RCB vs KKR: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸುನಿಲ್ ನರೈನ್
ವಿಶ್ವದ ಸ್ಟಾರ್ ಆಟಗಾರಲ್ಲಿ ಒಬ್ಬರಾದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆಯನ್ನು ಬರೆದಿದ್ದಾರೆ. ಶುಕ್ರವಾರ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಸುನಿಲ್ ನರೈನ್ ವಿಶೇಷ ಕ್ಲಬ್ ಸೇರಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ತಮ್ಮದೆ ಆದ ಗುರುತು ಹೊಂದಿರುವ ಈ ಪ್ಲೇಯರ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈಗ ಅವರ ದಾಖಲೆಯ ಲೀಸ್ಟ್‌ಗೆ ಮತ್ತೊಂದು ದಾಖಲೆ ಸೇರಿಕೊಂಡಿದೆ. ತಮ್ಮ ವಿಶಿಷ್ಠ ಪಿರ್ಕಿಗಳಿಂದ ಎದುರಾಳಿಗಳನ್ನು ಕಾಡುವ ಈ ಪ್ಲೇಯರ್‌ಗೆ ವಿಶ್ವದಲ್ಲೇ ಭಾರೀ ಮನ್ನಣೆ ಇದೆ. ಇವರು ವಿಶ್ವದ ನಾನಾ ಭಾಗಗಳಲ್ಲಿ ಹಲವು ಟಿ20 ಲೀಗ್‌ಗಳನ್ನು ಆಡುತ್ತಾರೆ. ಇದರ ಪರಿಣಾಮವೇ ಶುಕ್ರವಾರ ಅವರು ದಾಖಲೆಯ ಪುಟ ಸೇರಿದ್ದಾರೆ.

ವಿಶ್ವದ ನಾಲ್ಕನೇ ಆಟಗಾರ
ಟಿ20 ಕ್ರಿಕೆಟ್‌ನಲ್ಲಿ 500 ಪಂದ್ಯಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಸುನಿಲ್ ನರೈನ್ ಪಾತ್ರರಾಗಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸುನಿಲ್ ಈ ಸಾಧನೆ ಮಾಡಿದ್ದಾರೆ. ಅವರು ತಮ್ಮ ಕಲಾತ್ಮಕ ಸ್ಪಿನ್ ಬೌಲಿಂಗ್ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ಕಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಈಗ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಪ್ಲೇಯರ್‌ಗಳ ಹವಾ
ಟಿ20 ಕ್ರಿಕೆಟ್ ಆರಂಭವಾದಾಗಿನಿಂದಲೂ ವೆಸ್ಟ್ ಇಂಡೀಸ್ ಪ್ಲೇಯರ್‌ಗಳ ಅಬ್ಬರ ಜೋರಾಗಿದೆ. ಐಪಿಎಲ್‌ನಲ್ಲೂ ಹಲವು ವಿಂಡೀಸ್ ಪ್ಲೇಯರ್‌ಗಳು ಆಡಿ ತಮ್ಮ ಛಾಪು ಮೂಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಕೀರ್ತಿ ವೆಸ್ಟ್ ಇಂಡೀಸ್‌ನ ಕೀರನ್ ಪೋಲಾರ್ಡ್ ಅವರಿಗೆ ಸಲ್ಲುತ್ತದೆ. ಇವರು 660 ಪಂದ್ಯಗಳನ್ನು ಆಡಿ ಗಮನ ಸೆಳೆದಿದ್ದಾರೆ.
ಈ ಪಟ್ಟಿಯಲ್ಲಿ ಡ್ವೇನ್ ಬ್ರಾವೋಗೂ ಸ್ಥಾನವಿದೆ. ಇವರು 570 ಪಂದ್ಯಗಳನ್ನು ಆಡಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಸ್ಟಾರ್ ಆಟಗಾರರು ಈಗಾಗಲೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕ್ ಪ್ಲೇಯರ್ ಶೋಯಿಬ್ ಮಲಿಕ್‌ಗೂ ಸ್ಥಾನವಿದೆ. ಇವರು 452 ಪಂದ್ಯಗಳನ್ನು ಆಡಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಈಗ ಈ ಪಟ್ಟಿಗೆ ಸುನಿಲ್ ನರೈನ್ ಎಂಟ್ರಿ ಪಡೆದಿದ್ದಾರೆ.

ಈ ಪಟ್ಟಿಗೆ ಎಂಟ್ರಿ ನೀಡಲು ಇನ್ನೊಬ್ಬ ವಿಂಡೀಸ್ ಪ್ಲೇಯರ್ ಕಾತುರರಾಗಿದ್ದಾರೆ. ವಿಂಡೀಸ್ ತಂಡದ ಸ್ಟಾರ್ ಪ್ಲೇಯರ್ ಆಂಡ್ರಿ ರಸೆಲ್ 484 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಇವರು ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಿದ್ದಾರೆ.
ಸುನಿಲ್ ನರೈನ್ ತಮ್ಮ 500 ಟಿ20 ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 40 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications