Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಪಂದ್ಯದ ಸಮಯ, ಪಿಚ ವರದಿ, ನೇರ ಪ್ರಸಾರ, ಪ್ಲೇಯಿಂಗ್ ಇಲೆವೆನ್‌ ಮಾಹಿತಿ

ಬೆಂಗಳೂರು: ಎಂ ಚಿನ್ನಸ್ವಾಮಿ ಮೈದಾನ ಮತ್ತೊಮ್ಮೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಬುಧವಾರ ಈ ಮೈದಾನದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆಸೆ ಎರಡೂ ತಂಡಗಳದ್ದಾಗಿದೆ. ಆರ್‌ಸಿಬಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರದ ಪ್ರದರ್ಶನ ನೀಡುವ ಪ್ಲ್ಯಾನ್ ಮಾಡಿಕೊಂಡಿದೆ.

ಆರ್‌ಸಿಬಿ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಈಗ ತವರಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲು ಯೋಜನೆ ರೂಪಿಸಿಕೊಂಡಿದೆ.

RCB vs LSG

ಆರ್‌ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದು, ಎಲ್ಲರ ಗಮನ ಸೆಳೆದಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದ್ದರಿಂದ ಈ ಆಟಗಾರರ ಮೇಲೆ ಭರವಸೆ ಹೆಚ್ಚಿದೆ.

ಪಿಚ್ ವರದಿ

ಚೆನ್ನೈ ವಿರುದ್ಧ ಆರ್‌ಸಿಬಿ ಆಡಿದ ಪಿಚ್‌ ಮೇಲೆ ಲಕ್ನೋ ವಿರುದ್ಧದ ಪಂದ್ಯವೂ ನಡೆಯಲಿದೆ. ಈ ಪಿಚ್‌ ಸಹ ಬ್ಯಾಟಿಂಗ್‌ಗೆ ತುಂಬ ಪೂರಕವಾಗಿದೆ ಎಂದು ಕಾಣುತ್ತದೆ. ಇಬ್ಬನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಬ್ಬನಿ ಕಡಿಮೆ ಮಾಡಲು ಮೈದಾನದ ಸಿಬ್ಬಂದಿಗಳು 'ಆಂಟಿ-ಡ್ಯೂ ಸ್ಪ್ರೇ' ಬಳಸಲು ಯೋಜಿಸಿದ್ದಾರೆ.

ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ?

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಸುಯಶ್ ಶರ್ಮಾ, ರಸಿಖ್ ದಾರ್.

ಅಂಕ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ

ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಆಡಿದ 4 ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಬೆಂಗಳೂರು 6 ಅಂಕ ಕಲೆ ಹಾಕಿದೆ. ಎಲ್‌ಎಸ್‌ಜಿ ಲೀಗ್‌ನಲ್ಲಿ ಇಷ್ಟೇ ಪಂದ್ಯಗಳನ್ನು ಆಡಿದ್ದು 2 ಜಯವನ್ನು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಎಲ್‌ಎಸ್‌ಜಿ ಈ ಆಟಗಾರರಿಗೆ ಅವಕಾಶ ಸಾಧ್ಯತೆ

ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಆಯುಷ್ ಬದೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ದಿಗವೇಶ್ ರಾಠಿ, ಆವೇಶ್ ಖಾನ್/ಮಯಾಂಕ್ ಯಾದವ್, ಪ್ರಿನ್ಸ್ ಯಾದವ್, ಶಹಬಾಜ್ ಅಹ್ಮದ್/ಎಂ ಸಿದ್ದಾರ್ಥ್.

ಆರ್‌ಸಿಬಿ, ಎಲ್‌ಎಸ್‌ಜಿ ನಡುವಣ ಪಂದ್ಯವನ್ನು ಎಲ್ಲಿ ನೋಡಬಹುದು?

19ನೇ ಆವೃತ್ತಿ ಐಪಿಎಲ್‌ನ 23ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವೆ ನಡೆಯಲಿದ್ದು, ಈ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಆರ್‌ಸಿಬಿ, ಎಲ್‌ಎಸ್‌ಜಿ ಪಂದ್ಯ ಆರಂಭವಾಗುವುದು ಯಾವಾಗ?

ಆರ್‌ಸಿಬಿ, ಎಲ್‌ಎಸ್‌ಜಿ ಪಂದ್ಯ ಸಂಜೆ 7.30ಕ್ಕೆ ನಡೆಯಲಿದೆ. ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

ಆರ್‌ಸಿಬಿ, ಎಲ್‌ಎಸ್‌ಜಿ ನಡುವಣ ಅಂಕಿ ಅಂಶಗಳು ಹೇಗಿವೆ?

ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 6 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 4, ಎಲ್‌ಎಸ್‌ಜಿ 2 ಪಂದ್ಯ ಗೆದ್ದಿದೆ.

Story first published: Wednesday, April 15, 2026, 8:12 [IST]
Other articles published on Apr 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+