For Quick Alerts
ALLOW NOTIFICATIONS  
For Daily Alerts
 

RCB vs KKR: ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ ವರುಣ್ ಚಕ್ರವರ್ತಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಈ ಬಾರಿಯ ಆವೃತ್ತಿಯಲ್ಲಿ ಎರಡನೇ ಪಂದ್ಯವನ್ನು ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ಗೆದ್ದುಕೊಂಡಿದೆ. ಈ ಮೂಲಕ ಸತತ ಸೋಲಿನ ಸರಪಳಿಯಿಮದ ಕೆಕೆಆರ್ ಹೊರಬಂದಿದೆ. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಪರವಾಗಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ತಂಡದ ಗೆಲುವಿಗೆ ಕಾರಣವಾಗಿದ್ದು ವರುಣ್ ಚಕ್ರವರ್ತಿ. ಅದ್ಭುತವಾಗಿ ರನ್ ನಿಯಂತ್ರಣ ಮಾಡಿದಲ್ಲದೆ ಆರ್‌ಸಿಬಿ ತಂಡದ ಮೂರು ವಿಕೆಟ್ ಪಡೆದು ಆಘಾತ ನೀಡಿದರು.

ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದಾರೆ. ತಮ್ಮ ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ವರುಣ್ 27ರನ್ ನೀಡಿದ್ದು 3 ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಈ ಪ್ರದರ್ಶನಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವರುಣ್ ಚಕ್ರವರ್ತಿ ಈ ಪ್ರದರ್ಶನವನ್ನು ಇತ್ತೀಚೆಗಷ್ಟೇ ಜನಿಸಿದ ತನ್ನ ಪುತ್ರನಿಗೆ ಅರ್ಪಿಸಿದ್ದಾರೆ.

RCB vs KKR: Man of the match Varun Chakravarthy dedicate his performance to special person

ಪಂದ್ಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಗುತ್ತಲೇ ಸ್ವೀಕರಿಸಿದ ವರುಣ್ ಚಕ್ರವರ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ನಂಥಾ ಟೂರ್ನಿಯಲ್ಲಿ ಬೌಲರ್‌ನ ಬದುಕು ನಿಜಕ್ಕೂ ತಮಾಷೆಂತಾಗುತ್ತದೆ. ಕಳೆದ ಪಂದ್ಯದಲ್ಲಿ 49ರನ್ ಬಿಟ್ಟುಕೊಟ್ಟಿದ್ದೆ ಈ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿದ್ದೇನೆ ಎಂದರು. ಈ ಆವೃತ್ತಿಯಲ್ಲಿ ಹೆಚ್ಚಿನ ಪ್ರಯೋಗಳನ್ನು ಮಾಡದಿದ್ದರೂ ನಿಖರವಾಗಿ ದಾಳಿ ನಡೆಸುವತ್ತ ಹೆಚ್ಚು ಚಿತ್ತ ನೆಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

"ಕ್ರಿಕೆಟ್ ಅಂದ್ರೆನೇ ಹೀಗೆ. ಕಳೆದ ಪಂದ್ಯದಲ್ಲಿ ನಾನು 49 ರನ್ ಬಿಟ್ಟುಕೊಟ್ಟಿದ್ದೆ. ಇಮದು 3 ವಿಎಕಟ್ ಪಡೆದಿದ್ದೇನೆ. ಇದುವೇ ಜೀವನ. ಈ ಬಾರಿ ನಾನು ನಿಖರವಾಗಿ ಬೌಲಿಂಗ್ ಮಾಡುವತ್ತ ಹೆಚ್ಚು ಚಿತ್ತ ಹರಿಸಿದ್ದೇನೆ. ಎಸಿ ಪ್ರತಿಭನ್ ಹಾಗೂ ಅಭೀಶೇಕ್ ನಾಯರ್ ನನ್ನೊಂದಿಗೆ ಬಹಳ ಶ್ರಮಪಟ್ಟಿದ್ದಾರೆ" ಎಂದಿದ್ದಾರೆ ಸ್ಪಿನ್ನರ್ ವರುಣ್ ಚಕ್ರವರ್ತಿ.

ಇನ್ನು ಪ್ರಶಸ್ತಿ ಸ್ವೀಕರಿಸಿದ ಹೊರಡುವ ಮುನ್ನ ವರುಣ್ ಚಕ್ರವರ್ತಿ ಪ್ರೇಕ್ಷಕರೊಂದಿಗೆ ಭಾವನಾತ್ಮಕ ವಿಚಾರವೊಂದನ್ನು ಹಂಚಿಕೊಂಡರು. "ಈ ಪ್ರಶಸ್ತಿಯನ್ನು ನಾನು ಇತ್ತೀಚೆಗಷ್ಟೇ ಜನಿಸಿರುವ ನನ್ನ ಪುತ್ರನಿಗೆ ಅರ್ಪಿಸುತ್ತೇನೆ. ಆತನನ್ನು ನಾನಿನ್ನೂ ನೋಡಿಲ್ಲ. ಆದರೆ ಅವನಿಗೆ ಹಾಗೂ ನನ್ನ ಪತ್ನಿಗೆ ಧನ್ಯವಾದ ಹೇಳುತ್ತಿದ್ದೇನೆ. ಐಪಿಎಲ್ ಮುಕ್ತಾಯವಾದ ಬಳಿಕ ನಾನು ಅವರನ್ನು ಭೇಟಿಯಾಗುತ್ತೇನೆ" ಎಂದಿದ್ದಾರೆ ವರುಣ್ ಚಕ್ರವರ್ತಿ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಅದ್ಭುತ ಆರಂಭ ಪಡೆಯಿತು. ಜೇಸನ್ ರಾಯ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಬ್ಬರದ ಆರಂಭ ನೀಡಿದರು. 29 ಎಸೆತಗಳಲ್ಲಿ 56 ರನ್‌ ಸಿಡಿಸಿ ಅಬ್ಬರಿಸಿದ ಪರಿಣಾಮ ಮೊದಲಾರ್ಧದಲ್ಲಿ ಕೊಹ್ಲಿ ಪಡೆಗೆ ಹಿನ್ನಡೆಯಾಗುವಂತೆ ಮಾಡಿದರು. ನಂತರ ನಿತೀಶ್ ರಾಣಾ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು 21 ಎಸೆತಗಳಲ್ಲಿ 48 ರನ್ ಬಾರಿಸಿ ಆರ್ಭಟಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಕೆಕೆಆರ್ 5 ವಿಕೆಟ್ ಕಳೆದುಕೊಂಡು ಭರ್ತಿ 200 ರನ್‌ಗಳಿಸಲು ಶಕ್ತವಾಯಿತು ಕೆಕೆಆರ್

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಫಾಫ್ ಡು ಪ್ಲೆಸಿಸ್ 7 ಎಸೆತಗಳಲ್ಲಿ 17 ರನ್‌ ಸಿಡಿಸಿ ವಿಕೆಟ್ ಕಳೆದುಕೊಂಡರು. ಶಹ್ಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್ ವಿಫಲವಾದ ಕಾರಣ ಸಂಕಷ್ಟಕ್ಕೆ ಸಿಲುಕಿದರೂ ಹಂಗಾಮಿ ನಾಯಕ ಕೊಹ್ಲಿ ಅದ್ಭುತ ಹೋರಾಟವನ್ನು ಮುಂದುವರಿಸಿದರು. ಮಹಿಪಾಲ್ ಲೋಮ್ರೋರ್ ಅವರಿಗೆ ಕೆಲ ಕಾಲ ಅದ್ಭುತ ಜೊತೆಯಾಟ ನೀಡುವ ಮೂಲಕ ಆರ್‌ಸಿಬಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಉಳಿದ ಆಟಗಾರರಿಂದ ಹೋರಾಟದ ಪ್ರದರ್ಶನ ಬಾರಲಿಲ್ಲ. ದಿನೇಶ್ ಕಾರ್ತಿಕ್ ಮತ್ತೊಮ್ಮೆ ವೈಫಲ್ಯ ಕಂಡಋಉ. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 179 ರನ್‌ ಮಾತ್ರವೇ ಗಳಿಸಿದ್ದು 21 ರನ್‌ಗಳ ಅಂತರದ ಸೋಲು ಅನುಭವಿಸಿದೆ.

Story first published: Thursday, April 27, 2023, 10:20 [IST]
Other articles published on Apr 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+