India vs USA: ಮನಮೋಹಕ ಕ್ಯಾಚ್ ಹಿಡಿದ ಮೊಹಮ್ಮದ್ ಸಿರಾಜ್‌ಗೆ ಬೆಸ್ಟ್ ಫೀಲ್ಡರ್ ಪದಕ!; ಕೊಟ್ಟಿದ್ದು ಯಾರು?
ಜೂನ್ 13 ಗುರುವಾರ, ಐಸಿಸಿ ಟಿ20 ವಿಶ್ವಕಪ್‌ನ ತನ್ನ ಮೂರನೇ ಗುಂಪು ಹಂತದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಅಮೆರಿಕವನ್ನು ಸೋಲಿಸಿದೆ. ಈ ಗೆಲುವಿನ ನಂತರ ಭಾರತ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಪ್ರತಿ ಬಾರಿಯಂತೆ ಈ ಗೆಲುವಿ ನಂತರ ಟೀಮ್ ಇಂಡಿಯಾದ ಒಬ್ಬ ಆಟಗಾರನಿಗೆ ಪಂದ್ಯ ಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಲಭಿಸಿದೆ. ಆದರೆ ಈ ಪ್ರಶಸ್ತಿ ಪಡೆದ ಆಟಗಾರರ ಮಾತ್ರ ವಿಶೇಷ. ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಬೆಸ್ಟ್ ಫೀಲ್ಡರ್ ಪದಕ ಸಿಕ್ಕಿದೆ.

ಎರಡು ಅದ್ಭುತ ಕ್ಯಾಚ್‌ಗಳನ್ನು ಹಿಡಿದ ಸಿರಾಜ್ ಎಲ್ಲರ ಮೆಚ್ಚುಗೆಗೆ ಪಾತ್ರಾರಗಿದ್ದಾರೆ. ಹಲವು ಬಾರಿ ಸಿರಾಜ್ ಸುಲಭ ಕ್ಯಾಚ್‌ಗಳನ್ನು ಕೈ ಚೆಲ್ಲಿರುವ ಉದಾಹರಣೆಗಳಿವೆ.
ಹೀಗಾಗಿ ಬೆಸ್ಟ್ ಫೀಲ್ಡರ್ ಪದಕವನ್ನು ಸಿರಾಜ್ ಗೆದ್ದಿರುವುದು ಬಹಳ ವಿಶೇಷವಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಉತ್ತಮ ಫೀಲ್ಡಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಬೆಸ್ಟ್ ಫೀಲ್ಡರ್ ಮೆಡಲ್ ಪಡೆದಿದ್ದರು.
ಡ್ರೆಸಿಂಗ್ ರೂಮ್ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ. 'ಸೂಪರ್ ಎಂಟಕ್ಕೆ ಅರ್ಹತೆ ಪಡೆಯಲು ಪ್ರಮುಖ ಗೆಲುವು. ಇಂದಿನ ಬೆಸ್ಟ್ ಫೀಲ್ಡರ್ ಪ್ರಶಸ್ತಿಗೆ ಮತ್ತೊಬ್ಬ ವಿಶೇಷ ಅತಿಥಿ' ಎಂದು ಶೀರ್ಷಿಕೆ ಬರೆದುಕೊಂಡಿದೆ.
ಬೆಸ್ಟ್ ಫೀಲ್ಡರ್ ಪದಕವನ್ನು 2007ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಯುವರಾಜ್ ಸಿಂಗ್ ಅವರಿಂದ ಮೊಹಮ್ಮದ್ ಸಿರಾಜ್ ಪಡೆದಿದ್ದಾರೆ. ಯುವರಾಜ್ ಸಿಂಗ್ ಅವರು ಸಿರಾಜ್ ಅವರನ್ನು ಹುರಿದುಂಬಿಸಿದ್ದಾರೆ.
ಸಿರಾಜ್ ಅವರು 15ನೇ ಓವರ್ ನಲ್ಲಿ ನಿತೀಶ್ ಕುಮಾರ್ ಅವರನ್ನು ಔಟ್ ಮಾಡಲು ಡೈವಿಂಗ್ ಕ್ಯಾಚ್ ಹಿಡಿದರು. ಇದಲ್ಲದೇ ಈ ಪಂದ್ಯದಲ್ಲಿ ಅಮೆರಿಕದ ನಾಯಕ ಆ್ಯರೋನ್ ಜೋನ್ಸ್ ಕ್ಯಾಚ್ ಕೂಡ ಪಡೆದರು. ಈ ಮೂಲಕ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಹಿಂದಿಕ್ಕಿ ಸಿರಾಜ್ ಪಂದ್ಯದ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಯುವರಾಜ್ ಸಿಂಗಗ್ ಅವರಿಂದ ಪಡೆದುಕೊಂಡರು.
ಸೂಪರ್-8 ಕ್ಕೆ ತಲುಪಿದ ಭಾರತಕ್ಕೆ ಅಭಿನಂದನೆ
ಐಸಿಸಿ ಟಿ20 ವಿಶ್ವಕಪ್‌ನ ರಾಯಭಾರಿಯಾಗಿರುವ ಯುವರಾಜ್ ಸಿಂಗ್ ಅವರು, ಸತತ ಮೂರು ಗೆಲುವಿನೊಂದಿಗೆ ಸೂಪರ್ -8ಕ್ಕೆ ಪ್ರವೇಶಿಸಿದ ಭಾರತ ತಂಡವನ್ನು ಅಭಿನಂದಿಸಿದ್ದು, ತಂಡದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ವೇಗದ ಬೌಲರ್ ಆಗಿದ್ದರೂ ಚುರುಕಾದ ಫೀಲ್ಡಿಂಗ್‌ಗಾಗಿ ಸಿರಾಜ್ ಅವರನ್ನು ಗುಣಗಾನ ಮಾಡಿದ್ದಾರೆ.
ತಮ್ಮ ಅತ್ಯುತ್ತಮ ಫೀಲ್ಡಿಂಗ್‌ನಿಂದ ಪ್ರಶಸ್ತಿ ಗೆದ್ದಿದ್ದಕ್ಕೆ ಸಿರಾಜ್ ತುಂಬಾ ಸಂತೋಷಪಟ್ಟಿದ್ದಾರೆ. 2023ರ ಏಕದಿನ ವಿಶ್ವಕಪ್‌ನ 11 ಪಂದ್ಯಗಳಲ್ಲಿ ನಾನು ಒಂದೇ ಒಂದು ಪಂದ್ಯದಲ್ಲೂ ಈ ಪ್ರಶಸ್ತಿಯನ್ನು ಗಳಿಸಿಲ್ಲ. ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಸಿರಾಜ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications