Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs DC: 24 ಎಸೆತ, 13 ರನ್‌, 1 ಬೌಂಡರಿ, 6 ವಿಕೆಟ್‌: RCBಯ ಭುವಿ, ಜೋಶ್‌ ಮಾಸ್ಟರ್‌ ಕ್ಲಾಸ್‌ ಬೌಲಿಂಗ್

19ನೇ ಆವೃತ್ತಿ ಐಪಿಎಲ್‌ನ 39ನೇ ಪಂದ್ಯದಲ್ಲಿ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿತು. ರಜತ್ ಪಾಟಿದಾರ್ ಅವರ ನಿರ್ಧಾರವನ್ನು ಆರ್‌ಸಿಬಿ ತಂಡದ ವೇಗದ ಬೌಲರ್‌ಗಳು ಸಮರ್ಥಿಸಿಕೊಂಡರು.

ಪಂಜಾಬ್‌ ಕಿಂಗ್ಸ್‌ ವಿರುದ್ಧ ದಾಖಲೆಯ ರನ್‌ಗಳನ್ನು ಕಲೆ ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸರಿಯಾದ ಪ್ಲ್ಯಾನಿಂಗ್ ಮಾಡಿಕೊಂಡು ಮೈದಾನಕ್ಕೆ ಇಳಿದ ಆರ್‌ಸಿಬಿ ಅಮೋಘ ಬೌಲಿಂಗ್ ನಡೆಸಿತು. ಪವರ್ ಪ್ಲೇನಲ್ಲಿ ಆರ್‌ಸಿಬಿ ತಂಡದ ವೇಗದ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಪದಾರ್ಪಣೆ ಪಂದ್ಯವನ್ನು ಆಡಿದ ಸಹಿಲ್ ಪಕಾರ್ ಅವರನ್ನು ಕ್ಲೀನ್ ಬೋಲ್ಡ್‌ ಮಾಡಿದರು.

RCB vs DC

ಇನಿಂಗ್ಸ್‌ ಎರಡನೇ ಓವರ್ ಎಸೆಯಲು ಬಂದ ವಿಶ್ವದ ಖ್ಯಾತನಾಮ ಬೌಲರ್ ಜೋಶ್‌ ಹ್ಯಾಜಲ್‌ವುಡ್ ಸಹ ಕರ್ನಾಟಕದ ಕೆಎಲ್ ರಾಹುಲ್ ಅವರಿಗೆ 141.4 ಕಿಲೋ ಮೀಟರ್‌ ವೇಗದಲ್ಲಿ ಔಟ್‌ ಸೈಡ್ ಆಫ್ ಸ್ಟಂಪ್ ಚೆಂಡನ್ನು ಎಸೆದರು. ಈ ಎಸೆತವನ್ನು ರಾಹುಲ್‌ ಪುಲ್ ಮಾಡಲು ಹೋಗಿ ವಿಕೆಟ್‌ ಕೀಪರ್ ಜಿತೇಶ್‌ ಶರ್ಮಾ ಅವರಿಗೆ ಕ್ಯಾಚ್‌ ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತ 2 ಆಗಿದ್ದಾಗ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಭುವಿ, ಜೋಶ್‌ ಮಾಸ್ಟರ್‌ ಕ್ಲಾಸ್‌ ಬೌಲಿಂಗ್

ಜೋಶ್‌ ಹ್ಯಾಜಲ್‌ವುಡ್ ತಮ್ಮ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ಸಮೀರ್ ರಿಜ್ವಿ ಅವರಿಗೆ ಖೆಡ್ಡಾ ತೋಡಿದರು.

ಮೂರನೇ ಓವರ್‌ ಬೌಲ್ ಮಾಡಲು ಬಂದ ಭುವನೇಶ್ವರ್ ಕುಮಾರ್ ಅವರು ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಬಹುವಾಗಿ ಕಾಡಿದರು. ಆಫ್ ಸ್ಟಂಪ್‌ನ ಹೊರಗೆ ಬಿದ್ದ ಲೆಂತ್ ಬಾಲ್ ಕೊನೆಯ ಕ್ಷಣದಲ್ಲಿ ಅದ್ಭುತವಾಗಿ ಹೊರಕ್ಕೆ ತಿರುಗಿತು. ಯಾವುದೇ ಫುಟ್‌ವರ್ಕ್ ಇಲ್ಲದೆ ಚೆಂಡನ್ನು ಕೆಣಕಲು ಹೋದ ಸ್ಟಬ್ಸ್ ಬ್ಯಾಟ್‌ ತಾಗಿದ ಚೆಂಡು ಸ್ಲಿಪ್‌ನಲ್ಲಿದ್ದ ದೇವದತ್ ಪಡಿಕ್ಕಲ್ ಕೈ ಸೇರಿತು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಮತ್ತೊಂದು ಆಘಾತವನ್ನು ಡೆಲ್ಲಿಗೆ ನೀಡಿದರು. ಅಕ್ಷರ್ ಪಟೇಲ್‌ ಅವರಿಗೆ ಖೆಡ್ಡಾ ತೋಡಿದ ಭುವಿ ಅಬ್ಬರಿಸಿದರು.

ಜೋಶ್‌ ಹ್ಯಾಜಲ್‌ವುಡ್‌ ಸಹ ತಮ್ಮ ಎರಡನೇ ಓವರ್‌ನ ಐದನೇ ಎಸೆತದಲ್ಲಿ ನಿತೀಶ್ ರಾಣಾ ಅವರನ್ನು ವಂಚಿಸಿದರು. ಜೋಶ್‌ ಅವರು ಬ್ಯಾಕ್ ಆಫ್ ಲೆಂಥ್ ಎಸೆತವನ್ನು ಎಸೆದು ನಿತೀಶ್ ರಾಣಾ ಅವರನ್ನು ಕಾಡಿದರು. ಇವರು ಈ ಚೆಂಡನ್ನು ಕೆಣಕಿ ದೇವದತ್‌ ಪಡಿಕ್ಕಲ್‌ಗೆ ಕ್ಯಾಚ್ ನೀಡಿದರು.

ಆರ್‌ಸಿಬಿ ತಂಡದ ವೇಗದ ಬೌಲರ್‌ಗಳು ಮೊದಲ 6 ಓವರ್‌ಗಳಲ್ಲಿ ಕೇವಲ 1 ಬೌಂಡರಿ ನೀಡಿ, 6 ವಿಕೆಟ್‌ ಪಡೆದರು. ಅಲ್ಲದೆ ಕೇವಲ 13 ರನ್‌ ನೀಡಿದರು. ಇದು ನಿಜಕ್ಕೂ ಆರ್‌ಸಿಬಿ ತಂಡದ ಮಾಸ್ಟರ್ ಕ್ಲಾಸ್ ಬೌಲಿಂಗ್ ಮಾಡಿದರು.

Story first published: Monday, April 27, 2026, 20:44 [IST]
Other articles published on Apr 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+