For Quick Alerts
ALLOW NOTIFICATIONS  
For Daily Alerts
 

IPL 2025 RCB vs DC: ತವರಿನಲ್ಲಿ ಆರ್‌ಸಿಬಿಗೆ ಸಿಗದ ಗೆಲುವು; ರಾಹುಲ್ ಕ್ಲಾಸಿಕ್ ಆಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಮತ್ತೊಂದು ಸೋಲನ್ನು ಎದುರಿಸಿದೆ. ಐಪಿಎಲ್ 2025 ರ 24 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ತಂದುಕೊಟ್ಟರು. ಇದರೊಂದಿಗೆ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‍‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರ್‍‌ಸಿಬಿ ನೀಡಿದ 164 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕಳಪೆ ಆರಂಭದ ಹೊರತಾಗಿಯೂ 17.5 ಓವರ್‍‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಗೆಲುವಿನ ನಗೆ ಬೀರಿತು.

RCB vs DC IPL 2025 Toss Match Report Score batting and bowling performance kannada

ಕನ್ನಡಿಗ ಅಬ್ಬರ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‍‌ಸಿಬಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾಯಿತು. ಪರಿಣಾಮ ಆರ್‍‌ಸಿಬಿ 164 ರನ್‌ಗಳ ಗೆಲುವಿನ ಗುರಿಯನ್ನು ಡೆಲ್ಲಿ ತಂಡಕ್ಕೆ ನೀಡಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಆರ್‍‌ಸಿಬಿ ಬೌಲರ್ಸ್ ಶಾಕ್ ನೀಡಿದರು. ಡೆಲ್ಲಿ ತಂಡದ ಇನ್ನಿಂಗ್ಸ್‌ನ ಮೊದಲ ಪವರ್ ಪ್ಲೇನಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸಿ ಆರ್‍‌ಸಿಬಿ ಬೌಲರ್ಸ್ ಮಿಂಚಿದರು. ಈ ವೇಳೆ ಪಂದ್ಯ ಆರ್‍‌ಸಿಬಿ ಕೈಯಲ್ಲಿತ್ತು.

ಡೆಲ್ಲಿ ಪರ ಫಾಫ್ ಡು ಪ್ಲೆಸಿಸ್ 2 ರನ್, ಜೇಕ್ ಫ್ರೇಸರ್-ಮೆಕ್‌ಗುರ್ಕ್ 7 ರನ್ ಮತ್ತು ಅಭಿಷೇಕ್ ಪೊರೆಲ್ 7 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ಕೆಎಲ್ ರಾಹುಲ್ ಮತ್ತು ನಾಯಕ ಅಕ್ಸರ್ ಪಟೇಲ್ ನಿಧನವಾಗಿ ರನ್ ಗಳಿಸಿದರು. ಆದರೆ ಅಕ್ಸರ್ ಪಟೇಲ್ 11 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ಕೆಎಲ್ ರಾಹುಲ್ 7 ರನ್ ಗಳಿಸಿದಾಗ ಕ್ಯಾಚ್ ನೀಡಿದರು. ಆದರೆ ಈ ಕ್ಯಾಚ್ ಪಡೆಯುವಲ್ಲಿ ಆರ್‍‌ಸಿಬಿ ನಾಯಕ ಯಶಸ್ವಿಯಾಗಲಿಲ್ಲ. ಇದರ ಪರಿಣಾಮ ಹಂತ ಹಂತವಾಗಿ ಕೆಎಲ್ ರಾಹುಲ್ ಆರ್‍‌ಸಿಬಿ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

ಅಕ್ಸರ್ ಪಟೇಲ್ ಔಟಾದ, ಬಳಿಕ ಕೆಎಲ್ ರಾಹುಲ್ ಅವರೊಂದಿಗೆ ಟ್ರಿಸ್ಟಾನ್ ಸ್ಟಬ್ಸ್ ಸೇರಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರೂ ಐದನೇ ವಿಕೆಟ್‌ಗೆ 111 ರನ್‌ಗಳ ಅಜೇಯ ಜೊತೆಯಾಟ ಆಡಿದರು. ಈ ಮೂಲಕ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕ್ಯಾಚ್ ಜೀವದಾನ ಪಡೆದ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 93 ರನ್ ಗಳಿಸಿ ಅಜೇಯರಾಗಿ ಉಳಿದರು. ಸ್ಟಬ್ಸ್ ಕೂಡ 23 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಆರ್‍‌ಸಿಬಿ ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದರೆ, ಯಶ್ ದಯಾಳ್ ಮತ್ತು ಸುಯಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಗೆಲುವಿನ ಓಟ

