RCB vs DC: ಡ್ರೆಸಿಂಗ್ ರೂಮ್‌ನಲ್ಲಿ ಕೊಹ್ಲಿ-ಸಿರಾಜ್ ಸಂಭಾಷಣೆ ವಿಡಿಯೋ ವೈರಲ್
ಮೇ 13 ಸೋಮವಾರ, ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋವನ್ನು ಸ್ವತಃ ಆರ್‌ಸಿಬಿ ಹಂಚಿಕೊಂಡಿದೆ. ವಿಡಿಯೋದಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ತಂಡದ ತಂತ್ರಗಾರಿಕೆಯನ್ನು ವಿವರಿಸುತ್ತಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದನ್ನು ಆನಂದಿಸಿದ್ದಾರೆ.

ಮೊದಲು ವಿಡಿಯೋ ಮಾತು ಶುರು ಮಾಡುವ ಸಿರಾಜ್, ವಾಟ್ ಎ ಕಮ್ ಬ್ಯಾಕ್. ನಾವು ಒಂದು ಸಮಯದಲ್ಲಿ ಒಂದು ಪಂದ್ಯವನ್ನು ಮಾತ್ರ ತೆಗೆದುಕೊಳ್ಳಲು ಬಯಸಿದ್ದೇವೆ. ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತೇವೆಯೋ? ಇಲ್ಲವೋ? ಎಂಬುದು ನಮ್ಮ ಕೈಯಲ್ಲಿಲ್ಲ. ಆದರೆ ನಮ್ಮ ಕೈಯಲ್ಲಿ ಏನಿದೆ ಎಂದರೆ, ವೇಗದ ಬೌಲರ್ ಬಳಿ ಬಾಲ್ ಇದೆ ಮತ್ತು ಬ್ಯಾಟರ್‌ಗಳ ಬಳಿ ಬ್ಯಾಟ್ ಇದೆ. ನಾವು ಮಾಡಬೇಕಾಗಿರುವುದು ದಾಳಿ. ನಾವು ಅರ್ಹತೆ ಪಡೆದರೆ, ಅದು ತುಂಬಾ ಒಳ್ಳೆಯದು. ಆದರೆ ನಾವು ಈ ಬ್ರಾಂಡ್ ಕ್ರಿಕೆಟ್ ಅನ್ನು ಆಡುವುದನ್ನು ಮುಂದುವರಿಸಲು ಬಯಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಕದಲ್ಲೇ ಕುಳಿತಿದ್ದ ಕರಣ್ ಶರ್ಮಾ ಅವರು ಬೌಲರ್ ಬಳಿ ಬಾಲ್ ಇದೆ ಮತ್ತು ಬ್ಯಾಟರ್‌ಗಳ ಬಳಿ ಬ್ಯಾಟ್ ಇದೆ ಎಂಬ ಹೇಳಿಕೆ ಬಗ್ಗೆ ಸಿರಾಜ್ ಅವರನ್ನು ಸ್ಪಷ್ಟನೆ ಕೇಳಿದರು. ಆದರೆ ಸಿರಾಜ್ ವಿವರಿಸಲು ಹೆಣಗಾಡಿದರು. ಆಗ ಕೊಹ್ಲಿ ತಮಾಷೆಯಾಗಿ ಸಿರಾಜ್ ಅವರು ಕೇವಲ ಸ್ಟಂಪ್‌ಗಳನ್ನು ಮಾತ್ರ ನೋಡುತ್ತಾರೆ ಎಂದು ವ್ಯಂಗ್ಯ ಮಾಡಿದರು.
ಇದಕ್ಕೆ ಸಿರಾಜ್ "ಸಿಯುಉಉ" ಎಂದು ಇಂಗ್ಲಿಷ್‌ನಲ್ಲಿ ತಪ್ಪಾಗಿ ಹೇಳಿದರು. ಬಳಿಕ ಕರಣ್ ಶರ್ಮಾ ಅವರು ಸಿರಾಜ್ ಹೇಳಿದ "ಸಿಯುಉಉ" ಅನ್ನು ಅನುಕರಿಸುವ ಮೂಲಕ ಅಪಹಾಸ್ಯ ಮಾಡುವುದರು. ಹೀಗಾಗಿ ಕೊಹ್ಲಿ ಮತ್ತು ಕರಣ್ ಶರ್ಮಾರನ್ನು ನಗೆಗಡಲಲ್ಲಿ ತೇಲಿವಂತಾಯಿತು. ಇಬ್ಬರು ಆಟಗಾರರ ನಡುವಿನ ಪರಸ್ಪರ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ಲೇಆಫ್‌ಗೆ ಅರ್ಹತೆ ಪಡೆಯುವ ಆರ್‌ಸಿಬಿ ತಂಡದ ಸಾಧ್ಯತೆಗಳು ತೀರಾ ಕಡಿಮೆಯಾದರೂ, ಅಭಿಮಾನಿಗಳ ನಿರೀಕ್ಷೆಗಳು ಗಗನಕ್ಕೇರಿವೆ. ಆರ್‌ಸಿಬಿ ಅರ್ಹತೆ ಪಡೆಯಲು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಫಲಿತಾಂಶಗಳು ಆರ್‌ಸಿಬಿಗೆ ಅನುಕೂಲಕರವಾಗಿದ್ದರೂ, ರನ್ ರೇಟ್ ಮೇಲೆ ಪ್ಲೇಆಫ್ ಸ್ಥಾನವನ್ನು ನಿರ್ಧರಿಸಲಾಗುತ್ತದೆ.
ತವರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (ಮೇ 12) ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 41 ರನ್‌ಗಳ ಅಂತರದಿಂದ ಗೆದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ರಸ್ತುತ ಐಪಿಎಲ್ ಟೂರ್ನಿಯ ಹೊಸ ಅಧ್ಯಾಯದಲ್ಲಿ ಆರ್‌ಸಿಬಿ ಹೊಸ ದಾಖಲೆ ಬರೆದಿದೆ. ಆರ್‌ಸಿಬಿ ಮೇ 3ರಂದು ಅಂಕಪಟ್ಟಿಯ ಕೊನೆಯ 10ನೇ ಸ್ಥಾನದಲ್ಲಿತ್ತು. ಬಳಿಕ ಆತ್ಮವಿಶ್ವಾಸ ಕಂಡುಕೊಂಡ ಆರ್‌ಸಿಬಿ ಒಂದರ ನಂತರ ಒಂದರಂತೆ ಸತತ 5 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಈ ಐಪಿಎಲ್‌ನ ಅತ್ಯಧಿಕ ಸತತ ಗೆಲುವು ಸಾಧಿಸಿರುವ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications