IPL 2024: ಆರ್‌ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್‌ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
ಶುಕ್ರವಾರ, ಮಾರ್ಚ್ 29ರಂದು 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ರೋಚಕ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳ ಸೆಣಸಾಟಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿವೆ.
ಇದೇ ವೇಳೆ ಕೆಕೆಆರ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಮೆಂಟರ್ ಗೌತಮ್ ಗಂಭೀರ್ ಮತ್ತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಜಗಳಕ್ಕೆ ದಶಕದ ಇತಿಹಾಸವಿದೆ. ಆದರೆ, ಇದೀಗ 2024ರ ಐಪಿಎಲ್ ಪಂದ್ಯಕ್ಕೂ ಮುನ್ನ ಒಂದು ಫೋಟೋ ಅಂತರ್ಜಾಲಕ್ಕೆ ಬೆಂಕಿ ಹಚ್ಚಿದೆ.

ಗೌತಮ್ ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೆಂಟರ್ ಆಗಿ ಮರಳಿದ್ದಾರೆ. ಕೆಕೆಆರ್ ತಂಡ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
ಐಪಿಎಲ್‌ನ ಹಲವು ವರ್ಷಗಳಿಂದ ಇಬ್ಬರು ಕ್ರಿಕೆಟಿಗರು ವಿವಾದದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ನಂತರ ಅಂತಹ ಒಂದು ಘಟನೆ ನಡೆಯಿತು.
ಐಪಿಎಲ್ 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೀಗ್ ಹಂತದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮೈದಾನದಲ್ಲಿ ಕೊಳಕು ಜಗಳದಲ್ಲಿ ಭಾಗಿಯಾಗಿದ್ದರು.

ಇಬ್ಬರೂ ಬಿಸಿಯಾದ ವಾಗ್ವಾದದಲ್ಲಿ ತೊಡಗಿದ್ದರು, ತಮ್ಮ ಸಹ ಆಟಗಾರರಿಂದ ಬೇರ್ಪಡುವ ಮೊದಲು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
2023ರಲ್ಲಿ ಲಕ್ನೋ ಸೂಪರ್ ಜೈಂಟ್ಟ್ ಮೆಂಟರ್ ಆಗಿದ್ದಾಗ, ತಮ್ಮ ತಂಡದ ಆಟಗಾರ ಹಾಗೂ ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಜಗಳವಾಡಿದಾಗ ಗೌತಮ್ ಗಂಭೀರ್ ಕೂಡ ಪ್ರವೇಶಿಸಿ ಅವರ ಪೈಪೋಟಿಯನ್ನು ಮತ್ತೊಮ್ಮೆ ಮುಂದುವರೆಸಿದರು.
ಇನ್ನು 2024ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಹೆಚ್ಚು ನಿರೀಕ್ಷಿತ ಹೈ-ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗುತ್ತಿರುವಾಗ, ಗೌತಮ್ ಗಂಭೀರ್ ನಿಂತಿರುವ ಕಡೆಗೆ ವಿರಾಟ್ ಕೊಹ್ಲಿ ಕೆಣಕಿ ನೋಡುತ್ತಿರುವ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಆರ್‌ಸಿಬಿ ಮತ್ತು ಕೆಕೆಆರ್ ಪಂದ್ಯವು ರೋಚಕತೆಯಿಂದ ಕೂಡಿರಲಿದ್ದು, ಶುಕ್ರವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮಿಂಚಲು ಅನೇಕ ಸ್ಟಾರ್ ಆಟಗಾರರು ಸಿದ್ಧರಾಗಿದ್ದಾರೆ. ಅವರಲ್ಲಿ ಒಬ್ಬರು ಆಂಡ್ರೆ ರಸೆಲ್ ಅವರು ಕೆಕೆಆರ್ ತಂಡದ ಆರಂಭಿಕ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಆಂಡ್ರೆ ರಸೆಲ್ ಎದುರಾಳಿಗಳಿಗೆ ಆರಂಭಿಕ ಸ್ಫೋಟಕ ಬ್ಯಾಟಿಂಗ್ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಆರಂಭಿಕ ಐಪಿಎಲ್ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 64 ರನ್ ಗಳಿಸಿದರು.
ಇದಕ್ಕೆ ವ್ಯತಿರಿಕ್ತವಾಗಿ, ಐಪಿಎಲ್ 2023ರಲ್ಲಿ ಆಂಡ್ರೆ ರಸೆಲ್ ಕಳಪೆ ಪ್ರದರ್ಶನ ಹೊಂದಿದ್ದರು, ಆಡಿದ 14 ಪಂದ್ಯಗಳಿಂದ ಕೇವಲ 227 ರನ್‌ಗಳನ್ನು ಗಳಿಸಿ ಮತ್ತು ಏಳು ವಿಕೆಟ್‌ಗಳನ್ನು ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications