾರ್ ಪಡೆದ ನಂತರ, ಇದೀಗ ವೋಟರ್ ಐಡಿ ಮೇಲೆ ಕಣ್ಣಿಟ್ಟ ಡೇವಿಡ್ ವಾರ್ನರ್!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಐಪಿಎಲ್ 2024ರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಆಧಾರ್ ಕಾರ್ಡ್ ಮೇಲೆ ಕೈ ಹಾಕಿದ ನಂತರ, ಮತದಾರರ ಗುರುತಿನ ಚೀಟಿ ಮೇಲೆ ಕಣ್ಣಿಟ್ಟಿದ್ದಾರೆ.
ಆಸ್ಟ್ರೇಲಿಯನ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಭಾರತದ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಪ್ರದರ್ಶಿಸುವುದರಿಂದ ಯಾವತ್ತೂ ಹಿಂದೆ ಸರಿಯಲಿಲ್ಲ. ಕೆಲವು ಸ್ಥಳೀಯ ಸ್ಟಾರ್ ಆಟಗಾರರಿಗಿಂತ ಡೇವಿಡ್ ವಾರ್ನರ್ ಭಾರತೀಯ ಅಭಿಮಾನಿಗಳಲ್ಲಿ ಭಾರೀ ಜನಪ್ರಿಯರಾಗಿದ್ದಾರೆ.

ಆಸ್ಟ್ರೇಲಿಯನ್ ಬ್ಯಾಟರ್ ಕಳೆದ ಕೆಲವು ವರ್ಷಗಳಿಂದ ಭಾರತೀಯ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯ ನಿರ್ಮಿಸಲು ಶ್ರಮಿಸಿದ್ದಾರೆ. ಅವರು ಯಾವಾಗಲೂ ಭಾರತೀಯ ಅಭಿಮಾನಿಗಳಿಂದ ಪಡೆದ ಅಗಾಧ ಪ್ರೀತಿಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಡೇವಿಡ್ ವಾರ್ನರ್ ಒಳಗೊಂಡ ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿದೆ.
ವಿಡಿಯೋದಲ್ಲಿ ಡೇವಿಡ್ ವಾರ್ನರ್ ಅಂತಿಮವಾಗಿ ಭಾರತದ ಆಧಾರ್ ಕಾರ್ಡ್ ಪಡೆಯುವ ಬಗ್ಗೆ ಮಾತನಾಡುತ್ತಿದ್ದರು. ಇದೀಗ, ದೇಶದಲ್ಲಿ ಸಾರ್ವತ್ರಿಕ ಚುನಾವಣಾ ಸದ್ದಿನ ನಡುವೆ ಮತದಾರರ ಗುರುತಿನ ಚೀಟಿ ಪಡೆಯುವತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಜನಪ್ರಿಯ ಪಂಜಾಬಿ ಹಾಡು "ಜಿನ್ನೆ ಮೇರಾ ದಿಲ್ ಲುಟೆಯಾ' ಹಾಡಿದಾಗ ವಿಡಿಯೋ ಇನ್ನಷ್ಟು ವಿಶೇಷವೆನಿಸಿತು.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡೇವಿಡ್ ವಾರ್ನರ್ ತನ್ನ ಆಧಾರ್ ಕಾರ್ಡ್ ಮಾಡಿಸಲು ಓಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಆ ಮಹತ್ವದ ಕಾರ್ಯವನ್ನು ಸಾಧಿಸಿದ ನಂತರ, ಡೇವಿಡ್ ವಾರ್ನರ್ ಸದ್ಯ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಲ್ಲಬಹುದು ಎಂದು ಹಾಸ್ಯ ಚಟಾಕಿ ಹಾರಿಸಿಲಾಗಿದೆ.
ಡೇವಿಡ್ ವಾರ್ನರ್ ಅವರು ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ಭಾರತದಲ್ಲಿ ಮೊದಲು ಮನೆ ಹೊಂದಲು ಬಹಿರಂಗಪಡಿಸಿದರು ಮತ್ತು ಈ ದೇಶದಲ್ಲಿ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದಾರೆ.

"ನನಗೆ ಭಾರತದಲ್ಲಿ ಮನೆ ಇಲ್ಲ, ನಾನು ಕೆಲವು ಹಂತಗಳನ್ನು ನೋಡಿದ್ದೇನೆ. ನನಗೆ ಇಲ್ಲಿ ಮನೆ ಮಾಡಬೇಕು ಎಂದು ಬಹಳಷ್ಟು ಜನರು ನನ್ನನ್ನು ಕೇಳುತ್ತಾರೆ. ಒಂದು ದಿನ, ಬಹುಶಃ ನಾನು ನನ್ನ ಕ್ರಿಕೆಟ್ ಮುಗಿಸಿದಾಗ, ನಾನು ಇಲ್ಲಿಗೆ ಬರಲು ಬಯಸುತ್ತೇನೆ ಮತ್ತು ಇಲ್ಲಿ ಸ್ವಲ್ಪ ಸಮಯ ಕಳೆಯುತ್ತೇನೆ".
"ಭಾರತದ ಜೀವನಶೈಲಿ ಚೆನ್ನಾಗಿದೆ. ನಾನು ಜನರ ವ್ಯಕ್ತಿ. ನಾನು ನನ್ನ ಹೆಣ್ಣುಮಕ್ಕಳೊಂದಿಗೆ ಮಾಲ್‌ಗಳಿಗೆ ಹೋಗುತ್ತೇನೆ ಮತ್ತು ನಾನು ಎಲ್ಲವನ್ನೂ ಅಪ್ಪಿಕೊಳ್ಳುತ್ತೇನೆ," ಎಂದು ಆರ್ ಅಶ್ವಿನ್ ಅವರ ಯೂಟ್ಯೂಬ್ ಶೋನ ಇತ್ತೀಚಿನ ಸಂಚಿಕೆಯಲ್ಲಿ ಡೇವಿಡ್ ವಾರ್ನರ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭಾನುವಾರ, ಮೇ 11ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕನ ಅನುಪಸ್ಥಿತಿಯಿಂದ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ರಿಷಭ್ ಪಂತ್ ಐಪಿಎಲ್ 2024ರಲ್ಲಿ ನಿಧಾನಗತಿ ಓವರ್-ರೇಟ್ 3ನೇ ಅಪರಾಧದ ಕಾರಣ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಿಲಿದ್ದಾರೆ.
ಕೈಗೆ ಗಾಯವಾದ ನಂತರ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೆಂಚ್ ಕಾಯಿಸುತ್ತಿದ್ದಾರೆ. ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications