ಶುಕ್ರವಾರ, ಮಾರ್ಚ್ 29ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣವು 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿದೆ.
ಈ ಹಿಂದೆ ಮೈದಾನದಲ್ಲಿ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯೊಂದಿಗೆ ಸಂಬಂಧವನ್ನು ಮುರಿದುಕೊಂಡಿರುವ ಕೋಲ್ಕತ್ತಾ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡ ಗೌತಮ್ ಗಂಭೀರ್ ಅವರು ಮತ್ತೊಮ್ಮೆ ಮುಖಾಮುಖಿಯಾಗುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಶುಕ್ರವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡಗ್-ಔಟ್ ಅನ್ನು ನೋಡಿದಾಗ ವಿರಾಟ್ ಕೊಹ್ಲಿಯನ್ನು ಉರಿದು ಬೀಳಲು ಭಾರತ ಮತ್ತು ಆರ್‌ಸಿಬಿ ತಂಡದ ಮಾಜಿ ವೇಗದ ಬೌಲರ್ ವರುಣ್ ಆರೋನ್ ಬೆಂಬಲಿಸಿದ್ದಾರೆ.
ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ರೋಚಕ ಪಂದ್ಯದ ಮೊದಲು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ವರುಣ್ ಆರೋನ್, ತಾನು ಮೈದಾನದ ಹೊರಗೆ ಪಂದ್ಯವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಕೋಲ್ಕತ್ತಾ ಡಗ್-ಔಟ್ ಅನ್ನು ನೋಡಿದಾಗ ವಿರಾಟ್ ಕೊಹ್ಲಿ ಉರಿದುಕೊಳ್ಳುತ್ತಾರೆ ಎಂದು ತಿಳಿಸಿದರು.

ಐಪಿಎಲ್ 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೀಗ್ ಹಂತದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮೈದಾನದಲ್ಲಿ ಕೊಳಕು ಜಗಳದಲ್ಲಿ ಭಾಗಿಯಾಗಿದ್ದರು.
"ನಾನು ಏನನ್ನೂ ಬೆರೆಸಲು ಬಯಸುವುದಿಲ್ಲ. ಆದರೆ ನಾನು ಬೌಂಡರಿ ಗೆರೆಯ ಹೊರಗಿನ ಪೈಪೋಟಿಯನ್ನು ಎದುರು ನೋಡುತ್ತಿದ್ದೇನೆ. ಬೆಂಗಳೂರು ಡಗ್-ಔಟ್ ಪಕ್ಕದಲ್ಲೇ ಗೌತಮ್ ಗಂಭೀರ್ ಇರಲಿದ್ದಾರೆ, ಅಲ್ಲಿ ಏನಾಗುತ್ತೋ ಗೊತ್ತಿಲ್ಲ. ವಿರಾಟ್ ತನ್ನ ಹೊಟ್ಟೆಯಲ್ಲಿ ಬೆಂಕಿಯನ್ನು ಹೊಂದಲು ಇಷ್ಟಪಡುತ್ತಾನೆ ಎಂದು ನಮಗೆ ತಿಳಿದಿದೆ. ಅವರು ಕೋಲ್ಕತ್ತಾದ ಡಗ್-ಔಟ್ ಅನ್ನು ನೋಡಿದರೆ, ಉರಿದು ಬೀಳುತ್ತಾರೆ," ಎಂದು ವರುಣ್ ಆರೋನ್ ಹೇಳಿದರು.

2023ರ ಘಟನೆಯು ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಭೀರ್ ಜಗಳವಾಡಿರುವುದು ಮೊದಲ ಬಾರಿಗೆ ಏನಲ್ಲ. 2013ರಲ್ಲಿ ಕೋಲ್ಕತ್ತಾ ತಂಡಕ್ಕೆ ಗೌತಮ್ ಗಂಭೀರ್ ನಾಯಕರಾಗಿದ್ದಾಗ ಮತ್ತು ವಿರಾಟ್ ಕೊಹ್ಲಿ ಆರ್‌ಸಿಬಿ ಮುನ್ನಡೆಸುತ್ತಿದ್ದಾಗ ಜಗಳ ಮಾಡಿಕೊಂಡಿದ್ದರು.
ಇಬ್ಬರೂ ಬಿಸಿಯಾದ ವಾಗ್ವಾದದಲ್ಲಿ ತೊಡಗಿದ್ದರು, ತಮ್ಮ ಸಹ ಆಟಗಾರರಿಂದ ಬೇರ್ಪಡುವ ಮೊದಲು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
2023ರಲ್ಲಿ ಲಕ್ನೋ ಸೂಪರ್ ಜೈಂಟ್ಟ್ ಮೆಂಟರ್ ಆಗಿದ್ದಾಗ, ತಮ್ಮ ತಂಡದ ಆಟಗಾರ ಹಾಗೂ ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಜಗಳವಾಡಿದಾಗ ಗೌತಮ್ ಗಂಭೀರ್ ಕೂಡ ಪ್ರವೇಶಿಸಿ ಅವರ ಪೈಪೋಟಿಯನ್ನು ಮತ್ತೊಮ್ಮೆ ಮುಂದುವರೆಸಿದರು.
ಪಂದ್ಯದ ಅಂತ್ಯದ ನಂತರ, ಗೌತಮ್ ಗಂಭೀರ್ ತಮ್ಮ ಆಟಗಾರರನ್ನು ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಬೇಡಿ ಎಂದು ಒತ್ತಾಯಿಸಿದರು ಮತ್ತು ಲಕ್ನೋ ಆಟಗಾರರು ತಡೆಯುವ ಮೊದಲು ಭಾರತದ ಬ್ಯಾಟರ್ ಜೊತೆ ವಾಗ್ವಾದ ನಡೆಸಿದರು.
ಪಂದ್ಯದ ನಂತರ, ಗೌತಮ್ ಗಂಭೀರ್ ಅವರು ತಮ್ಮ ಯಾವುದೇ ಆಟಗಾರರನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಹೆಚ್ಚು ಸಾಮಾಜಿಕ ಮಾಧ್ಯಮ ಇರುವ ಆಟಗಾರರು ಇತರ ಆಟಗಾರರ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
"ಇದು ನವೀನ್-ಉಲ್-ಹಕ್ ಮಾತ್ರ ಅಲ್ಲ. ನಾನು ಯಾವುದೇ ಆಟಗಾರನನ್ನು ಸಮರ್ಥಿಸಿಕೊಳ್ಳುತ್ತಿದ್ದೆ, ಅದು ನನ್ನ ಕೆಲಸ, ಅದು ನನ್ನ ತಂಡ. ನಾನು ನನ್ನ ಆಟಗಾರರನ್ನು ಏಕೆ ರಕ್ಷಿಸಬಾರದು, ಸುತ್ತಲೂ ಹೆಚ್ಚಿನ ಸಾಮಾಜಿಕ ಮಾಧ್ಯಮವನ್ನು ಹೊಂದಿರುವವರು ಯಾರೊಬ್ಬರ ಮೇಲೆ ನಡೆಯಲು ಯಾವುದೇ ಹಕ್ಕಿಲ್ಲ," ಎಂದು ಗೌತಮ್ ಗಂಭೀರ್ 2023ರಲ್ಲಿ ಹೇಳಿದ್ದರು.
ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡ ಕೆಕೆಆರ್ ತಂಡವನ್ನು ಎದುರಿಸುವಾಗ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಯಾವುದೇ ಪ್ರೀತಿಯ ಮಾತುಕತೆ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿರುವ ಕಾರಣ, ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಏನಾಗಲಿದೆ ಎಂಬುದನ್ನು ವೀಕ್ಷಿಸಲು ಕಾತರರಾಗಿದ್ದಾರೆ.