Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮ್ಮದೇ ದಾಖಲೆ ಮುರಿದು ಐಪಿಎಲ್ 2024ರ ಅತಿ ವೇಗದ ಎಸೆತ ದಾಖಲಿಸಿದ ಮಯಾಂಕ್ ಯಾದವ್

ಮಂಗಳವಾರ, ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 28 ರನ್‌ಗಳ ಅಮೋಘ ಗೆಲುವು ದಾಖಲಿಸಿತು.

ಇದೇ ವೇಳೆ ವೇಗಿ ಮಯಾಂಕ್ ಯಾದವ್ ಆರ್‌ಸಿಬಿ ತಂಡದ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವಿನ ಮುನ್ನುಡಿ ಬರೆದರು ಮತ್ತು ತಮ್ಮ ಅದ್ಭುತ ಬೌಲಿಂಗ್ ಫಾರ್ಮ್ ಮುಂದುವರೆಸಿದರು.

RCB vs LSG Mayank Yadav Broke His Own Record and Bowled Fastest Delivery of IPL 2024

ಕೆಲವೇ ದಿನಗಳ ಹಿಂದೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 155.8 kmph ವೇಗದ ಬೌಲ್ ಮಾಡಿದ್ದ ಮಯಾಂಕ್ ಯಾದವ್, ಐಪಿಎಲ್ 2024ರ ಅತಿ ವೇಗದ ಎಸೆತವನ್ನು 156.7 kmph ನಲ್ಲಿ ಬೌಲ್ ಮಾಡುವ ಮೂಲಕ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು.

ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ ಅನ್ನು ಸಂಪೂರ್ಣವಾಗಿ ನಾಶಪಡಿಸಲು ಮಯಾಂಕ್ ಯಾದವ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಎಲ್‌ಎಸ್‌ಜಿ ವೇಗಿ ಮಯಾಂಕ್ ಯಾದವ್ ಪ್ರಸ್ತುತ ಐಪಿಎಲ್ 2024ರ ಅತಿ ವೇಗದ ಎಸೆತವನ್ನು ಎಸೆದ ದಾಖಲೆಯನ್ನು ಹೊಂದಿದ್ದಾರೆ. ಅವರ ನಂತರ ರಾಜಸ್ಥಾನ್ ರಾಯಲ್ಸ್‌ನ ನಾಂದ್ರೆ ಬರ್ಗರ್ (153), ಮುಂಬೈ ಇಂಡಿಯನ್ಸ್‌ನ ಜೆರಾಲ್ಡ್ ಕೋಟ್ಜಿ (152.3), ಅರ್‌ಸಿಬಿಯ ಅಲ್ಜಾರಿ ಜೋಸೆಫ್ (151.2) ಮತ್ತು ಸಿಎಸ್‌ಕೆ ತಂಡದ ಮಥೀಶ ಪತಿರಾನ (150.9) ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ.

RCB vs LSG Mayank Yadav Broke His Own Record and Bowled Fastest Delivery of IPL 2024

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧಶತಕ ಮತ್ತು ವೇಗಿ ಮಯಾಂಕ್ ಯಾದವ್ ಅವರು ಬೌಲಿಂಗ್‌ನಲ್ಲಿ ಮಿಂಚಿದ್ದರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 28 ರನ್‌ಗಳ ಅದ್ಭುತ ಗೆಲುವು ಸಾಧಿಸಿ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಕಿಂಗ್ಸ್ ತಂಡ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಅರ್ಧಶತಕದ ಸಹಾಯದಿಂದ ನಿಗದಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆಹಾಕಿತ್ತು.

182 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡದ ಯಾವುದೇ ಬ್ಯಾಟರ್‌ಗಳಿಂದ ದೊಡ್ಡ ಇನ್ನಿಂಗ್ಸ್ ಬರದ ಕಾರಣ, 19.4 ಓವರ್‌ಗಳಲ್ಲಿ ಕೇವಲ 153 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು ತವರಿನ ಅಂಗಳದಲ್ಲಿ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಂದುವರೆದಿದೆ.

Story first published: Wednesday, April 3, 2024, 10:38 [IST]
Other articles published on Apr 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+