RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್‌ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಅಲ್ಲದೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿಯಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ ತಂಡವನ್ನೇ ಆರ್‌ಸಿಬಿ ಕಣಕ್ಕೆ ಇಳಿಸಲು ನಿರ್ಧರಿಸಿದೆ.
ಟಾಸ್ ವೇಳೆ ಟಾಸ್ ಗೆದ್ದ ತಕ್ಷಣ ಶ್ರೇಯಸ್ ಅಯ್ಯರ್ ತಂಡವನ್ನು ಹೆಸರಿಸುವ ವೇಳೆ ಗೊಂದಲಕ್ಕೆ ಒಳಗಾದರು. ಡ್ರೆಸ್ಸಿಂಗ್ ರೂಮ್‌ನಿಂದ ಹೊರ ಬರುವಾಗ ಎರಡು ತಂಡಗಳ ಪ್ರಿಂಟ್ ಔಟ್ ಹಿಡಿದು ಬಂದಿದ್ದರು. ರವಿ ಶಾಸ್ತ್ರಿ ನಿಮ್ಮ ತಂಡ ಹೇಗಿರಲಿದೆ ಎಂದು ಕೇಳಿದಾಗ, ಶ್ರೇಯಸ್ ಗೊಂದಲಕ್ಕೆ ಈಡಾದರು. ಅಲ್ಲದೆ ಎರಡೂ ಪೇಪರ್ ನೋಡಿ ನಾನು ಕನ್ಫ್ಯೂಸ್ ಆಗಿದ್ದೇನೆ ಎಂದು ಶ್ರೇಯಸ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ಅನುಕೂಲ್ ರಾಯ್‌ಗೆ ಅವಕಾಶ ನೀಡಿದೆ. ಆದರೆ ಯಾರ ಬದಲಿಗೆ ಇವರನ್ನು ಆಯ್ಕೆ ಮಾಡಿದೆ ಎಂದು ಹೆಸರಿಸುವಲ್ಲಿ ಅವರು ಗೊಂದಲಕ್ಕೆ ಈಡಾದರು.

ಆರ್‌ಸಿಬಿ ತಂಡ: ಫಾಫ್ ಡುಪ್ಲೇಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಕ್ಯಾಮುರೂನ್ ಗ್ರೀನ್, ಗ್ಲೇನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಯಶ್ ದಯಾಳ್.
ಕೆಕೆಆರ್ ತಂಡ: ಪಿನ್ ಸಾಲ್ಟ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರಿ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಅನುಕೂಲ್ ರಾಯ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications