RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
ಇಂದು ಆರ್‌ಸಿಬಿ ಹಾಗೂ ಕೆಕೆಆರ್ ನಡವುಣ ಕಾದಾಟವನ್ನು ನೋಡಲು ಅಭಿಮಾನಿಗಳು ಫುಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಎರಡೂ ಕಡೆಯಲ್ಲಿ ಸ್ಟಾರ್ ಆಟಗಾರರು ಇದ್ದು, ರೋಚಕತೆ ಹೆಚ್ಚಿಸಿದೆ. ಈ ಪಂದ್ಯದಲ್ಲಿ ರನ್ ಮಳೆ ಸುರಿಯುವದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಹೊಡಿ ಬಡಿ ಆಟದ ಖ್ಯಾತ ನಾಮ ಆಟಗಾರರು ಎರಡೂ ತಂಡದಲ್ಲಿ ಇದ್ದು ರೋಚಕತೆ ಹೆಚ್ಚಿಸಿದೆ.
ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಫೈಟ್ ಗ್ರೌಂಡ್ ಒಳಗಡೆ ಹಾಗೂ ಹೊರಗಡೆ ರೋಚಕತೆಯಿಂದ ಕೂಡಿರುತ್ತದೆ. ಒಂದು ಕಡೆಯಲ್ಲಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಅಂಗಳಕ್ಕೆ ಪ್ರವೇಶಿಸಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಸ್ಫೋಟಕ ಬ್ಯಾಟರ್‌ಗಳು ಉಭಯ ತಂಡದಲ್ಲಿ ಇದ್ದು, ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲರು. ಇಂತಹ ಆಟಗಾರರ ಬಗ್ಗೆ ಪರಿಚಯ ಇಲ್ಲಿದೆ.

ಗ್ಲೇನ್ ಮ್ಯಾಕ್ಸ್‌ವೆಲ್
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಮೇಲೆ ಭರವಸೆ ಹೆಚ್ಚಿದೆ. ಈ ಪ್ಲೇಯರ್ ಮೈದಾನದಲ್ಲಿ ಟೈಮ್ ಸ್ಪೆಂಡ್ ಮಾಡಿದ್ದೇ ಆದಲ್ಲಿ ಬಿಗ್ ಇನ್ನಿಂಗ್ಸ್ ಫಿಕ್ಸ್.. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಏಕಾಂಗಿಯಾಗಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸೀಸ್‌ಗೆ ಗೆಲುವಿನ ಮಾಲೆ ತೊಡಿಸಿದ ಪ್ಲೇಯರ್, ಇನ್ನು ಐಪಿಎಲ್‌ನಲ್ಲಿ ಅಬ್ಬರದ ಆಟವನನ್ನು ಪ್ರದರ್ಶಿಸಿಲ್ಲ. ಹೀಗಾಗಿ ಇವರ ಮೇಲೆ ಒತ್ತಡ ಹೆಚ್ಚಿದೆ. ಈ ಪ್ಲೇಯರ್ ಅಬ್ಬರಿಸಿದ್ದೇ ಆದಲ್ಲಿ ಗೆಲುವಿನ ಕನಸು ನನಸಾಗುತ್ತದೆ.
ಫಾಫ್ ಡುಪ್ಲೇಸಿಸ್
RCB ನಾಯಕ ಫಾಫ್ ಡು ಪ್ಲೆಸಿಸ್ ಅನೇಕ ಸಂದರ್ಭಗಳಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಇದುವರೆಗೆ 132 ಪಂದ್ಯಗಳಲ್ಲಿ 4171 ರನ್ ಗಳಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಫಾಫ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಕೆಕೆಆರ್ ವಿರುದ್ಧ ಅಬ್ಬರಿಸಿ ತಂಡಕ್ಕೆ ನೆರವಾಗುವ ಅಗತ್ಯತೆ ಇದೆ.
ವಿರಾಟ್ ಕೊಹ್ಲಿ
ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಸಾಧಾರಣವಾಗಿ ಬ್ಯಾಟ್ ಮಾಡಿದ್ದ ಕೊಹ್ಲಿ, ಪಂಜಾಬ್ ವಿರುದ್ಧ ಪಂದ್ಯದಲ್ಲಿ ಆರ್ಭಟಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಎಂಟು ವರ್ಷದಿಂದ ತವರಿನಲ್ಲಿ ಕೆಕೆಆರ್ ವಿರುದ್ಧ ನನಸಾಗದ ಗೆಲುವಿನ ಆಸೆಯನ್ನು ಈಡೇರಬೇಕಾದಲ್ಲಿ ವಿರಾಟರೂಪ ಪ್ರದರ್ಶಿಸುವುದು ಅಗತ್ಯ.

ಆಂಡ್ರೆ ರಸೆಲ್
ಆಂಡ್ರೆ ರಸೆಲ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಜನಪ್ರಿಯ. ರಸೆಲ್ ಕಳೆದ ಪಂದ್ಯದಲ್ಲಿ ಸ್ಫೋಟಕ ಆಟವಾಡಿ ಅಜೇಯ 64 ರನ್ ಗಳಿಸಿದ್ದರು. ಈ ಅವಧಿಯಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸಿಡಿದವು. ರಸೆಲ್ ಇದುವರೆಗೆ 113 ಪಂದ್ಯಗಳನ್ನು ಆಡಿದ್ದು, 2326 ರನ್ ಗಳಿಸಿದ್ದಾರೆ. ಇವರಿಗೆ ಆರ್‌ಸಿಬಿ ಎಂದರೆ ಫೆವರೀಟ್. ಪ್ರತಿ ಬಾರಿಯೂ ಅಂಗಳಕ್ಕೆ ಈಳಿದಾಗಲೂ ಆರ್‌ಸಿಬಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications