ಡೆಲ್ಲಿ, ಆರ್‌ಸಿಬಿ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ
19ನೇ ಆವೃತ್ತಿ ಐಪಿಎಲ್‌ನ 38ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಆಸೆಗೆ ಕೊಳ್ಳಿ ಇಟ್ಟ ಆರ್‌ಸಿಬಿ 9 ವಿಕೆಟ್‌ಗಳಿಂದ ಪಂದ್ಯ ಗೆದ್ದು ಎರಡನೇ ಸ್ಥಾನ ಭದ್ರ ಪಡಿಸಿಕೊಂಡಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಜೋಶ್ ಹ್ಯಾಜಲ್‌ವುಡ್ 4, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು. ಅಲ್ಪ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 6.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 77 ರನ್ ಸೇರಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಎರಡನೇ ಬಾರಿ ಪ್ರಶಸ್ತಿ ಎತ್ತುವ ಆಸೆ ಚಿಗುರಿದೆ.

- ಪವರ್ ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 13 ರನ್ ಕಲೆ ಹಾಕಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲ 6 ಓವರ್‌ಗಳಲ್ಲಿ ಕಲೆ ಹಾಕಿದ ಅಲ್ಪ ಮೊತ್ತವಾಗಿದೆ. ಇದಕ್ಕೂ ಮೊದಲು ಆರ್‌ಆರ್, ಆರ್‌ಸಿಬಿ ತಂಡಗಳು 14 ರನ್‌ಗಳನ್ನು 2009ರಲ್ಲಿ ಹಾಗೂ ಎಸ್‌ಆರ್‌ಎಚ್ ಇಷ್ಟೇ ರನ್‌ಗಳನ್ನು 2022ರಲ್ಲಿ ದಾಖಲಿಸಿತ್ತು.
ಪವರ್‌ಪ್ಲೇನಲ್ಲಿ ಕನಿಷ್ಠ ಮೊತ್ತ ಕಲೆ ಹಾಕಿದ ತಂಡಗಳ ವಿವರ
| ಸ್ಕೋರ್ | ತಂಡ | ವಿರುದ್ಧ | ಸ್ಥಳ | ವರ್ಷ |
|---|---|---|---|---|
| 14/2 | ರಾಜಸ್ಥಾನ್ ರಾಯಲ್ಸ್ | ಆರ್.ಸಿ.ಬಿ | ಕೇಪ್ ಟೌನ್ | 2009 |
| 14/3 | ಸನ್ ರೈಸರ್ಸ್ ಹೈದರಾಬಾದ್ | ರಾಜಸ್ಥಾನ್ ರಾಯಲ್ಸ್ | ಪುಣೆ | 2022 |
| 15/2 | ಚೆನ್ನೈ ಸೂಪರ್ ಕಿಂಗ್ಸ್ | ಕೆ.ಕೆ.ಆರ್ | ಕೋಲ್ಕತ್ತಾ | 2011 |
| 15/4 | ಡೆಲ್ಲಿ ಕ್ಯಾಪಿಟಲ್ಸ್ | ಗುಜರಾತ್ ಟೈಟಾನ್ಸ್ | ಅಹಮದಾಬಾದ್ | 2023 |
| 16/1 | ಚೆನ್ನೈ ಸೂಪರ್ ಕಿಂಗ್ಸ್ | ಡೆಲ್ಲಿ ಡೇರ್ ಡೆವಿಲ್ಸ್ | ರಾಯ್‌ಪುರ | 2015 |
| 16/1 | ಚೆನ್ನೈ ಸೂಪರ್ ಕಿಂಗ್ಸ್ | ಆರ್.ಸಿ.ಬಿ | ಚೆನ್ನೈ | 2019 |
- ಡೆಲ್ಲಿ ಕ್ಯಾಪಿಟಲ್ಸ್ ಕೇವಲ 7 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಇದು ಐಪಿಎಲ್ ಇತಿಹಾಸದ ಇನ್ನಿಂಗ್ಸ್‌ವೊಂದರಲ್ಲಿ ತಂಡ 5 ವಿಕೆಟ್‌ಗೆ ದಾಖಲಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.
- ಡೆಲ್ಲಿ ತಂಡ ಪವರ್ ಪ್ಲೇನಲ್ಲಿ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಡಿಸಿ ಮತ್ತೊಂದು ಬೇಡವಾದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. 2011 ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಕೊಚ್ಚಿ ತಂಡವೂ ಪವರ್‌ಪ್ಲೇನಲ್ಲಿ 6 ವಿಕೆಟ್ ಕಳೆದುಕೊಂಡಿತ್ತು.
- ಐಪಿಎಲ್‌ನಲ್ಲಿ ಅತಿ ಹೆಚ್ಚು ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನು ಗೆದ್ದ ಎರಡನೇ ಪಂದ್ಯ ಎಂಬ
ಹೆಗ್ಗಳಿಕೆ ಆರ್‌ಸಿಬಿ ತಂಡದ್ದಾಗಿದೆ. ಆರ್‌ಸಿಬಿ, ಡೆಲ್ಲಿ ವಿರುದ್ಧ 81 ಎಸೆತ ಬಾಕಿ ಇರುವಂತೆ ಜಯ ಸಾಧಿಸಿತು. ಇದಕ್ಕೂ ಮೊದಲು ಮುಂಬೈ 87 ಎಸೆತ ಬಾಕಿ ಇರುವಂತೆ ಕೆಕೆಆರ್ ವಿರುದ್ಧ ಜಯ ಸಾಧಿಸಿತ್ತು.
- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸುಯಶ್ ಶರ್ಮಾ 20 ಡಾಟ್ ಬೌಲ್‌ಗಳನ್ನು ಮಾಡಿದರು. ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರ ಮಾಡಿದ ಅತಿ ಹೆಚ್ಚು ಡಾಟ್ ಬೌಲ್‌ಗಳಾಗಿವೆ. ಈ ಮೂಲಕ ಸುಯಶ್ ಶರ್ಮಾ, ಜೊತೆಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಮುನಫ್ ಪಟೇಲ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮುನಫ್ ಆರ್‌ಆರ್ ಪರ ಆಡುವಾಗ ಕೆಕೆಆರ್ ವಿರುದ್ಧ ಈ ಸಾಧನೆ ಮಾಡಿದ್ದರು.
ಸುಯಶ್ ಸಾಧನೆ
- ಸುಯಶ್ ಶರ್ಮಾ ತಮ್ಮ 4 ಓವರ್‌ಗಳ ಕೋಟಾದಲ್ಲಿ 7 ರನ್ ನೀಡಿ 1 ವಿಕೆಟ್ ಪಡೆದಿದ್ದು, ಅನ್‌ಕ್ಯಾಪ್ಡ್ ಬೌಲರ್ ಬೆಸ್ಟ್ ಎಕನಾಮಿ ಆಗಿದೆ. ಇದಕ್ಕೂ ಮೊದಲು ರಾಹುಲ್ ಶರ್ಮಾ (2/7) ಮುಂಬೈ ವಿರುದ್ಧ ಪುಣೆ ಪರ ಆಡುವಾಗ ಈ ಸಾಧನೆ ಮಾಡಿದ್ದರು.
- ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 9012 ರನ್ ಕಲೆ ಹಾಕಿದ್ದು, ಬ್ಯಾಟರ್ ಒಬ್ಬ ಕಲೆ ಹಾಕಿದ ಗರಿಷ್ಠ ಮೊತ್ತವಾಗಿದೆ.
- ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಡೆಲ್ಲಿ ವಿರುದ್ಧ ಜಂಟಿಯಾಗಿ 17 ರನ್ ನೀಡಿ 7 ವಿಕೆಟ್ ಪಡೆದರು. ಇದು ಐಪಿಎಲ್‌ನಲ್ಲಿ ದಾಖಲಾದ ಬೆಸ್ಟ್ ಬೌಲಿಂಗ್ ಜೊತೆಯಾಟವಾಗಿದೆ. ಇದಕ್ಕೂ ಮೊದಲು ಇಶಾಂತ್ ಶರ್ಮಾ, ಡೇಲ್ ಸ್ಟೇಯ್ನ (8/29) ಈ ಸಾಧನೆ ಮಾಡಿದ್ದರು. ಡೆಕ್ಕನ್ ಚಾರ್ಜರ್ಸ್ ಪರ ಇವರು ಬೌಲಿಂಗ್ ಮಾಡಿ ಕೊಚ್ಚಿ ಬ್ಯಾಟರ್‌ಗಳನ್ನು ಕಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

