ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಆನ್ ದಿ ಫೀಲ್ಡ್ ಗಿಂತ್, ಆಫ್ ದಿ ಫೀಲ್ಡ್ ಹೆಚ್ಚು ಜನರನ್ನು ಆಕರ್ಷಿಸಿದೆ. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ಹಾಗೂ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ಇಬ್ಬರು ಮೈದಾನಕ್ಕೆ ಇಳಿಯುತ್ತಿದ್ದಾರೆ ಎಂದರೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇದ್ದೇ ಇರುತ್ತದೆ.
ಈ ಹಿಂದೆ ಇಬ್ಬರೂ ಆಟಗಾರರ ನಡುವೆ ಮುಖಾಮುಖಿ ಆಗಿದ್ದಾಗ ಮಾತಿನ ಚಕಮಕಿ ನಡೆದಿದೆ. ಐಪಿಎಲ್‌ನಲ್ಲೇ ಎದುರಾದಾಗ ಇಬ್ಬರ ನಡುವಿನ ಹೀಟ್ ಇದ್ದೇ ಇರುತ್ತದೆ. ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಮುಖಾಮುಖಿ ಆಗಲಿವೆ. ಇವರಿಬ್ಬರ ನಡುವಿನ ಕಾಳಗ ಐಪಿಎಲ್ ವಿವಾದಗಳ ಪುಟವನ್ನು ಸೇರಿದೆ. ಹಾಗಿದ್ದರೆ ಈ ಇಬ್ಬರು ಸ್ಟಾರ್ ಆಟಗಾರರ ನಡುವಿನ ಬಿರುಕು ಉಂಟಾಗಲು ಕಾರಣವೇನು ಎಂಬ ಬಗ್ಗೆ ವರದಿ ಇಲ್ಲಿದೆ.

ದೆಹಲಿಯ ಕೊಹ್ಲಿ ಮತ್ತು ಗಂಭೀರ್ ನಡುವಿನ ಸಂಬಂಧ ಒಂದು ಹಂತದವರೆಗೆ ಚೆನ್ನಾಗಿತ್ತು. ಗಂಭೀರ್ ಒಮ್ಮೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಹಿರೀಮೆ ಮೆರೆದಿದ್ದರು. ಗಂಭೀರ್ ಡಿಸೆಂಬರ್ 2009 ರಲ್ಲಿ ಶ್ರೀಲಂಕಾ ವಿರುದ್ಧ 150 ರನ್‌ಗಳ ಇನ್ನಿಂಗ್ಸ್ ಕಟ್ಟಿದ್ದರು. ಹೀಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದೇ ಪಂದ್ಯದಲ್ಲಿ ವಿರಾಟ್ ಸೆಂಚೂರಿ ಬಾರಿಸಿದ್ದರು. ಈ ಪ್ರಶಸ್ತಿಯನ್ನು ಯುವ ಆಟಗಾರ ವಿರಾಟ್‌ಗೆ ಹಸ್ತಾಂಸರಿಸಿದರು. ಎಲ್ಲವೂ ಚೆನ್ನಾಗೆ ಇತ್ತು. ಆದರೆ ಐಪಿಎಲ್ 2013 ರಿಂದ ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು.
2013ರಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಬೆಂಗಳೂರಿನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಗಂಭೀರ್ ಮುನ್ನಡೆಸಿದರೆ, ಆರ್‌ಸಿಬಿ ತಂಡವನ್ನು ವಿರಾಟ್ ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಔಟಾದ ಬಳಿಕ ಗಂಭೀರ್ ಏನೋ ಹೇಳಿದ್ದಾರಂತೆ. ಇದು ಇಷ್ಟವಾಗದ ಕೊಹ್ಲಿ ಕೋಪದಿಂದ ಹಿಂದೆ ಸರಿದು, ತೀವ್ರ ವಾಗ್ವಾದ ನಡೆಯಿತು. ಈ ವೇಳೆ ರಜತ್ ಭಾಟಿ ಮಧ್ಯ ಪ್ರವೇಶಿಸಿದರು. ಈ ಘಟನೆಯೆ ಇಬ್ಬರ ಸಂಬಂಧಕ್ಕೆ ಹುಳಿ ಹಿಂಡಿದಂತಿದೆ.

ಇಲ್ಲಿಂದ ಇವರಿಬ್ಬರ ನಡುವಿನ ಜಟಾಪಾಟಿ ಭಾರೀ ಸದ್ದು ಮಾಡುತ್ತಲೇ ಇತ್ತು. ಇನ್ನು ಇವರಿಬ್ಬರು ಒಂದೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡರೆ ಹೇಗೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆ ಕಾಲದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಂಡದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಲೇ ಸಾಗಿದರು. ಇನ್ನು ಗೌತಮ್ ಗಂಭೀರ್ ಅವರ ಕಳಪೆ ಫಾರ್ಮ್ ಅವರನ್ನು ಕಡೆಗಣಿಸುವಂತೆ ಮಾಡಿತು. 2014-15ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೊಹ್ಲಿ ಟೆಸ್ಟ್ ನಾಯಕರಾದಾಗ ಗಂಭೀರ್ ಅವರನ್ನು ಕಡೆಗಣಿಸಿದ್ದರು. ಗಂಭೀರ್ ಅವರ ಕಳಪೆ ಫಾರ್ಮ್ ಕೂಡ ಇಲ್ಲದೇ ಇರುವುದು ದೊಡ್ಡ ಕಾರಣವಾಗಿದೆ.
ಲಖ್ನೋ ಹಾಗೂ ಆರ್‌ಸಿಬಿ ತಂಡಗಳು ಲಖ್ನೋ ಅಂಗಳದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವೆ ಕೆಲ ಕಾಲ ವಾಗ್ವಾದ ನಡೆದಿತ್ತು. ಪಂದ್ಯ ಮುಗಿದ ಬಳಿಕ ಇಬ್ಬರೂ ಆಟಗಾರರು ಕೈಕೈ ಮಿಲಾಯಿಸುವ ತನಕ ಈ ಸನ್ನಿವೇಶ ಕ್ಯಾರಿ ಆಗಿತ್ತು. ಪಂದ್ಯದ ಬಳಿಕ ಅಭಿಮಾನಿಗಳ ದೃಷ್ಟಿ ಕದ್ದ ದೃಶ್ಯವಿದು. ಈ ವಾಗ್ವಾದ ನಡೆದಿದ್ದಾಗ ಗೌತಮ್ ಗಂಭೀರ್ ಸಹ ಎಂಟ್ರಿ ನೀಡಿದ್ದರು. ಇಲ್ಲಿಂದ ಈ ಚಿತ್ರವೇ ಸುದ್ದಿಗೆ ಆಹಾರವಾಯಿತು.