ಐಪಿಎಲ್ 2025 ರಲ್ಲಿ ಡೆಲ್ಲಿ ತಂಡಕ್ಕೆ ಸತತ ನಾಲ್ಕನೇ ಗೆಲುವು ಸಿಕ್ಕಿದೆ. ಇಲ್ಲಿಯವರೆಗೆ ಡೆಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಡೆಲ್ಲಿ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಸೋಲಿಸಿದೆ. ಆರ್‌ಸಿಬಿ ಇದುವರೆಗೆ 5 ಪಂದ್ಯಗಳನ್ನು ಆಡಿದೆ. ಮೂರು ಪಂದ್ಯಗಳನ್ನು ಗೆದ್ದರೆ, ಎರಡರಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ಗುಜರಾತ್ ಟೈಟಾನ್ಸ್ ನಂತರ, ಈಗ ಅದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದೆ.

ಟಿಮ್ ಡೇವಿಡ್ ಆಸರೆ

ತವರಿನಲ್ಲಿ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಇನ್ನಿಂಗ್ಸ್ ತೆರೆದರು. ಫಿಲ್ ಸಾಲ್ಟ್ ಬಿರುಸಿನಿ ಬ್ಯಾಟಿಂಗ್ ಮಾಡುವ ಮೂಲಕ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಅದ್ಭುತವಾಗಿ ಆಡುತ್ತಿದ್ದ ಫಿಲ್ ಸಾಲ್ಟ್ ದುರದೃಷ್ಟಕರ ರನೌಟ್‌ಗೆ ಬಲಿಯಾದರು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 3.5 ಓವರ್‍‌ಗಳಲ್ಲಿ 61 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಆರ್‌ಸಿಬಿ ಭರ್ಜರಿ ನೀಡಿದರು.

ಫಿಲ್ ಸಾಲ್ಟ್ ಔಟಾದ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ ಕೇವಲ 1 ರನ್‌ಗಳಿಸಿ ಔಟಾದರೆ, ಸ್ಥಿರ ಪ್ರದರ್ಶನ ನೀಡಿತ್ತಿದ್ದ ವಿರಾಟ್ ಕೊಹ್ಲಿ ಕೂಡ 22 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದ ರಜತ್ ಪಾಟಿದಾರ್ ಸಹಾ 25 ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಬ್ಯಾಟರ್ಸ್ ಲಿಯಾಮ್ ಲಿವಿಂಗ್‌ಸ್ಟೋನ್ 4 ರನ್ ಮತ್ತು ಜಿತೇಶ್ ಶರ್ಮಾ 3 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಸ್ಪೋಟಕ ಆರಂಭ ಪಡೆದ ಬಳಿಕ ಆರ್‌ಸಿಬಿ ಮಧ್ಯಮ ಕ್ರಮಾಂಕದಲ್ಲಿ ಭಾರಿ ಕುಸಿತ ಕಂಡಿತು. ಮಧ್ಯಮ ಓವರ್‍‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಸ್ ವಿಕೆಟ್ ಪಡೆದು ಪ್ರಾಬಲ್ಯ ಸಾಧಿಸಿದರು. ಹೀಗಾಗಿ ಆರ್‌ಸಿಬಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಟಿಮ್ ಡೇವಿಡ್ ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು 20 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 37 ರನ್ ಬಾರಿಸಿದರು. ಡೇವಿಡ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಆರ್‌ಸಿಬಿ ತಂಡವು 163 ರನ್‌ಗಳನ್ನು ತಲುಪಿತು.

ಡೆಲ್ಲಿ ಪರ ಕುಲದೀಪ್ ಯಾದವ್ ಮತ್ತು ವಿಪ್ರಾಜ್ ನಿಗಮ್ ತಲಾ 2 ವಿಕೆಟ್ ಕಬಳಿಸಿ ಆರ್‌ಸಿಬಿ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಮುಖೇಶ್ ಕುಮಾರ್ ಮತ್ತು ಮೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಮೂರು ಗೆಲುವುಗಳನ್ನು ದಾಖಲಿಸಿದ್ದು, ಇದುವರೆಗೆ ಒಂದೇ ಒಂದು ಸೋಲನ್ನು ಎದುರಿಸಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮೂರು ಪಂದ್ಯಗಳ ಗೆದ್ದಿದೆ. ಆದರೆ ಒಂದು ಪಂದ್ಯದಲ್ಲಿ ಸೋಲು ಕಂಡಿದೆ.

ಉಭಯ ತಂಡಗಳ ಪ್ಲೇಯಿಂಗ್-11

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕೆಎಲ್ ರಾಹುಲ್(ವಿಕೆಟ್‌ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.

Story first published: Thursday, April 10, 2025, 19:10 [IST]
Other articles published on Apr 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+