Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs DC: ವೇಗವಾಗಿ ಕುಸಿದ ಡೆಲ್ಲಿ ಕ್ಯಾಪಿಟಲ್ಸ್‌: ಜೋಶ್‌ ಹ್ಯಾಜಲ್‌ವುಡ್‌ಗೆ 4, ಭುವಿಗೆ 3 ವಿಕೆಟ್‌

ನವದೆಹಲಿ: ಭರವಸೆಯ ಬೌಲರ್‌ಗಳಾದ ಜೋಶ್‌ ಹ್ಯಾಜಲ್‌ ವುಡ್‌ ಹಾಗೂ ಭುವನೇಶ್ವರ್ ಕುಮಾರ್ ಅವರ ಬಿಗುವಿನ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿ ಐಪಿಎಲ್‌ನ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡವನ್ನು 75 ರನ್‌ಗಳಿಗೆ ಕಟ್ಟಿ ಹಾಕಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಪಂಜಾಬ್‌ ವಿರುದ್ಧ 264 ರನ್‌ ಕಲೆ ಹಾಕಿತ್ತು. ಹೀಗಾಗಿ ಈ ತಂಡದ ಮೇಲೆ ಎಲ್ಲರ ನಿರೀಕ್ಷೆಗಳು ನೆಟ್ಟಿದ್ದವು. ಆರಂಭಿಕ ಆಟಗಾರ ಪತುಮ್ ನಿಸ್ಸಂಕಾ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಇವರ ಸ್ಥಾನದಲ್ಲಿ 18 ವರ್ಷದ ಸಾಹಿಲ್ ಪರಾಕ್‌ ಅವರಿಗೆ ಅವಕಾಶವನ್ನು ನೀಡಲಾಯಿತು. ಪದಾರ್ಪಣಾ ಪಂದ್ಯವನ್ನು ಆಡುತ್ತಿದ್ದ ಸಾಹಿಲ್ ಪರಾಕ್ ಅವರಿಗೆ ಭುವನೇಶ್ವರ್ ಕುಮಾರ್ ಖೆಡ್ಡಾ ತೋಡಿದರು.

RCB vs DC

ಬ್ಯಾಟರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಆರ್‌ಸಿಬಿ ತಂಡದ ವೇಗದ ಬೌಲರ್‌ಗಳು ತಮ್ಮ ಮಾಸ್ಟರ್ ಕ್ಲಾಸ್ ಬೌಲಿಂಗ್ ನಡೆಸಿದರು. ಪರ್ಫೆಕ್ಟ್‌ ಟೆಸ್ಟ್‌ ಲೈನ್‌ ಹಾಗೂ ಲೆಂಥ್‌ನಲ್ಲಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಹಾಗೂ ಜೋಶ್‌ ಹ್ಯಾಜಲ್‌ವುಡ್‌ ನಿಜಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದರು.

ವೇಗದ ಬೌಲರ್‌ಗಳ ಅಬ್ಬರ

ಪವರ್‌ ಪ್ಲೇನಲ್ಲಿ ಸಮಾನ್ಯವಾಗಿ ಬ್ಯಾಟರ್‌ಗಳ ಆರ್ಭಟ ಜೊರಾಗಿರುತ್ತದೆ. ಆದರೆ ಸೋಮವಾರ ಆರ್‌ಸಿಬಿ ಬೌಲರ್‌ಗಳು ಆರ್ಭಟಿಸಿದರು. ಜೋಶ್‌ ಹಾಗೂ ಭುವನೇಶ್ವರ್ ಅವರ ಕರಾರುವಾಕ್ ದಾಳಿಗೆ ಉತ್ತರಿಸಲು ಡೆಲ್ಲಿ ತಂಡದ ಸ್ಟಾರ್ ಆಟಗಾರರು ಸಹ ವಿಫಲರಾದರು. ಈ ಜೋಡಿ ಪವರ್‌ ಪ್ಲೇನಲ್ಲಿ ತಲಾ ಮೂರು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಪಂಜಾಬ್‌ ವಿರುದ್ಧ ಅಬ್ಬರಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಜೋಶ್‌ ಹ್ಯಾಜಲ್‌ವುಡ್‌ ತೋಡಿದ ಖೆಡ್ಡಾಗೆ ಬಲಿಯಾದರು. ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಆರು ಓವರ್‌ಗಳಲ್ಲಿ 13 ರನ್‌ ಕಲೆ ಹಾಕಿ 6 ವಿಕೆಟ್‌ ಕಳೆದುಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾಪ್‌ ಆರ್ಡರ್‌ನ 4 ಬ್ಯಾಟರ್‌ಗಳು 1 ರನ್‌ ದಾಟಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಪರ ಅಭಿಷೇಕ್ ಪೊರೆಲ್‌ 30 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಡೇವಿಡ್ ಮಿಲ್ಲರ್‌ 19, ಕೈಲ್‌ ಜೇಮಿಸನ್‌ 12 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಡೆಲ್ಲಿ ತಂಡ 16.3 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು.

60 ಡಾಟ್‌ ಬೌಲ್‌

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು 60 ಡಾಟ್‌ ಬೌಲ್‌ ಎಸೆದರು. ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ 12 ರನ್‌ ನೀಡಿ 4 ವಿಕೆಟ್‌ ಪಡೆದರು. ಇವರಿಗೆ ಭುವನೇಶ್ವರ್ ಕುಮಾರ್ ಉತ್ತಮ ಸಾಥ್ ನೀಡಿದರು. ಇವರು 3 ಓವರ್‌ಗಳಲ್ಲಿ 5 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಉಳಿದಂತೆ ರಸಿಕ್ ಸಲಾಂ ದಾರ್‌, ಸುಯಶ್‌ ಶರ್ಮಾ, ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

Story first published: Monday, April 27, 2026, 21:29 [IST]
Other articles published on Apr 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+