Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs DC IPL 2024: ಆರ್‌ಸಿಬಿಯ ಹೊಸ ಅಧ್ಯಾಯದಲ್ಲಿ ಮತ್ತೊಂದು ದಾಖಲೆ; ಫ್ಯಾನ್ಸ್‌ ಫುಲ್ ಖುಷ್‌!

ಮೇ 13 ಸೋಮವಾರ, ಈ ಬಾರಿಯ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಬಲಿಷ್ಠ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಮೊದಲಾರ್ಧದಲ್ಲಿ ನಿರಾಶಾದಾಯಕ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಸೀಮಿತವಾಗಿತ್ತು. ತಾನು ಆಡಿದ ಮೊದಲ 7 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆಲುವು ಕಂಡಿದ ಆರ್‌ಸಿಬಿ ಸತತ 6 ಸೋಲುಗಳಿಂದ ಕಂಗೆಟ್ಟಿತ್ತು.

ಆರ್‌ಸಿಬಿ ಪ್ಲೇ ಆಫ್‌ಗೆ ರೇಸ್‌ನಿಂದ ಔಟ್‌ ಆಗುತ್ತೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈ ಭಾರಿ ಆರ್‌ಸಿಬಿ ನಿರೀಕ್ಷೆಗೂ ಮೀರಿದ ಪ್ರದರ್ಶನದಿಂದ ಮತ್ತೆ ಪುಟಿದೆದ್ದಿದೆ. ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (ಮೇ 12) ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌‌ ವಿರುದ್ಧ ಆರ್‌ಸಿಬಿ 41 ರನ್‌ಗಳ ಅಂತರದಿಂದ ಗೆದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

RCB vs DC IPL 2024 RCB new chapter has created another record

ಈ ಮೂಲಕ ಪ್ರಸ್ತುತ ಐಪಿಎಲ್‌ ಟೂರ್ನಿಯ ಹೊಸ ಅಧ್ಯಾಯದಲ್ಲಿ ಆರ್‌ಸಿಬಿ ಹೊಸ ದಾಖಲೆ ಬರೆದಿದೆ. ಆರ್‌ಸಿಬಿ ಮೇ 3ರಂದು ಅಂಕಪಟ್ಟಿಯ ಕೊನೆಯ 10ನೇ ಸ್ಥಾನದಲ್ಲಿತ್ತು. ಬಳಿಕ ಆತ್ಮವಿಶ್ವಾಸ ಕಂಡುಕೊಂಡ ಆರ್‌ಸಿಬಿ ಒಂದರ ನಂತರ ಒಂದರಂತೆ ಸತತ 5 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಈ ಐಪಿಎಲ್‌ನ ಅತ್ಯಧಿಕ ಸತತ ಗೆಲುವು ಸಾಧಿಸಿರುವ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.

ಆರ್‌ಸಿಬಿ ಗೆಲುವಿನ ಓಟ

ಆರ್‌ಸಿಬಿ vs ಎಸ್‌ಹೆಚ್‌ಆರ್‌ : ಏಪ್ರಿಲ್‌ 25 ರಂದು ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ 35 ರನ್‌ಗಳಿಂದ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಬೀಗಿತ್ತು.

ಆರ್‌ಸಿಬಿ vs ಜಿಟಿ : ಬಳಿಕ ಏಪ್ರಿಲ್‌ 28 ರಂದು ನಡೆದ ಗುಜರಾತ್‌ ಟೈಟನ್ಸ್‌ ವಿರುದ್ಧ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಲ್ಲಿ ಆರ್‌ಸಿಬಿ ತನ್ನ ಮೂರನೇ ಜಯ ಕಂಡಿತ್ತು.

ಆರ್‌ಸಿಬಿ vs ಜಿಟಿ : ಮೇ 4 ರಂದು ಮತ್ತೆ ಗುಜರಾತ್‌ ಟೈಟನ್ಸ್ ವಿರುದ್ಧ 4 ವಿಕೆಟ್‌ಗಳಿಂದ ಆರ್‌ಸಿಬಿ ನಾಲ್ಕನೇ ಗೆಲುವು ಸಾಧಿಸಿತ್ತು.

ಆರ್‌ಸಿಬಿ vs ಪಿಬಿಕೆಎಸ್‌ : ಮೇ 9 ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧ 60 ರನ್‌ಗಳಿಂದ ಆರ್‌ಸಿಬಿ ಮಣಿಸಿತ್ತು.

ಆರ್‌ಸಿಬಿ vs ಡಿಸಿ : ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ಗಳಿಂದ ಆರ್‌ಸಿಬಿ ಗೆದ್ದು ಸತತವಾಗಿ ಅತ್ಯಧಿಕ ಜಯಗಳಿಸಿದ ತಂಡವಾಗಿದೆ.

ಆರ್‌ಸಿಬಿ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆಯಲು ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ನಡೆಯಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಬೃಹತ್‌ ಗೆಲುವು ದಾಖಲಿಸುವ ಒತ್ತಡಕ್ಕೆ ಸಿಲುಕಿದೆ.

ಆರ್‌ಸಿಬಿ vs ಡಿಸಿ ಪಂದ್ಯದ ಫಲಿತಾಂಶ

ಟಾಸ್‌ ಸೋತು ಬ್ಯಾಟಿಂಗ್‌ ಶುರು ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಡೆಲ್ಲಿ ವಿರುದ್ಧ ವಿಲ್‌ ಜ್ಯಾಕ್ಸ್‌ ಮತ್ತು ರಜತ್‌ ಪಾಟಿದಾರ್‌ ಬಿರುಸಿನ ಬ್ಯಾಟಿಂಗ್‌ ಮಾಡಿದರು. ನಿಗದಿತ 20 ಓವರ್‌ಗಳಲ್ಲಿ ಆರ್‌ಸಿಬಿ 9 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿತ್ತು. ಬಳಿಕ ಆರ್‌ಸಿಬಿ ನೀಡಿದ 188 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಆರ್‌ಸಿಬಿ ಸಾಂಘಿಕ ಬೌಲಿಂಗ್‌ ದಾಳಿಗೆ ತಲೆ ಬಾಗಿತು. 19.1 ಓವರ್‌ಗಳಲ್ಲಿ ತನ್ನಲ್ಲೆ ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ 140 ರನ್‌ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ನಾಯಕ ಅಕ್ಸರ್ ಪಟೇಲ್‌ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಹೀಗಾಗಿ ಆರ್‌ಸಿಬಿ 47 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

Story first published: Monday, May 13, 2024, 11:45 [IST]
Other articles published on May 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+