RCB vs DC: ಬೆಂಗಳೂರು ತಂಡದ ಗೆಲುವಿನ ಆಸೆಗೆ ಕೊಳ್ಳಿ ಇಟ್ಟಿದ್ದು ಆ ಒಂದು ಜೊತೆಯಾಟ
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್‌ನ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಲೀಗ್‌ನಲ್ಲಿ 2ನೇ ಸೋಲು ಕಂಡಿದೆ. ಆರ್‌ಸಿಬಿ ತಂಡದ ಗೆಲುವಿನ ಆಸೆಗೆ ಕೊಳ್ಳಿ ಇಟ್ಟಿದ್ದು ಡೆಲ್ಲಿ ತಂಡದ ಆ ಒಂದು ಜೊತೆಯಾಟ.
ಶನಿವಾರದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ (19) ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿತು. ದೇವದತ್ ಪಡಿಕ್ಕಲ್ 18, ಟಿಮ್ ಡೇವಿಡ್ 26, ಜಿತೇಶ್ ಶರ್ಮಾ 14 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆರಂಭಿಕ ಫಿಲ್ ಸಾಲ್ಟ್ 38 ಎಸೆತಗಳಲ್ಲಿ 63 ರನ್ ಸಿಡಿಸಿತು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 ರನ್ ಸೇರಿಸಿತು.

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ತಂಡದ ಆರಂಭ ತೀರಾ ಕಳಪೆಯಾಗಿತ್ತು. ಭರವಸೆಯ ಬ್ಯಾಟರ್ ಪಾತುಮ್ ನಿಸ್ಸಂಕಾ (1), ಕರುಣ್ ನಾಯರ್ (5), ಸಮೀರ್ ರಿಜ್ವಿ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಹಂತದಲ್ಲಿ ಆರ್‌ಸಿಬಿ ಪೂರ್ತಿ ಮೇಲುಗೈ ಸಾಧಿಸಿತ್ತು. ಆರ್‌ಸಿಬಿ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಪಡೆಯಿತು.
ಜೊತೆಯಾಟವೇ ಟರ್ನಿಂಗ್ ಪಾಯಿಂಟ್
ಆರಂಭಿಕ ಕೆಎಲ್ ರಾಹುಲ್ ಹಾಗೂ ಭರವಸೆಯ ಆಟಗಾರ ಟ್ರಿಸ್ಟನ್ ಸ್ಟಬ್ಸ್ ಅವರು ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 44 ಎಸೆತಗಳಲ್ಲಿ 69 ರನ್ ಸೇರಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಹುಟ್ಟು ಹಬ್ಬ ಆಚರಿಸಿಕೊಂಡ ಕೆಎಲ್ ರಾಹುಲ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 57 ರನ್ ಸಿಡಿಸಿದರು. ಟ್ರಿಸ್ಟನ್ ಸ್ಟಬ್ಸ್ 47 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಪಂದ್ಯದ ಸಾರಾಂಶ
ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175: ಫಿಲ್ ಸಾಲ್ಟ್ 63, ಟಿಮ್ ಡೇವಿಡ್ 26, ಅಕ್ಷರ್ ಪಟೇಲ್ 18ಕ್ಕೆ 2, ಕುಲ್‌ದೀಪ್ ಯಾದವ್ 32ಕ್ಕೆ 2,
ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 179: ಕೆಎಲ್ ರಾಹುಲ್ 57, ಟ್ರಿಸ್ಟನ್ ಸ್ಟಬ್ಸ್ ಅಜೇಯ 60, ಭುವನೇಶ್ವರ್ ಕುಮಾರ್ 26ಕ್ಕೆ 3
ಪಂದ್ಯ ಶ್ರೇಷ್ಠ: ಟ್ರಿಸ್ಟನ್ ಸ್ಟಬ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications