RCB vs LSG: ರಜತ್ ಪಾಟಿದಾರ್ ಸ್ಪೋಟಕ ಶತಕಕ್ಕೆ ಕ್ರಿಕೆಟ್ ದಿಗ್ಗಜರಿಂದ ಶ್ಲಾಘನೆ

ಐಪಿಎಲ್ 15ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಪರವಾಗಿ ಯುವ ಬ್ಯಾಟರ್ ರಜತ್ ಪಾಟಿದಾರ್ ಅದ್ಭುತ ಪ್ರದರ್ಶನ ನೀಡಿದ್ದು ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ದಾಖಲಿಸಿದ್ದಾರೆ. ಈ ಮೂಲಕ ಆರ್‌ಸಿಬಿ ತಮಡದ ಬೃಹತ್ ಮೊತ್ತಕ್ಕೆ ಪಾಟಿದಾರ್ ಕಾರಣವಾಗಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಗೋಲ್ಡನ್ ಡಕ್‌ಗೆ ಬಲಿಯಾಗುವ ಮೂಲಕ ಆಘಾತ ಅನುಭವಿಸಿತು. ನಂತರ ವಿರಾಟ್ ಕೊಹ್ಲಿ 25 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಮತ್ತೊಂದು ತುದಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಜತ್ ಪಾಟಿದಾರ್ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ್ದರು.
ಮಹುಪಾಲ್ ಲೋಮ್ರೊರ್ ಅವರಿಂದಲೂ ಪಾಟಿದಾರ್‌ಗೆ ಹೆಚ್ಚಿನ ಜೊತೆಯಾಟ ದೊರೆಯಲಿಲ್ಲ. 14 ರನ್‌ಗಳಿಸಿದ ಬಳಿಕ ಲೋಮ್ರೋರ್ ವಿಕೆಟ್ ಕಳೆದುಕೊಂಟಾಗ ಆರ್‌ಸಿಬಿ 115 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ನಂತರ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಎಲ್‌ಎಸ್‌ಜಿ ಬೌಲರ್‌ಗಳನ್ನು ಅಂಗಳದ ಸುತ್ತಲೂ ಅಟ್ಟಾಡಲು ಆರಂಭಿಸಿದರು. ಅದರಲ್ಲೂ ರಜತ್ ಪಾಟಿದಾರ್ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈಯಲು ಆರಂಭಿಸಿದರು.
ಈ ಪಂದ್ಯದಲ್ಲಿ ರಜತ್ ಪಾಟಿದಾರ್ 12 ಬೌಂಡರಿ ಸಿಡಿಸಿದ್ದರೆ 7 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಒಟ್ಟು 54 ಎಸೆತಗಳನ್ನು ಎದುರಿಸಿದ ರಜತ್ ಪಾಟಿದಾರ್ ಭರ್ಜರಿ 112 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಪಾಟಿದಾರ್ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿ ಮಿಂಚಿದ್ದಾರೆ. ಇನ್ನು ಪ್ಲೇಆಫ್‌ನಲ್ಲಿ ಆರ್‌ಸಿಬಿ ಪರವಾಗಿ ದಾಖಲಾದ ಮೊದಲ ಶತಕವೂ ಇದಾಗಿದೆ. ಇನ್ನು ಈ ಪಂದ್ಯದಲ್ಲಿ ಮತ್ತೊಂದು ತುದಿಯಲ್ಲಿ ಅಜೇಯವಾಗುಳಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 37 ರನ್‌ಗಳಿಸಿದರು. ಈ ಮೂಲಕ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಇನ್ನು ಆರ್‌ಸಿಬಿ ತಂಡದ ಯುವ ಆಟಗಾರ ರಜತ್ ಪಾಟಿದಾರ್ ಅವರ ಈ ಅಮೋಘ ಶತಕಕ್ಕೆ ಕ್ರಿಕೆಟ್ ಅಭಿಮಾನಿಗಳು ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆರ್‌ಸಿಬಿ ತಮಡದ ಅಭಿಮಾನಗಳಿಂದ ಪಾಟಿದಾರ್‌ಗೆ ಭಾರೀ ನೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅಭಿಮಾಣಿಗಳು ಮಾತ್ರವಲ್ಲದೆ ಕ್ರಿಕೆಟ್ ದಿಗ್ಗಜರು ಕೂಡ ಪಾಟಿದಾರ್‌ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications