RCB vs DC: ಐಪಿಎಲ್ ಇತಿಹಾಸದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಸಜ್ಜಾದ ವಿರಾಟ್ ಕೊಹ್ಲಿ!
ಭಾನುವಾರ, ಮೇ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲುಗಳೊಂದಿಗೆ 10 ಅಂಕಗಳನ್ನು ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಆಡಿದ 12 ಪಂದ್ಯಗಳಿಂದ 6 ಗೆಲುವುಗಳೊಂದಿಗೆ -0.316ರ ನೆಟ್ ರನ್‌ರೇಟ್‌ನಲ್ಲಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

2024ರ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ರೇಸ್ ಕುತೂಹಲಕಾರಿಯಾಗಿರುವಾಗ, ಉಭಯ ತಂಡಗಳಿಗೆ ಈ ಪಂದ್ಯವು ಅತ್ಯಂತ ಪ್ರಮುಖವಾಗಿದೆ. ಇಲ್ಲಿ ಸೋತ ತಂಡ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ. ಇದೇ ವೇಳೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ಐಪಿಎಲ್‌ನಲ್ಲಿ ವಿನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ದಾಖಲೆಯನ್ನು ಮುರಿಯುತ್ತಿರುವುದನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಕಳೆದ ಕೆಲವು ವರ್ಷಗಳಲ್ಲಿ ಸ್ಥಿರತೆಯ ಪ್ರತೀಕವಾಗಿದ್ದಾರೆ ಮತ್ತು ರನ್ ಶಿಖರ ನಿರ್ಮಿಸಿ ಭಾರತೀಯ ಕ್ರಿಕೆಟ್‌ನ ಮುಖವಾಣಿಯಾಗಿದ್ದಾರೆ.
ಇದೀಗ ಭಾನುವಾರದಂದು ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವಾಗ ವಿರಾಟ್ ಕೊಹ್ಲಿ ಮುಡಿಗೆ ಹೊಸ ಗರಿಯೊಂದು ಸೇರ್ಪಡೆಯಾಗಲಿದೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರನಾಗಲಿದ್ದಾರೆ.

ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ 250 ಪಂದ್ಯಗಳು
ಚಾಂಪಿಯನ್ಸ್ ಲೀಗ್ (CLT20) ನಲ್ಲಿ ಫ್ರಾಂಚೈಸಿಗಾಗಿ ಆಡಿದ 15 ಪಂದ್ಯಗಳನ್ನು ಪರಿಗಣಿಸಿದರೆ ವಿರಾಟ್ ಕೊಹ್ಲಿ ಈಗಾಗಲೇ ಆರ್‌ಸಿಬಿ ಪರ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 250 ಪಂದ್ಯಗಳ ಸಾಧನೆಯನ್ನು ಪೂರ್ಣಗೊಳಿಸಲಿದ್ದಾರೆ.
ಅತ್ಯುನ್ನತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ
2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಆಧಾರ ಸ್ತಂಭವಾಗಿದ್ದಾರೆ. ಇದುವರೆಗಿನ 17 ಋತುಗಳಲ್ಲಿ 38.71ರ ಸರಾಸರಿಯಲ್ಲಿ 7897 ರನ್ ಗಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಭಾರತೀಯ ಸ್ಟಾರ್ ಬ್ಯಾಟರ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 70ಕ್ಕಿಂತ ಹೆಚ್ಚಿ ಸರಾಸರಿಯಲ್ಲಿ 634 ರನ್ ಗಳಿಸಿ ಅಮೋಘ ಫಾರ್ಮ್‌ನಲ್ಲಿದ್ದಾರೆ
153.51ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿರುವ ವಿರಾಟ್ ಕೊಹ್ಲಿ
2024ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ, ಭಾರತ ತಂಡದ ನಾಯಕ ಹಾಗೂ ಉಪನಾಯಕರಾದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ನೀರಸ ಫಾರ್ಮ್ ಚಿಂತೆಗೀಡು ಮಾಡುತ್ತಿದೆ. ಆದರೆ ವಿರಾಟ್ ಕೊಹ್ಲಿಯ ಅದ್ಭುತ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸುಗಳನ್ನು ಜೀವಂತವಾಗಿರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications